
ಕಲಬುರಗಿ,ಡಿ.೨೫-ತಾಲ್ಲೂಕಿನ ಝಾಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಸಾಯಬಣ್ಣ ತಳವಾರ ಅವರ ಅನುದಾನದಲ್ಲಿ ೨೨ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯಾವಿಕಾಸ ಭವನ ಉದ್ಘಾಟನಾ ಸಮಾರಂಭದ ದಿನಾಂಕ ನಿಗದಿ ಮಾಡುವ ಕುರಿತು ಶಾಲೆಯಲ್ಲಿ ಸಭೆ ನಡೆಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ದೇವಿಂದ್ರಪ್ಪ ಗಣಮುಖಿ, ಎಸ್‌ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಪೂಜಾರಿ, ಉಪಾಧ್ಯಕ್ಷರಾದ ಶಿವಲೀಲಾ ನಾಯಕೋಡಿ, ಎಸ್‌ಡಿಎಂಸಿಯ ಇನ್ನುಳಿದ ಸದಸ್ಯರು, ಸಹ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಜರುಗಿತು.
ಶೀಘ್ರದಲ್ಲಿ ವಿದ್ಯಾವಿಕಾಸ ಭವನ ಉದ್ಘಾಟನಾ ಸಮಾರಂಭದ ದಿನಾಂಕ ನಿಗದಿ ಮಾಡುವ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
























