ನಿಗದಿತ ಸಮಯಕ್ಕೆ ವೀರಭದ್ರೇಶ್ವರ ರಥೋತ್ಸವ

ಹುಮನಾಬಾದ್ :ಜ.20:ಶ್ರೀ ಐತಿಹಾಸಿಕ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ಜರುಗುತ್ತಿವೆ. ಸೋಮವಾರ ರೇಣುಕಾ ಗಂಗಾಧರ ಶಿವಾಚಾರ್ಯದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕರ್ತರ ವಿಶೇಷ ಸಭೆ ಜರುಗಿತು. ಈ ಸಭೆಯಲ್ಲಿ ಈ ಕೆಳಕಂಡ ನಿರ್ಣಯ ಕೈಗೊಳ್ಳಲಾಯಿತು.

ವೀರಭದ್ರೇಶ್ವರ ದೇವರ ಅಗ್ನಿ ತುಳಿಯುವುದು ಹಾಗೂ ವೀರಭದ್ರೇಶ್ವರ ರಥೋತ್ಸವ ಬ್ರಾಹ್ಮಿ ಮುಹೂರ್ತದ ಮುಂಜಾವು 5:15ಕ್ಕೆ ನಿಗದಿತ ಸಮಯಕ್ಕೆ ನಡೆಯಲಿದೆ ಎಂದು ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಧಾರ ಶಿವಾಚಾರ್ಯರು ತಿಳಿಸಿದ್ದಾರೆ.

ಜನವರಿ 25, 26ರಂದು ಸರದಾರ ಪಟೇಲ್ ವೃತ್ತದ ವರೆಗೆ ಮಾತ್ರ ದೇವರ ಪಲ್ಲಕ್ಕಿ ಉತ್ಸವ ಇಳಿಸಿ ಶಾಲು ಹೊದಿಸಲಾಗುವುದು ನಂತರ ನೇರವಾಗಿ ಅಗ್ನಿ ಪ್ರವೇಶ ಹಾಗೂ ರಥೋತ್ಸವಕ್ಕೆ ಪಲ್ಲಕ್ಕಿ ಉತ್ಸವ ಸಾಗಲ್ಲಿದೆ ಎಂದು ಸ್ಪಷ್ಟಡಿಸಿದ್ದಾರೆ.

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರಣ್ಣಾ ಪಾಟೀಲ, ಮಲ್ಲಿಕಾರ್ಜುನ ಮಾಶೆಟ್ಟಿ ಮಹೇಶ ಅಗಡಿ , ಬಾಬುರಾವ ಪೆÇೀಚಂಪಳ್ಳಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ದತ್ತಕುಮಾರ ಚಿದ್ರಿ, ಸೋಮಶೇಖರ ಬುಳ್ಳಾ, ಮಲ್ಲಿಕಾಜುಕಾರ್ಜುನ , ಗುರು, ಆನಂದ ಯಲಮಡಗಿ, ಅರವಿಂದ , ಪ್ರಶಾಂತ ಚೀನಕೇರಾ, ರಾಚಣ್ಣಾ ಧುಮನಸೂರ ಸೇರಿದಂತೆ ವಿವಿಧ ಸಮಿತಿಗಳು ಸದಸ್ಯರು ಇದ್ದರು.