ಸರಡಗಿ ಪೂಜ್ಯರು ಭಕ್ತರಿಗಲ್ಲದೆ ಹಲವಾರು ಮಠಾದಿಶರಿಗೆ ಆದರ್ಶ:ಚವದಾಪುರಿ ಪೂಜ್ಯರು

ಕಲಬುರಗಿ:ಜ.13:ಭಾರತೀಯ ಸಂಸ್ಕøತಿಯ ಆತ್ಮವೆಂದರೆ ಗುರು ಪರಂಪರೆ. ಸಾವಿರಾರು ವರ್ಷಗಳಿಂದ ನಮ್ಮ ಧರ್ಮ, ಧರ್ಮನೀತಿ, ಸಂಸ್ಕಾರ ಮತ್ತು ಜ್ಞಾನವನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸಿರುವ ಶ್ರೇಷ್ಠ ಸೇತುವೆಯೇ ಗುರು-ಶಿಷ್ಯ ಸಂಬಂಧ ಎಂದು ಚವದಾಪುರಿ ಸಂಸ್ಥಾನ ಹಿರೇಮಠದ ಪೂಜ್ಯರಾದ ಡಾ. ರಾಜಶೇಖರ ಶಿವಾಚಾರ್ಯರು ಹೇಳಿದರು.
ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿಯ ಚಿನ್ನದಕಂತಿ ಚಿಕ್ಕವಿರೇಶ್ವರ ಮಠದಲ್ಲಿ ಆಯೋಜಿಸಿರುವ ಚಿಕ್ಕವಿರೇಶ್ವರರ 79ನೇ ಪುಣ್ಯ ಸ್ಮರಣೋತ್ಸವ, ಸಂಸ್ಕೃತಿಕ ಭವನ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಅಂತಹ ಪವಿತ್ರ ಪರಂಪರೆಯ ಜೀವಂತ ಪ್ರತೀಕವೇ ನಮ್ಮ ಮಠಗಳು ಮತ್ತು ಅವುಗಳನ್ನು ಮುನ್ನಡೆಸುವವರೆ ಗೌರವಾನ್ವಿತ ಮಠಾಧೀಶರು. ಭಕ್ತ ಪರಂಪರೆಗೆ ಹಾಗೂ ಹಲವಾರು ಮಠಾಧಿಶರಿಗೆ ಮಾರ್ಗದರ್ಶನ ಮಾಡುತ್ತೀರುವವರ ಮೊದಲನೇ ಸಾಲಿನಲ್ಲಿ ಬರುವವರೆ ಸರಡಗಿ ಪೂಜ್ಯರಾದ ರೇವಣಸಿದ್ಧ ಶಿವಾಚಾರ್ಯರು ಎಂದು ಮಾರ್ಮಿಕವಾಗಿ ನುಡಿದರು. ಸಮಾರಂಭ ನೇತೃತ್ವ ವಹಿಸಿದ ಶ್ರೀ ಮಠದ ಪೀಠಧಿಪತಿಗಳಾದ ಪೂಜ್ಯ ಡಾ. ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡುತ್ತ ಇಂದು ನಾವು ಇಲ್ಲಿ ಸೇರಿರುವುದು ಕೇವಲ ಒಂದು ಸನ್ಮಾನ ಸಮಾರಂಭಕ್ಕಾಗಿ ಮಾತ್ರವಲ್ಲ; ಅದು ಜ್ಞಾನ, ತ್ಯಾಗ, ಸೇವೆ ಮತ್ತು ಧರ್ಮನಿಷ್ಠೆಯ ಸನ್ಮಾನವಾಗಿದೆ. ಮಠಾಧೀಶರು