ವಿಜಯದಶಮಿ ಕಾರ್ಯಕ್ರಮ


ಹುಬ್ಬಳ್ಳಿ,ಅ.೪: ಅರವಿಂದನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ವಿಜಯದಶಮಿಯಂದು ಶ್ರೀ ಹುಲಿಗೆಮ್ಮದೇವಿಯವರಿಗೆ ಮಹಾಭಿಷೇಕ ಗೈದು ಉದಯಪೂಜೆ ನೆರವೇರಿಸಲಾಯಿತು. ನಂತರ ಪಲ್ಲಕ್ಕಿಯಲ್ಲಿ ಶ್ರೀ ಹುಲಿಗೆಮ್ಮದೇವಿಯವರ ಉತ್ಸವಮೂರ್ತಿಯನ್ನಿರಿಸಿ, ಬೆಳಿಗ್ಗೆ ಭವ್ಯ ಮೆರವಣಿಗೆಯು ಹೊರಟು ಅರವಿಂದನಗರದ ಕೆ.ಎಚ್.ಬಿ. ಕಾಲೊನಿಯಲ್ಲಿರುವ ಶ್ರೀ ಬನ್ನಿಮಹಾಂಕಾಳಿಯವರ ದೇವಸ್ಥಾನಕ್ಕೆ ಹೋಗಿ ಪೂಜೆಕೈಂಕರ್ಯಗಳನ್ನು ನೆರವೇರಿಸಿ ಬನ್ನಿ ಮುಡಿದು ಪುನಃ ಮೂಲ ದೇವಸ್ಥಾನಕ್ಕೆ ಆಗಮಿಸಿತು. ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ನವರಾತ್ರಿಯಲ್ಲಿ ಜರುಗಿದ `ಶ್ರೀ ದೇವಿ ಮಹಾತ್ಮೆ ಪುರಾಣ’ವನ್ನು ಮಂಗಲ ಮಾಡಿದರು. ನಂತರ ಶ್ರೀ ದೇವಿಯವರಿಗೆ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಸಂಜೆ ದೇವಿಯವರಿಗೆ ಮಹಾ ಪೂಜೆಯ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ದಸರಾಮಹೋತ್ಸವ ಕಾರ್ಯಕ್ರಮಗಳು ಸಮಾರೋಪಗೊಂಡವು.


ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ಕೆ.ಕೆ.ಮುಳಗುಂದ, ಎಚ್.ಬಿ ಧೂಪದ, ಬಸವಂತಪ್ಪ ಅನವಾಲ, ಅರುಣಕುಮಾರ ಹೆಬ್ಬಳ್ಳಿ, ಪ್ರಕಾಶ ಅರಗಂಜಿ, ಶ್ರೀಧರ ಮಗಜಿಕೊಂಡಿ, ಲಕ್ಷö್ಮಣ ವಡ್ಡರ, ಪರಶುರಾಮ ಸುಳ್ಳದ, ಸಂದೀಪ ಬೇವಿನಕಟ್ಟಿ, ಯಲ್ಲಪ್ಪ ಕೊಸಗಿ, ಗುರುನಾಥ ಗಾಂವಕರ, ರವಿ ದಾಗಿನದಾರ, ಮುಲ್ಲು ಅನಂತಪುರ, ಮೋಹನ ಪವಾರ, ಕಿರಣ ಮೇತ್ರಾಣಿ, ಗೋಪಾಲ ಶೆಲ್ಲಿಕೇರಿ, ಆನಂದ ಬಾರಕೇರ, ಶ್ರೀಮತಿ. ಶಾರದಮ್ಮ ಕಸ್ತೂರಿ, ನಾಗರತ್ನ ಹೆಬ್ಬಳ್ಳಿ, ಆಶಾ ರಜಪೂತ, ಯೋಗಿಣಿ ಶೆಲ್ಲಿಕೆರಿ, ವಿದ್ಯಾ ದಾಗಿನದಾರ, ರೇಖಾ ಸುಳ್ಳದ, ಸೇರಿದಂತೆ ನೂರಾರು ಸದ್ಭಕ್ತರು ಆಗಮಿಸಿದ್ದರು.