
ಸಂಜೆ ವಾಣಿ ವಾರ್ತೆ
ಜಮಖಂಡಿ:ನ.೨೬: ಮಕ್ಕಳನ್ನು ಅಣಿಗೊಳಿಸಿ ಅವರ ಪ್ರತಿಭೆಯನ್ನು ಅನಾವರಣ ಗೊಳಿಸುವ ಕಾರ್ಯಕ್ರಮವೇ ಪ್ರತಿಭಾ ಕಾರಂಜಿ.ಮಕ್ಕಳು ಸ್ಪರ್ಧೆಗಳಲ್ಲಿ ಅಂಜದೆ, ಅಳುಕದೆ ಭಾಗವಹಿಸಬೇಕು ಎಂದು ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ ಕಡಕೋಳ ತಿಳಿಸಿದರು.
ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಲಯ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೋಲು ಗೆಲುವು ಮುಖ್ಯವಲ್ಲ ಶಿಕ್ಷಣದ ಮುಖ್ಯ ಉದ್ದೇಶ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುವುದು.ಭಾವಿ ಜೀವನದಲ್ಲಿ ಸಮರ್ಥವಾಗಿ ಜೀವನ ನಡೆಸಿಕೊಂಡು ಹೋಗಲು ಶಿಕ್ಷಣ ಅವಶ್ಯಕ.ನಿರ್ಣಾಯಕರು ನಿಸ್ಪಕ್ಷಪಾತದಿಂದ ನಿರ್ಣಯ ಕೊಟ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಾಲೂಕು ಮಟ್ಟಕ್ಕೆ ಆಯ್ಕೆ ಮಾಡಬೇಕು ಎಂದರು.
ತಾಲೂಕು ವಿಕಲಚೇತನ ಸಂಘದ ಅಧ್ಯಕ್ಷ ಸಿ.ಎಂ ಸಿದಗೊಂಡ ಮಾತನಾಡಿ ಮಕ್ಕಳಲ್ಲಿ ಹುದುಗಿಕೊಂಡಿರುವ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದೆ.ಪಠ್ಯ ಚಟುವಟಿಕೆ ಜೊತೆಗೆ ಸಹಪಠ್ಯ ಚಟುವಟಿಕೆ ಅವಶ್ಯಕತೆ ಓದು ಬರಹದಲ್ಲಿ ಹಿಂದುಳಿದರೆ ಇನ್ನಿತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪ್ರಗತಿ ಪಡೆದಿರುತ್ತಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕ ವಲಯ ಸಂಪನ್ಮೂಲ ವ್ಯಕ್ತಿ ಎಂ.ಆರ್. ಹುಂಡೇಕರ,ಎಚ್ ಡಿಎಂಸಿ ಅಧ್ಯಕ್ಷ ಗೌಡಪ್ಪ ಪಾಟೀಲ, ಪಿಕೆಪಿಎಸ್ ಸದಸ್ಯ ಹನುಮಂತ ತೆಗ್ಗಿ ಮಾತನಾಡಿದರು.ಮುಖ್ಯ ಗುರುಮಾತೆ ಕೆ.ಎಸ್ ನಾಂದ್ರೇಕರ ಸ್ವಾಗತ, ನಿರೂಪಣೆ ಆರ್ ಐ ಬಾಡನವರ, ಸುನಿಲ ಕುಮ್ಮಾರ ವಂದಿಸಿದರು.
ಇದೇ ವೇಳೆ ತಾಲೂಕ ಶಿಕ್ಷಕರ ಸೊಸೈಟಿ ಅಧ್ಯಕ್ಷ ಎನ್.ಎಂ ಮಿರ್ಜಿ,ಶ್ರೀಶೈಲ ಚನ್ನವೀರ,ಜಯವಂತ ತಳವಾರ,ಬಿ.ಬಿ ನ್ಯಾಮಗೌಡ,ಎಂ.ಬಿ ಮಠದ,ಎಸ್. ಎಸ್. ಮಂಟೂರ,ಎಸ್.ಡಿ ದೇವರೆಡ್ಡಿ,ಮಲ್ಲು ತಳವಾರ,ರಮೇಶ ಕಾಳಪ್ಪನವರ, ಯಲ್ಲಾಲಿಂಗ ಸೊರಗಾವಿ,ಹನುಮಂತ ಬರಗಿ,ಹನುಮಂತ ಹೂಗಾರ,ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಇದ್ದರು.

























