
ಬೀದರ ಡಿ.27: ಭಾರತೀಯ ಜನತಾ ಪಕ್ಷದ ಜಿಲ್ಲಾ ಕಚೇರಿಯಲ್ಲಿ ವೀರ ಬಾಲ ದಿವಸ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗುರು ಗೋವಿಂದ ಸಿಂಗರ ನಾಲ್ಕುಜನ ವೀರ ಪುತ್ರರಾದ ಬಾಬಾ ಅಜೀತ ಸಿಂಗ್À, ಬಾಬಾ ಜುಝಾರ ಸಿಂಗ್ ಬಾಬಾ ಜೊರಾವರ ಸಿಂಗ್ ಹಾಗೂ ಬಾಬಾ ಫತೇಹ ಸಿಂಗ್‍ರ ಬಲಿದಾನವನ್ನು ಸ್ಮರಿಸುತ್ತಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪಾ ಔರಾದೆ ರವರು ಗುರು ಗೊವಿಂದ ಸಿಂಘರ ನಾಲ್ಕುಜನ ವೀರ ಪುತ್ರರಾದ ಬಾಬಾ ಅಜೀತ ಸಿಂಗ್, ಬಾಬಾ ಜುಝಾರ ಸಿಂಗ್À, ಬಾಬಾ ಜೊರಾವರ ಸಿಂಗ್ ಹಾಗೂ ಬಾಬಾ ಫತೇಹ ಸಿಂಗ್‍ರ ಸರ್ವೊಚ್ಚ ಬಲಿದಾನವನ್ನು ಸ್ಮರಿಸುತ್ತಾ 1704 ರಲ್ಲಿ ಮುಘಲ ಶಾಸಕ ಔರಂಗ ಜೇಬನ ಅತ್ತ್ಯಾಚಾರದ ವಿರುದ್ಧ ಧರ್ಮದ ರಕ್ಷಣೆ ಮಾಡುತ್ತಾ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ವೀರಗತಿಕರಾದರು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ರಾಜಕುಮಾರ ಪಾಟೀಲ, ಸುಭಾಷ ಮಡಿವಾಳ, ಒ.ಬಿ.ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೀಲೆಶ ರಕ್ಷಾಳೆ, ರಮೇಶ ಬಿರಾದಾರ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದೀಪಕ ಗಾದಗೆ, ರೋಷನ ವರ್ಮಾ, ನೀತಿನ ನವಲಕೆಲೆ, ಮಾಯಾವತಿ ಕೋಟೆ, ಮಹಾನಂದಾ ಕೋಟೆ, ಭಿಮಣ್ಣಾ ಚಿಕ್ಕಪೇಟ, ಕೆ. ಮುದಸ್ಸರ ಅಹ್ಮದ್, ಸಂಗಮೇಶ ಗುಮ್ಮಾ, ವಿಜಯಕುಮಾರ ಹೆಗ್ಗೆ, ಮಹೇಶ ದೊಡ್ಡಿ, ಸಂಜು ಜಿರ್ಗೆ, ಬಸವ ಮೂಲಗೆ, ಹಾಗೂ ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀನಿವಾಸ್ ಚೌದರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.























