
ಕಲಬುರಗಿ:ನ.14:ವೈಚಾರಿಕತೆಯ ನಿಲುವು, ಸಮಭಾವ ಸಮಸ್ವಯತೆ ಒಗಟ್ಟಿನಿಂದ ಘನವಾದ ಉದ್ದೇಶ ಇಟ್ಟುಕೊಂಡು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥೀಕವಾಗಿ ಕ್ರಾಂತಿ ಮಾಡುತ್ತಿರುವ ವಚನ ಚಾರಿಟೇಬಲ್ ಸೊಸೈಟಿ ಕಾರ್ಯ ಸ್ಲಾಘನೀಯ ಎಂದು ಬಸವರಾಜ ದೇಶಮುಖ ಕಾರ್ಯದರ್ಶಿಗಳು, ಶರಣ ಬಸವೇಶ್ವರ ವಿದ್ಯಾ ವರ್ಧಕ ಸಂಘ ಕಲಬುರಗಿ ನುಡಿದರು.
ವಚನ ಚಾರಿಟೇಬಲ್ ಸೊಸೈಟಿ ಡಾ. ಎಸ್. ಎಮ್. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಹಾಗೂ ಶಿವಶರಣ ಹರಳಯ್ಯ ನಾಟಕೋತ್ಸವವನ್ನು ಸಸಿಗೆ ನೀರೆರೆದು ಬಸವರಾಜ ದೇಶಮುಖ ಮಾತನಾಡುತ್ತ ನಾಟಕದಿಂದ ಕಲೆ, ಸಾಹಿತ್ಯ, ಸಂಸ್ಕøತಿ, ಆಳವಾಗಿ ಅರಿಯಲು ಇದೊಂದು ಸುಲಭವಾಗ ಮಾರ್ಗ ಎಂದು ನುಡಿದರು. ಶರಣರ ತತ್ವ ಸಿದ್ಧಾಂತ ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಸಮೃದ್ಧಿ ಸಾಧಿಸಬಹುದೆಂದು ಹೇಳಿದರು.
ಪ್ರೊ. ಸಿದ್ದು ಯಾಪಲಪರವಿ ಪ್ರಾಧನ ಸಂಪಾದಕರು ವಚನ ಟಿವಿ ಮಾತನಾಡುತ್ತ ಜಗತ್ತಿನ ಅತ್ಯಂತ ಶ್ರೇಷ್ಠ ಭಾಷೆಯಲ್ಲಿ ಕನ್ನಡ ಒಂದಾಗಿದೆ. ಕನ್ನಡ ಎಂದರೇ ಕುಣಿದಾಡುವದು ಎನ ಮನ ಎಂಬ ಕವಿವಾಣಿ ಮಾತು ಮೊಳಗಬೇಕು. ಕನ್ನಡ ಇದು ತಾಯಿ ಭಾಷೆ ಜೊತೆಗೆ ಅನ್ನ ಕೊಡುವ ಭಾಷೆಯಾಗಿದೆ. ಕನ್ನಡ ಸಾಹಿತ್ಯದಲ್ಲಿ ವಚನಗಳು ಮೆದುಳುಗಳಾಗಿವೆ. ಧಾವಂತದ ಬದುಕಿನಲ್ಲಿ ಸತ್ಯಶುದ್ಧ ಕಾಯಕ ಪ್ರಗತಿ ಪರ ಚಿಂತನೆಯಿಂದ ವಚನ ಸಮೂಹ ಸಂಸ್ಥೆ 15 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ ನಾಟಕ ಮನಸ್ಸು ಕಟ್ಟುವ ಸಂಸ್ಕøತಿಕ ಉತ್ಸವ ಇದಾಗಿದೆ. ಬಸವಾದಿ ಶರಣರು ಕನ್ನಡ ಭಾಷೆ ಜೊತೆಗೆ ಬಾಂಧವ್ಯ, ಇತಿಹಾಸ, ಪರಂಪರೆಗೆ ಒತ್ತು ಕೊಟ್ಟು ಕ್ರಾಂತಿಮಾಡಿರುವದು ಸತ್ಯ ಇದನ್ನು ನಾವೆಲ್ಲರು ಮನಗಾಣಬೇಕು ಎಂದು ನುಡಿದರು.
