ತಾಳಿಕೋಟೆ:ಅ.೬:ಯಾವುದೇ ಕ್ರೀಡೆಯಲ್ಲಿ ಪಾಲ್ಗೊಂಡು ಆಟವಾಡುತ್ತಿದ್ದಾಗ ಆ ಆಟಗಳಲ್ಲಿ ಸೋಲು ಗೆಲವು ಎಂಬವುಗಳು ನಿರ್ಣಯಗೊಳ್ಳುತ್ತಿದ್ದರಿಂದ ಸೋಲೆಂಬುದು ಕ್ಷೀಣಾವಸ್ತೆಗೆ ತಳ್ಳಿದರೆ ಗೆಲವು ಎಂಬುದು ಉನ್ನತ ಸ್ಥಾನಮಾನಕ್ಕೆರುವಂತಹ ಕಾರ್ಯವೆಂದು ಅರ್ಥೈಸಿಕೊಳ್ಳಲಾಗುತ್ತದೆ ಎಂದು ಬ.ಬಾಗೇವಾಡಿ ಡಿಎಸ್‌ಪಿ ಬಲ್ಲಪ್ಪ ನಂದಗಾವಿ ಅವರು ನುಡಿದರು.
ರವಿವಾರರಂದು ಸ್ಥಳೀಯ ಚೇತಕ ಸಂಘ ತಾಳಿಕೋಟೆ ನೇತೃತ್ವದಲ್ಲಿ ರಜಪೂತ ಸಮಾಜ ಸಹಕಾರದೊಂದಿಗೆ ದಸರಾ ಹಬ್ಬದ ಪ್ರಯುಕ್ತ ಚೇತಕ ಪ್ರೀಮಿಯರ್ ಲಿಗ್-೨ ಚುಟುಕು ಕ್ರೀಕೇಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಸೋಲು-ಗೆಲವು ಎಂಬವುಗಳು ಒಂದೇ ನಾಣ್ಯದ ಎರಡು ಮುಖಗಳಂತಿದ್ದು ಸೋತವರು ಮುಂದೆ ಗೆಲ್ಲಬಹುದು ಗೆದ್ದವರು ಮುಂದೆ ಸೋಲಬಹುದಾಗಿದೆ ಇದನ್ನು ಅರ್ಥೈಸಿಕೊಂಡು ಸೋಲನ್ನು ಅನುಭವಿಸಿದವರು ತಾಚಾರ ಮನೋಭಾವನೆ ಎಂಬುದನ್ನು ತಾಳದೇ ಮುಂದಿನ ಕ್ರೀಡೆಯಲ್ಲಿ ನಾನು ಗೆಲ್ಲುತ್ತೇನೆಂಬ ಹಂಬಲವೊAದಿದ್ದರೆ ಸಾಕು ಅದರಲ್ಲಿ ಯಶಸ್ವಿ ಕಾಣಬಹುದಾಗಿದೆ ಎಂದರು. ವಿದ್ಯಾರ್ಥಿಗಳಾಗಲಿ ಯುವಕರಾಗಲಿ ದುಶ್ಚಟಗಳಿಂದ ದೂರವಿರಬೇಕು ಯಾವ ಸಂಪತ್ತಿದ್ದರೂ ಆರೋಗ್ಯ ಸಂಪತ್ತಿನಕ್ಕಿAತಹ ಕಡಿಮೆ ಎಂದು ಹೇಳಿದ ಅಧಿಕಾರಿ ನಂದಗಾವಿ ಅವರು ಆರೋಗ್ಯವೊಂದಿದ್ದರೆ ಬೇಕಾದುದ್ದನ್ನು ಸಾದಿಸಬಹುದಾಗಿದೆ ಎಂದ ಅವರು ಶ್ರೀ ಖಾಸ್ಗತೇಶ್ವರ ಮಠದ ಸಿದ್ದಲಿಂಗಶ್ರೀಗಳು ಆರೋಗ್ಯ ಸಂಪತ್ತೆAಬುದು ಎಲ್ಲರಲ್ಲಿ ಹೆಚ್ಚಿಸಲಿ ಎಂಬ ಆಸೆಯಿಂದ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ತಮ್ಮ ಜೋಳಿಗೆಯಲ್ಲಿ ದುಶ್ಚಟ ಆದೀನರಿಂದ ದುಶ್ಚಟದ ವ್ಯವಸ್ಥೆಯನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಳ್ಳುವಂತಹ ಕಾರ್ಯ ಮುಂದುವರೆಸಿದ್ದರ ಕುರಿತು ತಿಳಿ ಹೇಳಿದ ಅಧಿಕಾರಿಗಳು ಸದೃಡ ದೇಹದೊಂದಿಗೆ ಸದೃಡವಾದಂತಹ ಶಕ್ತಿಯೊಂದಿದ್ದರೆ ಜೀವನದಲ್ಲಿ ಬೇಕಾದುದ್ದನ್ನು ಸಾದಿಸಬಹುದಾಗಿದೆ ಎಂದರು.
ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದ ಆವರಣದಲ್ಲಿ ಜರುಗಿದ ಕ್ರೀಕೇಟ್ ಪಂದ್ಯಾವಳಿಯಲ್ಲಿ ೭ ತಂಡದವರು ಭಾಗವಹಿಸಿದ್ದರಲ್ಲದೇ ವಿಜೇತ ೩ ತಂಡದವರಿಗೆ ಕ್ರೀಕೇಟ್ ಪ್ರೇಮಿಗಳು ತಮ್ಮ ಕೊಡುಗೆಯನ್ನು ನೀಡಿ ಗೌರವಿಸಿದರು.
