ಜಮಖಂಡಿ:ಸೆ.10:ಯುವತಿಯನ್ನು ಚುಡಾಯಿಸುತ್ತಿ ಎಂದು ಆರೋಪಿಸಿ ವ್ಯಕ್ತಿಯನ್ನ ನಾಲ್ವರ ತಂಡ ಕಬ್ಬಿನದ ಪಾನಾ(ರಾಡ್)ಗಳಿಂದ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಜಮಖಂಡಿ ನಗರದಲ್ಲಿ ನಡೆದಿದ್ದು, ಅದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಕೂಡ ಆಗಿದೆ.
ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ನಿವಾಸಿ ಶಂಭು ಪುಂಡಲಿಕ ಕೋರಿ ಎನ್ನುವ ವ್ಯಕ್ತಿಗೆ ಕೆಲ ವ್ಯಕ್ತಿಗಳು ನಮ್ಮ ಮನೆಯ ಹುಡುಗಿಯನ್ನ ಚುಡಾಯಿಸುತ್ತಿ ಎಂದು ಆರೋಪ ಹೊರಸಿ, ದೂರವಾಣಿ ಕರೆ ಮಾಡಿ ಜಮಖಂಡಿ ನಗರದ ಬಿ.ಎಲ್.ಡಿ ಕಾಲೇಜಿನ ಹಿಂಬದಿಯ ಕರೆಯಿಸಿ ಮನಸೊ ಇಚ್ಚೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ 7 ರಂದು ಈ ಘಟನೆ ಜರುಗಿದ್ದು ಹಲ್ಲೆಗೆ ಒಳಗಾದ ವ್ಯಕ್ತಿಯೇ ಜಮಖಂಡಿ ಶಹರ ಪೆÇೀಲಿಸ ಠಾಣೆಯಲ್ಲಿ ಕಂಕಣವಾಡಿ ಗ್ರಾಮದ ನರಸಿಂಹ ಬಸಪ್ಪ ಅತ್ತೆಪ್ಪನವರ, ಶ್ರೀಶೈಲ ಅತ್ತೆಪ್ಪನವರ, ಮಲ್ಲಪ್ಪ ಅತ್ತೆಪ್ಪನವರ, ಬಸು ಅತ್ತೆಪ್ಪನವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದಾದ ಬಳಿಕ ಚುಡಾಯಿಸುತ್ತಿದ್ದ ವ್ಯಕ್ತಿ ಇವರಲ್ಲ ಎಂದು ಗೊತ್ತಾದ ಮೇಲೆ ಹಲ್ಲೆ ಮಾಡಿದವರು ಕ್ಷಮೆ ಯಾಚಿಸಿ ಪ್ರಕರಣ ಹಿಂದೆ ತೆಗಿದು ಕೊಳ್ಳವಂತೆ ಒತ್ತಾಯಿಸುತಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಶಂಭು ಕೋರಿ ಅವರು ಹೇಳಿಕೊಂಡಿದ್ದಾರೆ .

