ಸನ್ಮಾನ ಸ್ವೀಕರಿಸಿದ ಕಾರ್ಯನಿರತ್ತ ಪತ್ರ ಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ ಮಾತನಾಡುತ್ತ ಇಂದಿನ ಹೊಸ ಪೀಳಿಗೆಗೆ ಹೊಸ ರೀತಿಯ ಕನ್ನಡ ಹಾಗೂ ವಚನಗಳು ತಿಳಿಸಬೇಕಾಗಿದೆ. ಎ ಎಂದರೆ ಅಲ್ಲಮ ಬಿ ಎಂದರೆ ಬಸವ ಸಿ ಎಂದರೆ ಚನ್ನಬಸವ ಡಿ ಎಂದರೆ ದಾಸಿಮಯ್ಯ ಎಂಬ ಅಕ್ಷರ ಜೊಡಣೆ ಪದ ಪುಂಜ ಕಲಿಸಿದರೆ ಮಕ್ಕಳಲಿ ಹೊಸ ವಿಚಾರದ ಹೊಂಬೆಳಕು ಮೂಡಲು ಇದು ಪ್ರೇರಣೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ವಹಿಸಿ ಧನಾತ್ಮಕ ವಿಚಾರ ದೂರದೃಷ್ಟಿಯ ಕಲ್ಪನೆಯಿಂದ ಬಸವಕಲ್ಯಾಣದ ಹತ್ತಿರ ಅನುಭವ ಮೆಗಾಸಿಟಿಯ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. ದಿನಾಂಕ 20/12/2027 ರಂದು ಲೋಕಾಪ್ರಣೆ ಮಾಡುವ ಸಂಧರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ 1 ಲಕ್ಷ 96 ಸಾವಿರ ಜನರನ್ನು ಸೇರಿಸುವ ಉದೇಶ ಹೊಂದಿದು ನಮ್ಮ ಸಂಸ್ಥೆಯ ಮೇಲೆ ತಮ್ಮ ಸಹಕಾರ ಇರಲಿ ಎಂದು ಹೇಳಿದರು. ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಕೋರಣೇಶ್ವರ ಸ್ವಾಮಿಗಳು ಶ್ರೀ ತೋಂಟದಾರ್ಯ ಅನುಭವ ಮಂಟಪ ಆಳಂದ ರವರು ಆರ್ಶೀವಾದ ನಿಡುತ್ತ ಎಲ್ಲರು ಸೌಹಾರ್ದತೆಯಿಂದ ಬಾಳುವುದರ ಜೊತೆಗೆ ನಮ್ಮ ಬದುಕು ಹಸನು ಮಾಡುಕೊಳಬೇಕು ಎಂದು ನುಡಿದು ಇಂದು ವಚನ ಟಿವಿ, ದೃಶ ಮಾಧ್ಯಮ, ಐತಿಹಾಸಿಕ ಕ್ರಾಂತಿ ಮಾಡುತ್ತಿದೆ ಎಂದು ನುಡಿದರು. ಡಾ ವಿಲಾಸವತಿ ಖುಬಾ ಅಧ್ಯಕ್ಷರು, ಕಲಬುರಗಿ, ಬಸವ ಸಮಿತಿ ರವರು ಡಿಸೆಂಬರ್‍ನಲ್ಲಿ ಬಿಡುಗಡೆಗೊಳ್ಳಲಿರುವ ಜಗನ್ಮಾತೆ ಅಕ್ಕ ಮಹಾದೇವಿ ಚಲನ ಚಿತ್ರದ ಭಿತ್ತಿ ಪತ್ರ ಬಿಡುಗಡೆಗೊಳಿಸಿದರು.
ವೇದಿಕೆ ಮೇಲೆ ಆರ್ ಜಿ ಶೆಟಕಾರ, ಭೀಮಣ್ಣಾ ಬೋನಾಳ, ಅನ್ಯುಣ್ಣ ನಂದಿ ಕಾಶಿನಾಥ ದಿವಾಂಟಗಿ, ಡಾ. ಚಿತ್ರಶೇಖರ ವಾಗರಗಿ, ಶಿವಶಂಕರ ಟೋಕರೆ, ಶಿವಕುಮಾರ ಸಾಲಿ, ಬಾಬುರಾವ ಪಾಟೀಲ, ಶಿವಲಿಂಗಪ್ಪ ಗಣಪತಿ, ಅಶೋಕ ಘೂಳೆ, ರಾಜಶೇಖರ ಪಾಟೀಲ ಉಪಸ್ಥಿತಿ ಇದರು. ಮೊದಲಿಗೆ ಕಲ್ಯಾಣ ನಾಡು ಗ್ರಾಮೀಣಜನಪದ ಕಲಾ ಸಂಘ ಬಸವಕಲ್ಯಾಣ ಇವರು ಸಂಗೀತ ಕಾರ್ಯಕ್ರಮ ಜೊತೆಗೆ ನಾಡಗೀತೆ ಪ್ರಸ್ತುತ ಪಡಿಸಿದರು. ರವೀಂದ್ರ ಶಾಬಾದಿ ಪ್ರಾಸ್ತವಿಕ ನುಡಿದರೆ, ಬಸವರಾಜ ಮೊರಬದ ಸ್ವಾಗತಿಸಿದರೆ, ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರೆ, ಅಂಬರಾಯ ಬಿರಾದರ ವಂದಿಸಿದರು ಕೊನೆಯಲ್ಲಿ ಶತಯುಷಿ ಲಿಂ. ವಿ ಸಿದ್ಧರಾಮಣ್ಣ ನವರು ರಚಿಸಿದ ಶಿವಶರಣ ಹರಳಯ್ಯ ನಾಟಕವನ್ನು ಸಿರಗುಪ್ಪದ ಧಾತಿ ಸಂಸ್ಥೆಯವರು ನಡೆಸಿಕೊಟ್ಟರು.






















