ಅದ್ದೂರಿಯಾಗಿ ಜರುಗಿದ ವೀರಭದ್ರೇಶ್ವರ ಉತ್ಸವ

ಗುರುಮಠಕಲ್:ಸೆ.3: ಮಂಗಳವಾರ ಜರುಗಿದ ಶ್ರೀ ವೀರಭದ್ರೇಶ್ವರನ ಉತ್ಸವದಲ್ಲಿ ನೆರೆದಿದ್ದ ಭಕ್ತರು ಭಕ್ತಿಯ ಪರವಶದಲ್ಲಿ ತಮ್ಮನೇ ತಾವು ಮರೆತು ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾದರು.
ಪಟ್ಟಣದ ನಾರಾಯಣಪೂರ ಬಡಾವಣೆಯಲ್ಲಿ ವೀರಭದ್ರೇಶ್ವರ ಅಗ್ಗಿ ಮಹೋತ್ಸವದ ಸಡಗರ, ಸಂಭ್ರಮದ ನಡುವೆ ನಮೋ ವೀರಭದ್ರ , ಮಾತ ಭದ್ರಕಾಳಿ ಎಂಬ ಜಯಘೋಷಣೆ ಯೊಂದಿಗೆ ಜರುಗಿತು. ಭಕ್ತರ ಹರ್ಷೋದ್ಗಾರದ ನಡುವೆ ವೀರ ಪುರವಂತರು ಮತ್ತು ಭಕ್ತರು ಅಗ್ನಿ ಹಾಯುವಮೂಲಕ ವೀರಭದ್ರೇಶ್ವರನ ಕೃಪೆಗೆ ಪಾತ್ರರಾದರು. ಬೆಳಗ್ಗೆ 7 ಗಂಟೆಗೆ
ನಗರೇಶ್ವರದ ಬಾವಿಯಲ್ಲಿ ಗಂಗಸ್ಥಳಕ್ಕೆ ಹೋಗಿ ಪೂಜೆಮಾಡಿಕೊಂಡು, ಗಂಗೆಯನ್ನು ಹೋತ್ತು ತರಲಾಯಿತು ನಂತರ ದೇವರಿಗೆ ರುದ್ರಾಭಿಷೇಕ. ಆನಂತರ ಪಲ್ಲಕಿಯಲ್ಲಿ ವೀರಭದ್ರೇಶ್ವರನ ಮೆರವಣಿಗೆ ಪುರವಂತರ ವೀರಗಾಸೆ ವೀರಭದ್ರನ ಜನನ ಮತ್ತು ದಕ್ಷಬಹ್ಮನನ್ನು ಸಂಹಾರ ಮಾಡಿದ ಸನ್ನಿವೇಶವನ್ನು ವಡಪುಗಳ ಮೂಲಕ ನೆರೆದ ಭಕ್ತ ಸಮೂಹಕ್ಕೆ ತಮ್ಮದೇ ಆದ ವೀರತೆಯ ಪ್ರತೀಕದಿಂದಯುದ್ಧ ಸನ್ನಿವೇಶಗಳಲ್ಲಿ ವೀರಭದ್ರನ ಆರ್ಭಟವನ್ನು ನಾಟ್ಯಗಳ ಮೂಲಕ ತೋರಿಸಿದರು. ಅನೇಕ ಶಸ್ತ್ರ ಪವಾಡಗಳು ಮನಸೂರೆಗೊಂಡವು. ನೆರೆದಂತ ಭಕ್ತರಿಗೆ ಮಹಾ ಪ್ರಸಾದ
ವ್ಯವಸ್ಥೆಮಾಡಲಾಗಿತ್ತು.ಈ ಸಂರ್ಧಭದಲ್ಲಿ ಊರಿನ ಸದ್ಭಕ್ತರು ಹಾಗೂ ದೇವಸ್ಥಾನ ಸಮಿತಿಯ ಸರ್ವ ಸದಸ್ಯರೆಲ್ಲರು ಮತ್ತು ಸತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.