
ಚಿಂಚೋಳಿ:ಮೇ.26:ವೀರಶೈವ – ಲಿಂಗಾಯತ ಒಂದೆ, ಸಮಾಜವನ್ನು ಇಬ್ಭಾಗ ಮಾಡುವ ಹಾಗೂ ರಾಜಕೀಯ ಬೆಳೆಯನ್ನು ಬೆಯಿಸಲು ಲಿಂಗಾಯತ ಧರ್ಮದಲ್ಲಿ ಗೊಂದಲ ಸೃಷ್ಟಿ ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧಿಶ್ವರ ಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಶ್ರೀಶೈಲ ಮಹಾಪಿಠ ಆಶೀರ್ವಾಚನ ನೀಡುತ್ತಾ ಭಕ್ತಾದಿಗಳಿಗೆ ಉಪದೇಶಿಸಿದ್ದರು.
ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಅಣವಾರ ಕ್ರಾಸ್‍ನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವೈಭವಯುತ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಗಣ್ಯ ವ್ಯಕ್ತಿಗಳು ಜ್ಯೋತಿ ಬೆಳಗಿಸುದ ನಂತರ ಆಶೀರ್ವಚನ ನೀಡುತಾ ವೀರಶೈವ ಲಿಂಗಾಯತ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಲು ಪ್ರಯತ್ನ ಗಳು ನಡೆಯುತ್ತಿದ್ದು, ಅದಕ್ಕೆ ಸಾಥ ಕೊಡೆದೆ ಗೊಂದಲವನ್ನು ಬದೆಗಟ್ಟೆಬೇಕು, ಯಾವುದೇ ಒಂದು ವಚನ ಕೇಳಿ ಅದರ ಅರ್ಥ ಅಪಾರ್ಥ ಮಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಪಂಚಾಚಾರ್ಯರು, ಬಸವಾದಿ ಶಿವಶರಣರು ವಚನಗಳ ಪವಾಡಗಳ ಮೂಲಕ ಸಿದ್ಧಾಂತಗಳನ್ನು ಪ್ರತಿಪಾದಿಸಿದರು, ಶ್ರದ್ಧೆ ಭಕ್ತಿ ಇದಲ್ಲಿ ಪವಾಡಗಳು ನಡೆಯುತ್ತವೆ, ಸಮಾಜದ ಉಭಯ ಪರಂಪರೆಗಳನ್ನು ಗೌರವಿಸಿ ವೀರಶೈವ ಲಿಂಗಾಯತ ಸಮುದಾಯವನ್ನು ಅಭಿವೃದ್ಧಿ ಪಡಿಸಿ ಶರಣರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಕಾಣಬೇಕು, ಮುಂದಿನ ದಿನ ಮಾನಗಳಲ್ಲಿ ಉಭಯ ಜಯಂತಿಗಳನ್ನು ಒಂದೇ ಸಮಯದಲ್ಲಿ ಆಚರಣೆ ಮಾಡಿ ಸಮಾನತೆಯ ಸಂದೇಶ ಸಾರಬೇಕು, ವೀರಶೈವ ಲಿಂಗಾಯತ ಧರ್ಮ ಹಿಂದೆ ಇತ್ತು ಇವತ್ತಿಗೂ ಇದೆ ಮುಂದಿನ ದಿನಮಾನಗಳಲ್ಲಿ ಇರುತ್ತದೆ ಎಂದ ಆಶೀರ್ವಚನ ನೀಡಿದರು.
ಸೇಡಂ ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ಮಾತನಾಡಿ, ಶ್ರೀಶೈಲಕ್ಕೆ ಬರುವ ಭಕ್ತಾದಿಗಳಗೊಸ್ಕರ ನೆರಳಿಗಾಗಿ ಲಕ್ಷಾಂತರ ಗಿಡಗಳನ್ನು ನೆಟ್ಟಿದ ಕೀರ್ತಿ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಸೇರುತ್ತದೆ, ಗುರು ವಿರಕ್ತ ಸಮಾಜದ ಎರಡು ಕಣ್ಣುಗಳು, ದೋರಪಯೋಗದಲ್ಲಿ ಸಮಾಜದ ಅಂಕಡೊಂಕ ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಾಮಾಜಿಕ ಸಮಾನತೆಕ್ಕಾಗಿ ಶ್ರೀ ರೇಣುಕಾಚಾರ್ಯರ ಕ್ರಾಂತಿ ಮಾಡಿದರು. ಲಿಂಗಾಯತ ಸಮಾಜದ ಬೀಜ ಹಾಕಿದ್ದರು ರೇಣುಕಾಚಾರ್ಯರು, ಅದಕ್ಕೆ ಮರವಾಗಿ ಬೆಳೆಸಿದ್ದು, 12 ಶತಮಾನದಲ್ಲಿ ಬಸವಣ್ಣ ನವರ. ಅಣವಾರ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನವನ್ನು ಮುಂದಿನ ದಿನಗಳಲ್ಲಿ ಒಂದು ತೀರ್ಥ ಸ್ಥಾನ ಆಗಬೇಕು ಎಂದು ಹೇಳಿದ್ದರು
ಮಾಜಿ ಕಲಬುರಗಿ ಕ್ಷೇತ್ರದ ಸಂಸದರಾದ ಡಾ. ಉಮೇಶ ಜಾಧವ ಮಾತನಾಡಿ, ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಶ್ರೀ ರೇಣುಕಾಚಾರ್ಯರ ಜಯಂತಿಗೆ ರಾಜ್ಯ ಮಾಜಿ ಮುಖ್ಯಮಂತ್ರಿಗಳಾದ ಬೋಮ್ಮಯಿ ಅವರಿಂದ ಅನುಮತಿ ಪಡೆದಿದ್ದು ನಾನೆ, ಸನತಾನ ಧರ್ಮಕ್ಕೆ ಕೆಟ್ಟ ಹೆಸರು ತರಲು ಕೆಲವು ಪ್ರಯತ್ನ ಗಳು ನಡೆಯುತ್ತಿವೆ, ಸೂರ್ಯ ಚಂದ್ರ ಇರುವವರೆಗೂ ಸನಾತನ ಧರ್ಮ ಉಳಿಯುತ್ತದೆ ಎಂದು ಹೇಳಿದರು.
ನಂತರ ಕರುಣೇಶ್ಚರ ಶಿವಾಚಾರ್ಯರು ಕಂಚಾಳಕುಂಟಿ ಮಠ ನಿಡಗುಂದಾ, ಮಾತನಾಡಿ ಶ್ರೀ ರೇಣುಕಾಚಾರ್ಯ ಜಯಂತಿ ಸತತವಾಗಿ 5 ವರ್ಷಗಳಿಂದ ಆಚರಿಸುತ್ತ ಬಂದಿದ್ದು, 3 ವರ್ಷ ಚಿಂಚೋಳಿಯಲ್ಲಿ, 2 ವರ್ಷಗಳಿಂದ ರೇವಣಸಿದ್ದೇಶ್ವರ ಸುಕ್ಷೇತ್ರದಲ್ಲಿ , ಬಹಳಷ್ಟು ಪುರಾತನವಾದ ಈ ಕ್ಷೇತ್ರವನ್ನು ಅಭಿವೃದ್ಧಿ ಆಗಬೇಕು, ರೇವಣಸಿದ್ದೇಶ್ವರ ದೇಶದಲ್ಲಿ ಸಂಚರಿಸಿ, ದೇಶದಲ್ಲಿ ಧರ್ಮದ ದಂಢಯಾತ್ರೆಗಳನ್ನು ಮಾಡಿ ದೇಶದ ಅಜ್ಞಾನದ ಅಂಧಕಾರ ದೂರ ಮಾಡಿದ ಮಹಾತ್ಮರ, ಎಲ್ಲಕಡೆಗಳಲ್ಲಿ ದೇವಸ್ಥಾನಗಳನ್ನು ಕಾಣುತ್ತಿವೆ, ರಟಕಲ್, ಹಲಕೋಡ, ರೇಣುಕಾ ಆಚಾರ್ಯ ಪಾದ ಸನ್ನಿಧಿ ಧರ್ಮ ಕೇಂದ್ರ ಗಳನ್ನು ಆಗಿವೆ, ಚಿಂಚೋಳಿಯಲ್ಲಿ ರುವ ರೇವಣಸಿದ್ದೇಶ್ವರ ಸುಕ್ಷೇತ್ರವನ್ನು ಎಲ್ಲರೂ ಕೈಜೊಡಿಸ ಅಭೀವೃದ್ದಿ ಪಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಕೆಂಚವೃಷಭೇಂದ್ರ ಶಿವಾಚಾರ್ಯರು ಸಂಸ್ಥಾನ ಹಿರೆಮಠ ಆಲೂರು, ಶ್ರೀ ತಪೆÇೀರತ್ನ ದ್ವೀತಿಯ ಸಾಂಬ ಶಿವಾಚಾರ್ಯರು ಬ್ರಹನ್ಮಠ ಸಾಂಬಸಲಗರ ಕೇಸರಿಬೆಟ್ಟ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಭೃಂಗಿ ಪಾಚೇಶ್ವರ ಸಂಸ್ಥಾನ ಕಟ್ಟಿಮಠ ಚಂದನಕೇರಾ, ಹಾಗೂ ವಿವಿಧ ಮಠಾಧೀಶರು ಹಾಗೂ ಅನೀಲಕುಮಾರ ಜಮದಾರ, ಸಮಿತಿಯ ಅಧ್ಯಕ್ಷರಾದ ಸಂಗಯ್ಯ ಸ್ವಾಮಿ, ಗೌರವ ಅಧ್ಯಕ್ಷರಾದ ವೀರಣ್ಣ ಗಂಗಾಣಿ, ಬಾಬುರಾವ ಪಾಟೀಲ್, ದೀಪಕನಾಗ ಪೂಣ್ಯಶೆಟ್ಟಿ, ಶರಣು ಮೋತ್ಕಪಳ್ಳಿ, ಸಂಜೀವಕುಮಾರ ಪಾಟೀಲ, ಶೈಲೇಶ್ ಹುಲಿ, ಉಮಾ ಪಾಟೀಲ್, ಮಲ್ಲಿಕಾರ್ಜುನ ಜಂಗಮಠ, ಮಲ್ಲಿಕಾರ್ಜುನ ಸ್ವಾಮಿ, ಉಪಸ್ಥಿತರಿದ್ದರು


























