ಸೋಲು ಗೆಲವು ಮುಖ್ಯವಲ್ಲ : ಅವಿನಾಶ ಶಿವಣಕರ್

ಕಮಲನಗರ:ಡಿ.26: ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ. ವಿದ್ಯಾರ್ಥಿಗಳು ಮೊದಲು ಆಸಕ್ತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಜಯಂತೋತ್ಸವ ಸಮಿತಿ ಸದಸ್ಯ ಅವಿನಾಶ ಶಿವಣಕರ್ ಹೇಳಿದರು.

ಪಟ್ಟಣದ ಗುರಪ್ಪ ಟೊಣ್ಣೆ ಶಾಲೆಯಲ್ಲಿ ಡಾ. ಚನ್ನಸವ ಪಟ್ಟದ್ದೇವರು 136ನೇ ಜಯಂತೋತ್ಸವ ಅಂಗವಾಗಿ ನಡೆದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದವರೆಲ್ಲ ಗೆಲ್ಲವು ಸಾಧ್ಯವಿಲ್ಲ.ಯಾರಾದರೂ ಒಬ್ಬರು ಮಾತ್ರ ಗೆಲವು ಪಡೆಯಲು ಸಾಧ್ಯ. ಅದೇ ರೀತಿ ಕ್ರೀಡಯಲ್ಲಿಯೂ ಎಲ್ಲರೂ ಗೆಲವು ಸಾಧಿಸಲು ಸಾಧ್ಯವಿಲ್ಲ ಎಂದರು.

ವಿದ್ಯಾರ್ಥಿಗಳು ಆಟದ ಜತೆಗೆ ಓದಿನ ಕಡೆದೂ ಹೆಚ್ಚು ಗಮನ ಕೊಡಬೇಕು. ಕ್ರೀಡೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುತ್ತಿದೆ. ಉತ್ತಮ ಕ್ರೀಡಾಪಟುಗಳಾಗಿ ಕ್ರೀಡೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.

ಆಡಳಿತಾಧಿಕಾರಿ ಚನ್ನಬಸವ ಘಾಳೆ, ಮಾರ್ಗದರ್ಶಕ ಹಿರಿಯ ದೈಹಿಕಶಿಕ್ಷಣ ಶಿಕ್ಷಕ ಪ್ರಕಾಶ ಮಾನಕರಿ, ಉತ್ಸವ ಸಮಿತಿ ಉಪಾಧ್ಯಕ್ಷ ಮಡಿವಾಳಪ್ಪ ಮಹಾಜನ, ಪ್ರಭುರಾವ ಕಳಸೆ, ದೇವಿದಾಸ ಡಾಂಗೆ, ಸಂಗಮೇಶ್ವರ ಉದಗೀರೆ, ಸಂತೋಷ ಸುಲಾಖೆ, ಜ್ಞಾನೇಶ್ವರ ಹಂಡೆ, ಮಹೆಶ ಪಾಟೀಲ, ಭವರಾ ಸರ್, ಸೇರಿದಂತೆ ಡಾ. ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ, ಗೋಲ್ಡನ್ ಹೈಸ್ಕೂಲ, ಶರಣಬಸಪ್ಪ ಪ್ರೌಢ ಶಾಲೆ, ಸರ್ಕಾರಿ ಉರ್ದು ಪ್ರೌಢ ಶಾಲೆ ಮಕ್ಕಳು ಮತ್ತು ವಿವಿಧ ಶಾಲೆ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.