ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲಿ :ಸಚಿವ ಎಂ. ಬಿ. ಪಾಟೀಲ

ವಿಜಯಪುರ, ಡಿ. 21:ವಿಜಯೇಂದ್ರ ಇಸ್ ಔಟ್ ಗೋಯಿಂಗ್ ಬಿಜೆಪಿ ಸ್ಟೇಟ್ ಪ್ರೆಸಿಡೆಂಟ್. ಯಾವುದೇ ಸಮಯದಲ್ಲಿ ವಿಜಯೇಂದ್ರ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿ ಹೋಗುತ್ತದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಇಂದಿಲ್ಲಿ ಟಾಂಗ್ ನೀಡಿದರು.
ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಎಂದ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತಿದ್ದರು.
ವಿಜಯೇಂದ್ರ ಅವರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಶೀಘ್ರದಲ್ಲೇ ಕೈ ಬಿಟ್ಟು ಹೋಗುತ್ತಿದೆ. ಅವರು ಇನ್ನೊಬ್ಬರ ಕುರ್ಚಿ ಬಗ್ಗೆ ಚಿಂತೆ ಮಾಡುವುದು ಬಿಟ್ಟು ತಮ್ಮ ಕುರ್ಚಿ ಉಳಿಸಿಕೊಳ್ಳಲಿ ಎಂದರು.
ಸಿಎಂ ಅಧಿಕಾರ ಹಂಚಿಕ ಕುರಿತು ನಾನೇನೂ ಮಾತನಾಡಲ್ಲ. ಹೈಕಮಾಂಡ್ ಈ ವಿಷಯದಲ್ಲಿ ಅಂತಿಮ. ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿಎಂ ಡಿಸಿಎಂ ಹಾಗೂ ನಾನೂ ಸೇರಿದಂತೆ ಎಲ್ಲ ಕಾಂಗ್ರೆಸ್ಸಿಗರು ಬದ್ಧರಾಗಿರುತ್ತೇವೆ ಎಂದು ನುಡಿದರು.
ಬೆಳಗಾವಿಯ ಅಧಿವೇಶನ ಡಿನ್ನರ್ ಅಧಿವೇಶನ ಎಂದ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ, ಬಿಜೆಪಿಯವರು ತಮ್ಮ ತಮ್ಮವರ ಜೊತೆಯಲ್ಲಿ ಊಟ ಮಾಡಿರುತ್ತಾರೆ. ಅದೇ ರೀತಿ ಕಾಂಗ್ರೆಸ್ಸಿಗರು ತಮ್ಮ ತಮ್ಮವರ ಜೊತೆ ಊಟ ಮಾಡಿದರೆ ತಪ್ಪೇನಿಲ್ಲ ಎಂದರು.