ವಿಜಯಪುರ, ಜೂ. 13: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶರೀರವಿಜ್ಞಾನ ವಿಭಾಗದ ಯೋಗ ಮತ್ತು ವ್ಯಾಯಾಮ ವಿಜ್ಞಾನ ಕೇಂದ್ರದಲ್ಲಿ ಯೋಗ ಸಂಗಮ: ಯೋಗ ಸಮಾವೇಶ ಶಿರ್ಷಿಕೆಯಡಿ 12 ದಿನಗಳ ವಿಶೇಷ ಯೋಗ ಕಾರ್ಯಕ್ರಮ ಬುಧವಾರ ಪ್ರಾರಂಭವಾಯಿತು.
ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮತ್ತು ಕೇಂದ್ರ ಆಯುಷ್ ಸಚಿವಾಲಯ ಸಹಯೋಗದಲ್ಲಿ ಪ್ರಾರಂಭವಾಗಿರುವ ಈ ಶಿಬಿರದಲ್ಲಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ಪಾಲ್ಗೋಂಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಾಮಾನ್ಯ ಯೋಗ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಯೋಗ ಶಿಕ್ಷಕರಾದ ಮಡಿವಾಳಪ್ಪ ದೊಡ್ಡಮನಿ ಮತ್ತು ಕಾರ್ಯಕ್ರಮ ಸಂಯೋಜಕಿ ಡಾ. ಜ್ಯೋತಿ ಖೋದ್ನಾಪುರ ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
ಇದೇ ತಿಂಗಳು ಜೂ. 21 ರಂದು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ “ಒಂದು ಭೂಮಿ, ಒಂದು ಆರೋಗ್ಯ”- ಎಂಬ ಥೀಮ್ ದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಯಲಿದೆ.