
ಕೊಲ್ಹಾರ: ಜ.17:ಬೃಹನ್ಮುಂಬೈ ಮುನ್ಸಿಪಲ್ ಕಾಪೆರ್Çರೇಷನ್ (ಬಿಎಂಸಿ) ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ-ಶಿವಸೇನಾ ಮೈತ್ರಿಕೂಟ ಅಭೂತ ಪೂರ್ವ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಬಸವನ ಬಾಗೇವಾಡಿ ಮಂಡಲದ ವತಿಯಿಂದ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿಯವರ ನೇತೃತ್ವದಲ್ಲಿ ಬಿ ಜೆ ಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಶುಕ್ರವಾರ ಪಟ್ಟಣದಲ್ಲಿರುವ ದ್ಯಾಮವ್ವ ದೇವಿಗೆ ಪೂಜೆ ಸಲ್ಲಿಸಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿಯವರು ಮಾತನಾಡಿ, ಕಳೆದ 30 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆಯವರ ಶಿವಸೇನಾವು ಮುಂಬೈ ಮಹಾನಗರ ಪಾಲಿಕೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿತ್ತು. ಇಷ್ಟು ದಿನ ಬೇರೆಯಾಗಿದ್ದ ಉದ್ದವ್ ಠಾಕ್ರೆ ಹಾಗೂ ರಾಜ್ ಠಾಕ್ರೆಯವರು ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದ ಸ್ನೇಹವನ್ನು ಕಡೆದುಕೊಂಡು ಶತಾಯಗತಾಯ ಚುನಾವಣೆ ಗೆಲ್ಲಬೇಕೆಂದು ಹೋರಾಟ ಮಾಡಿದ್ದರು ಇಂದು ಅವರ ಕನಸು ಭಗ್ನವಾಗಿದೆ.ಎನ್ ಸಿ ಪಿ ಅಲ್ಪ ಬಹುಮತ ಪಡೆದರೆ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದರು.
ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶಕ್ಕಾಗಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು, ದೇಶ ರಕ್ಷಣೆಯನು ಕಂಡು ಬೃಹನ್ಮುಂಬೈ ಮುನ್ಸಿಪಲ್ ಕಾಪೆರ್Çರೇಷನ್ (ಬಿಎಂಸಿ) ಚುನಾವಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರದಲ್ಲಿ ಅಲ್ಲಿನ ಮತದಾರರು ಭಾರತೀಯ ಜನತಾ ಪಕ್ಷ-ಶಿವಸೇನಾ ಬಣವು ಸುಮಾರು 26 ಮಹಾನಗರ ಪಾಲಿಕೆಯಲ್ಲಿ ಅಭೂತ ಪೂರ್ವ ಬಹುಮತವನ್ನು ಗೆಲವು ಸಾಧಿಸಲು ಕಾರಾಣಿಕರ್ತರಾಗಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ವೇಳೆ ಬಿ ಜೆ ಪಿ ಮುಖಂಡರಾದ ಶೇಖರಯ್ಯ ಗಣಕುಮಾರ, ಚಂದ್ರಶೇಖರ ಬೆಳ್ಳುಬ್ಬಿ,ವಿರೂಪಾಕ್ಷಿ ಕೋಲಕಾರ, ಪ.ಪಂ ಸದಸ್ಯ ಬಾಬು ಭಜಂತ್ರಿ ಈರಯ್ಯ ಮಠಪತಿ ರಾಜಶೇಖರ ಶೀಲವಂತ ಸಹಿತ ಅನೇಕರು ಉಪಸ್ಥಿತರಿದ್ದರು,
