ಈ ತಂಡಗಳಲ್ಲಿ ವೈಷ್ಣವ ರೆಡ್ಡಿ ಸಿಸಿ ತಂಡ ಪ್ರಥಮ ಭಹುಮಾನ ಪಡೆದಿದ್ದು ಈ ತಂಡಕ್ಕೆ ೫೦ ಸಾವಿರ ರೂ. ಚೇಕ್‌ನ್ನು ಆಕಾಶ ಬಾಲಾಜಿ ಹಜೇರಿ ಸಾಪ್ಟವ್ಹೇರ್ ಇಂಜನಿಯರ್ ಆಯಿಲ್ ಮೀಲ್ ಉದ್ಯಮಿದಾರರು ತಂಡಕ್ಕೆ ನೀಡಿ ಗೌರವಿಸಿದರು.
ದ್ವಿತೀಯ ಭಹುಮಾನವನ್ನು ಋತು ರೇಂರ‍್ಸ್ ತಂಡ ಪಡೆದುಕೊಂಡಿದ್ದು ಈ ತಂಡಕ್ಕೆ ೨೫ ಸಾವಿರ ರೂ. ನಗದು ಬಹುಮಾನವನ್ನು ತಾಳಿಕೋಟೆಯ ಜನಸೇವಾ ಸಂಘದ ಅಧ್ಯಕ್ಷರಾದ ಅಮೀತಸಿಂಗ್ ಧಶರಥಸಿಂಗ್ ಮನಗೂಳಿ ಅವರು ನೀಡಿ ಗೌರವಿಸಿದರು.
ತೃತೀಯ ಭಹುಮಾನ ಪಡೆದ ಬಸವ ಡೆವಲರ‍್ಸ್ ತಂಡದವರು ಪಡೆದುಕೊಂಡಿದ್ದು ಈ ತಂಡಕ್ಕೆ ೧೫ ಸಾವಿರ ರೂ. ಅಮರಸಿಂಗ್ ವಿಠ್ಠಲಸಿಂಗ್ ಹಜೇರಿ ಅವರು ನೀಡಿ ಗೌರವಿಸಿದರು.
ಇದು ಅಲ್ಲದೇ ಮ್ಯಾನ ಆಪ್‌ದಿ ಸೀರಿಜ್, ಬೆಸ್ಟ ಬ್ಯಾಟಮ್ಯಾನ್, ಬೆಸ್ಟ ಬಾಲರ್, ಮೋಸ್ಟ ಪರ‍್ಸ್, ಮೋಸ್ಟ ಸಿಕ್ರ‍್ಸ್, ಎಂದು ಆಯ್ಕೆ ಮಾಡಲಾದವರಿಗೆ ಭಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು. ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಕರ್ನಾಟಕ ರಾಜ್ಯ ವ್ಹಿಲ್ ಚೇರ್ ಬಾಸ್ಕೇಟ್ ಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಸಂಜೀವ ಹಜೇರಿ, ಗೋವಿಂದಸಿAಗ್ ಗೌಡಗೇರಿ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್, ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ, ಮಾನಸಿಂಗ್ ಕೊಕಟನೂರ, ರಥನಸಿಂಗ್ ಕೊಕಟನೂರ, ಸುರೇಶ ಹಜೇರಿ, ಜೈಸಿಂಗ್ ಮೂಲಿಮನಿ, ರಮೇಶ ಗೌಡಗೇರಿ, ಕೇಸರಸಿಂಗ್ ಹಜೇರಿ, ಬಾಲಾಜಿ ವಿಜಾಪೂರ, ಸಿರಸಕುಮಾರ ಹಜೇರಿ, ಉಮರಸಿಂಗ್ ಗೌಡಗೇರಿ, ರಾಘವೇಂದ್ರ ಹಜೇರಿ, ಪಿಂಟು ಹಜೇರಿ, ರಾಹುಲ್ ಹಜೇರಿ, ರಾಹುಲ್ ಮೂಲಿಮನಿ, ಶಿವಂ ಗೌಡಗೇರಿ, ಸುರಜಸಿಂಗ್ ಕೊಕಟನೂರ, ವಿಕಾಸ ನರಗುಂದ, ಬಾಲಾಜಿ ಸುಭಾಸ ವಿಜಾಪೂರ, ಸುಹನ್ ಹಜೇರಿ, ಅಲೌಕ್ ಗೌಡಗೇರಿ, ಸಂತೋಷ ಹಜೇರಿ, ಹರಿಷ ಮೂಲಿಮನಿ, ಸೋನು ಅಗರವಾಲಾ, ನೀತಿನ್ ಮೂಲಿಮನಿ, ನಾಗೇಶ ಕಟ್ಟಿಮನಿ, ವಿಶ್ವನಾಥ ನಾಯಕ, ದತ್ತು ಉಭಾಳೆ, ಜಗದೀಶ ಬಿಳೇಭಾವಿ, ಮೊದಲಾದವರು ಉಪಸ್ಥಿತರಿದ್ದರು.
ಮಹಾಂತೇಶ ಮುರಾಳ ಸ್ವಾಗತಿಸಿ ನಿರೂಪಿಸಿದರು.
























