ವಟ ಸಾವಿತ್ರಿ ವ್ರತ:ಆಲದ ಮರಕ್ಕೆ ಪೂಜೆ

ಕಮಲನಗರ:ಜೂ.11:ವಟ ಸಾವಿತ್ರಿ ವ್ರತ ನಿಮಿತ್ಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಇರುವ ಆಲದ ಮರಕ್ಕೆ ದಾರ ಸುತ್ತಿ ಪೂಜೆ ಮಾಡಿ ನೈವೇದ್ಯ ತೊರಿ ವಟ ಸಾವಿತ್ರಿ ವ್ರತ ಆಚರಣೆ ಮಾಡಲಾಯಿತು.

ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಹುಣ್ಣಿಮೆಯಂದು ವಟ ಸಾವಿತ್ರಿ ವೃತವನ್ನು ಆಚರಿಸಲಾಯಿತು. ಪತಿಯ ದೀರ್ಘಾಯುಷ್ಯಕ್ಕಾಗಿ ಪೂಜೆ ಪುನಸ್ಕಾರ ಮಾಡುವುದರಿಂದ ಆಲದ ಮರಕ್ಕೆ ಸುತ್ತುವುದು ರಿಂದ ಜೀವನದಲ್ಲಿ ಸಂತೋಷ ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.
ಈ ದಿನವು ವಿವಾಹಿತ ಮಹಿಳೆಯರಿಗೆ ವರ್ಷದ ಅತ್ಯಂತ ಮಂಗಳಕರ ದಿನವಾಗಿದೆ.

ಈ ಸಂದರ್ಭದಲ್ಲಿ ಮಹಿಳೆಯರಾದ ಉಷಾ ಬಿರಾದಾರ, ಸಪ್ನಾ ರಾಂಪುರೆ, ಸುವರ್ಣ ಪಾಟೀಲ, ಆಶಾ ಬಿರಾದಾರ, ಶೈಲಜಾ ಬಿರಾದಾರ, ಪ್ರಯಾಗಬಾಯಿ ರಾಂಪುರೆ, ಶೀಲಾ ರಾಂಪುರೆ, ರಾಣಿ ಶ್ರೀಗಿರೆ, ಆರತಿ ಚಾಂಡೇಶ್ವರೆ, ಸೋನಾಲಿ ಬನವಾಸೆ ಹಾಗೂ ಹನುಮಾನ ದೇವಾಲಯದ ಪೂಜಾರಿ ಶೇವಮ್ಮ ಹೂಗಾರ ಸೇರಿದಂತೆ ಅನೇಕರು ಇದ್ದರು.