ಕೇವಲ ಒಂದು ಸಂಸ್ಥೆಯ ಮುಖ್ಯಸ್ಥರಲ್ಲ,ಅವರು ಸಮಾಜದ ಮಾರ್ಗದರ್ಶಕರು, ಧರ್ಮದ ರಕ್ಷಕರು ಮತ್ತು ಮೌಲ್ಯಗಳ ಜೀವಂತ ಶಿಷ್ಯನ ಜೀವನದಲ್ಲಿ ಗುರು ಒಂದು ದೀಪದಂತೆ. ದೀಪವು ತನ್ನನ್ನು ಕರಗಿಸಿಕೊಂಡು ಇತರರಿಗೆ ಬೆಳಕು ನೀಡುವಂತೆ, ಗುರು ತಮ್ಮ ಜೀವನವನ್ನೇ ತ್ಯಾಗಮಯವಾಗಿ ಅರ್ಪಿಸಿ ಶಿಷ್ಯರನ್ನು ರೂಪಿಸುತ್ತಾರೆ. ಶಿಷ್ಯನ ಶ್ರದ್ಧೆ, ಶಿಸ್ತು ಮತ್ತು ಸೇವಾಭಾವವೇ ಈ ಸಂಬಂಧದ ಬಲ.ಇಂದಿನ ವೇಗದ ಯುಗದಲ್ಲಿ ಮೌಲ್ಯಗಳು ಕುಸಿಯುತ್ತಿರುವಾಗ, ಮಠಾಧೀಶರ ಮಾರ್ಗದರ್ಶನವು ಸಮಾಜಕ್ಕೆ ದಿಕ್ಕು ತೋರಿಸುವ ದೀಪಸ್ತಂಭವಾಗಿದೆ. ಅವರ ಉಪದೇಶಗಳು ಭಕ್ತರ ಜೀವನಕ್ಕೆ ಅರ್ಥವನ್ನು ನೀಡುತ್ತವೆ, ಅವರ ಆಶೀರ್ವಾದಗಳು ನಿಮ್ಮ ನಡೆಗೆ ಶಕ್ತಿಯನ್ನು ನೀಡುತ್ತವೆ.ಆದ್ದರಿಂದ ಇಂದು ನಾವು ಸಲ್ಲಿಸುವ ಈ ಸನ್ಮಾನವು ಕೇವಲ ಒಂದು ವ್ಯಕ್ತಿಗೆ ಸಲ್ಲಿಸುವ ಗೌರವವಲ್ಲ; ಅದು ಪರಂಪರೆ, ಧರ್ಮ ಮತ್ತು ಗುರುತ್ವಕ್ಕೆ ಸಲ್ಲಿಸುವ ನಮನವಾಗಿದೆ.ನಾವು ಶಿಷ್ಯರೆಂದು ಹೆಮ್ಮೆಪಡುವುದಾದರೆ, ಗುರುಗಳ ಉಪದೇಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇ ಗುರುದಕ್ಷಿಣೆ, ಅದೇ ನಿಜವಾದ ಸನ್ಮಾನ. ಭಕ್ತರೆ ನಮ್ಮ ಮಠದ ಆಸ್ತಿ ಏಕೆಂದರೆ ನಿಮ್ಮೆಲ್ಲರ ಭಕ್ತಿಯ ಶಕ್ತಿಯೊಂದಿಗೆ ಶ್ರೀ ಮಠ ಬೆಳೆಯುತ್ತಿರುವದು ಹೆಮ್ಮೆಯ ವಿಷಯ ಎಂದು ಮಾರ್ಮಿಕವಾಗಿ ನುಡಿದರು.