
ಬೀದರ್:ಡಿ.೬: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ನೂತನ ಅಧ್ಯಕ್ಷರಾಗಿ ಡಾ. ವಿದ್ಯಾ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಡಾ. ದಿಲೀಪಕುಮಾರ ಕಮಠಾಣೆ ಆಯ್ಕೆಯಾಗಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ೨೦೨೫-೨೦೨೮ನೇ ಸಾಲಿನ ಅವಧಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು.
ಖಜಾಂಚಿಯಾಗಿ ಡಾ. ಸುಮನ್ ಸಿಂಧೆ ಆಯ್ಕೆಯಾದರು.
ಆಯ್ಕೆಯಾದ ನೂತನ ಸದಸ್ಯರಲ್ಲಿ ಡಾ. ವೈಜಿನಾಥ ಕಮಠಾಣೆ, ಶಿವರಾಜ ಪಾಟೀಲ, ಸಂಗಮೇಶ ನೇಳಗೆ, ಧನರಾಜ ಪಾಟೀಲ, ಮುಹಮ್ಮದ್ ಯುನೂಸ್, ಡಾ. ವೀರಶೆಟ್ಟಿ ಮೈಲೂರಕರ್ ಮತ್ತು ಡಾ. ವಿನೋದಕುಮಾರ ಭೂರಾಳೆ ಸೇರಿದ್ದಾರೆ.
ಚುನಾವಣಾಧಿಕಾರಿಯಾಗಿದ್ದ ಶಕೀಲ್ ಅಹಮ್ಮದ್ ಆಯ್ಕೆಯನ್ನು ಪ್ರಕಟಿಸಿದರು. ಸಂಸ್ಥೆಯ ಜಿಲ್ಲಾ ಶಾಖೆಯ ಗೌರವಾಧ್ಯಕ್ಷೆ ಶಿಲ್ಪಾ ಶರ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ, ಸಂಸ್ಥೆಯ ರಾಜ್ಯ ಪ್ರತಿನಿಧಿ ವೈಜಿನಾಥ ಕಮಠಾಣೆ ಮತ್ತಿತರರು ಇದ್ದರು.































