ಮೊಳಕೇರಾಯಲ್ಲಿ ಅಪಾರ ಜನಸಾಗರ ಮಧ್ಯ ನಡೆದ ವೀರಭದ್ರೇಶ್ವರ ರಥೋತ್ಸವ

ಸಂಜೆವಾಣಿ ವಾರ್ತ
ಹುಮನಾಬಾದ್ : ಜ.೨೦:ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಸದಲಾಪೂರ ಸಿದ್ಧಲಿಂಗ ಶಿವಾಚಾರ್ಯರ ವಿಶೇಷ ಪಾದಪೂಜೆ ಚಾಲನೆ ನೀಡಿದರು. ಸಂಜೆ ಅಪಾರ ಜನಸಾಗರದ ಮಧ್ಯ ಶ್ರೀ ವೀರಭದ್ರೇಶ್ವರ ರಥೋತ್ಸವ ನೆರವೇರಿತು
ಬೆಳಿಗ್ಗೆಯಿಂದಲ್ಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷವಾಗಿ ಪೂಜೆಗಳು, ಅಬಿಷೇಕಗಳು, ಅಲಂಕಾರ ಸೇವೆ ನೆರವೇರಿಸಲಾಯಿತು. ಸಂಜೆ ವೇಳೆಗೆ ಭಕ್ತಾಧಿಗಳಿಂದ ಶ್ರೀ ವೀರಭದ್ರೇಶ್ವರ ಮಹಾರಾಜಕೀ ಜೈ ಎಂಬ ಘೋಷಣೆಗಳೊಂದಿಗೆ ಬೆಂಡು ಬತ್ತಾಸಿ, ಬಾಳೆಹಣ್ಣು, ಕಲ್ಲುಸಕ್ಕರೆ, ನಾಣ್ಯಗಳನ್ನು ರಥೋತ್ಸವದ ಮೇಲೆ ಎಸೆದು ಭಕ್ತಿಸೇವೆ ಸಲ್ಲಿಸಿದರು. ಭಕ್ತಾಧಿಗಳಿಂದ ಭಕ್ತಿಭಾವದಿಂದ ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಬಿರಾದಾರ ವೀರಭದ್ರೇಶ್ವರ ಪಂಚ ಕಮಿಟಿ ಅಧ್ಯಕ್ಷರು ರಮೇಶ್ ನಾವದಗಿ ಜಾತ್ರಾ ಉತ್ಸವದ ಅಧ್ಯಕ್ಷರು ಮಲ್ಲಿಕಾರ್ಜುನ ತಿಪ್ಪಣ್ಣೋರ್ ಅರವಿಂದ್ ಜೋಗಿರೆ ವೀರಣ್ಣ ಬಿರಾದಾರ್ ಕಂಟೆಪ್ಪ ಕಾಗಿ ಸಂತೋಷ್ ಪಾಟೀಲ್ ರವಿ ಜಮಾದಾರ್ ಸತೀಸ ಕೆರೆಗೋಡ ಸಂಗಮೇಶ ಬಸವರಾಜ್ ರಾಂಪುರೆ ಶಾಂತಕುಮಾರ್ ಮಲ್ಲಪ್ಪನೂರ ಮಹಾದೇವ ಸೋಮ ರಾಜಕುಮಾರ್ ಮಡಪತಿ ರಾಜಕುಮಾರ್ ಶ್ರೀಶೈಲ್ ಬಂಡೆಪ್ಪ ಗಿರಪ್ನೂರ್ ರೇವಯ್ಯ ಸ್ವಾಮಿ ಮಲ್ಲಿಕಾರ್ಜುನ್ ಪಾಟಿಲ್ ಮಲ್ಲಿಕಾರ್ಜುನ ಸೂರೇಕಾಂತ ವಿರಶಟ್ಟಿ ಧನರಾಜ ಲೋಕೇಶ ಸ್ವಾಮಿ ಬಸವರಾಜ ತಿಪನೋರಾ ಸಂತೋಷ ಕೊಳಾರಿ ಸುರೇಕಾಂತ ಕರಿಕಲೆ ಚಂದ್ರಕಾAತ ಮಹೇಶ್ ರೇವಣಸಿದಪ್ಪ ಪಾಸಯ್ಯ ಮೂಲವೇ ಅಲಿಮಾ ಸಾಬ್ ಮಜಕುರಿ. ಜಾತ್ರಾ ಉತ್ಸವ ಸಮಿತಿಯ ಪ್ರಮುಖ ಪದಾಧಿಕಾರಿಗಳು ಹಾಜರಿದ್ದರು.