ವೇದಿಕೆಯ ಮೇಲೆ ದೇವಾಪುರ ಪೂಜ್ಯರಾದ ಶ್ರೀ ಶಿವಮೂರ್ತಿ ಶಿವಾಚಾರ್ಯರು, ತೋನಸಳ್ಳಿ ಪೂಜ್ಯರಾದ ಶ್ರೀ ರೇವಣಸಿದ್ಧ ಚರಂತೆಶ್ವರ ಶಿವಾಚಾರ್ಯರು, ಅವರಾದ ಪೂಜ್ಯರಾದ ಶ್ರೀ ಮರಳಸಿದ್ಧ ಶಿವಾಚಾರ್ಯರು, ಶ್ರೀ ಮಠದ ಉತ್ತರಾಧಿಕಾರಿಯಾದ ಚಿನ್ನದ ವೀರೇಶ್ವರ, ಯುವ ಮುಖಂಡರಾದ ಅಭಿಷೇಕ ಎ ಪಾಟೀಲ, ಪ್ರಫುಲ ಎಸ್ ನಮೋಶಿ, ಗೊರಕನಾಥ ಖಾನಾಪುರ, ಸಂಜೀವಕುಮಾರ ಶೆಟ್ಟಿ, ರವೀಂದ್ರ ಸಾಹು, ಶಿವರಾಜ ಮಹಾಗಾಂವ ಕರಹರಿ, ವೇದ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ವಿವೇಕ ವಿರೇಶ, ಡಾ. ಶೃದ್ದಾ ಉಪಸ್ಥಿತರಿದ್ದರು.ಇದೆ ಸಂಧರ್ಭದಲ್ಲಿ ಶರಣಬಸವ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ ಪುರಸ್ಕೃತರಾ ದ ಮುತ್ಯಾನ ಬಬಲಾದ ಪೂಜ್ಯರಾದ ಡಾ.ಗುರುಪಾದಲಿಂಗ ಮಹಾ ಶಿವಯೋಗಿಗಳಿಗೂ, ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ, ರಾಜ್ಯ ಸಮಿತಿ ಸದಸ್ಯರಾದ ರಾಜಕುಮಾರ ಉದನೂರ ಇವರಿಗೆ ವಿಶೇಷವಾಗಿ ಗೌರವಿಸಲಾಯಿತು. ಆನಂದ ನಂದಿಕೂರ, ಮಲ್ಲಿಕಾರ್ಜುನ ವರನಾಳ ಪ್ರಾರ್ಥಿಸಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ರವಿಕುಮಾರ ಶಹಾಪುರಕರ್ ನಿರೂಪಿಸಿ, ವಂದಿಸಿದರು.ಕಾರ್ಯಕ್ರಮದಲ್ಲಿ ವಿನೋದ ಪಾಟೀಲ, ಸಂತೋಷ ಆಡೆ, ಶರಣಗೌಡ ಬಿರಾದಾರ, ಲಿಂಗರಾಜ ಮಾಲಿಪಾಟೀಲ, ಶೀಲವಂತಯ್ಯ ಮಲ್ಲೇದಮಠ, ಶರಣಬಸಪ್ಪ ಚಿಕ್ಕನಾಗಾಂವ, ಸಂಗಣ್ಣ ಮಾಸ್ತರ ಚಿಲಶೆಟ್ಟಿ, ಗುರುರಾಜ ಇವಣಿ, ಭೀಮಾಶಂಕರ ಚಕ್ಕಿ, ಪೀರಪ್ಪ ಮಾಳಾ, ಶಿವಶಂಕರ ಬಿರಾದಾರ, ವಿಶ್ವನಾಥ ಪಾಟೀಲ ಗವನಳ್ಳಿ, ಬಸವರಾಜ ಶೀಲವಂತ, ಗುರುಶಾಂತಪ್ಪ ಓಗಿ, ಸೂರ್ಯಕಾಂತ ಚನ್ನಬಟ್ಟಿ, ನಾಗಣ್ಣ ಚವಡಾಪುರ ಸೇರಿದಂತೆ ತಾಜ ಸುಲ್ತಾನಪುರ, ಕುರಿಕೋಟಿ, ಶ್ರೀನಿವಾಸ ಸರಡಗಿ ಭಕ್ತರು ಸೇರಿದಂತೆ ಅನೇಕ ಜನ ಭಾಗವಹಿಸಿದರು.