ವರ್ತೂರಿಗೆ ಎಚ್‌ಡಿಡಿ ವಿರುದ್ಧ ಮಾತಾಡುವ ನೈತಿಕತೆಯಿಲ್ಲ

ಕೋಲಾರ,ನ,೧೯- ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ವರ್ತೂರು ಪ್ರಕಾಶ್‌ಗೆ ಇಲ್ಲ ಹೇಳಿಕೆ ಕೇಳಿಸಿಕೊಂಡು ಸುಮ್ಮನೆ ಇದ್ದಿದ್ದು ಸಿದ್ದರಾಮಯ್ಯ ನಡುವಳಿಕೆಗೆ ಶೋಭೆ ತರುವಂತದಲ್ಲ ಸಿದ್ದರಾಮಯ್ಯ ಅವರನ್ನು ಬೆಳೆಸಿದಿದ್ದು ದೇವೇಗೌಡರು ಅನ್ನೋ ಕಾರಣಕ್ಕಾಗಿ ವೇದಿಕೆಯಲ್ಲಿಯೇ ವರ್ತೂರು ಪ್ರಕಾಶಗೆ ಉತ್ತರ ಕೊಡಬೇಕಾಗಿತ್ತು ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ತಿರುಗೇಟು ನೀಡಿದ್ದಾರೆ.


ಮಾಜಿ ಪ್ರಧಾನಿ ದೇವೇಗೌಡರು ಸಿಎಂ ಸಿದ್ದರಾಮಯ್ಯ ಅಂತವರಿಗೆ ನೂರು ಜನಕ್ಕೆ ಸಮ ಅಂತಹ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ವರ್ತೂರು ಪ್ರಕಾಶ್ ಹತ್ತು ವರ್ಷ ಶಾಸಕರಾಗಿ ಸಚಿವರಾಗಿದ್ದ ವ್ಯಕ್ತಿ ಕಾಗೆಗೂ ಕೋಗಿಲಿಗೂ ವ್ಯತ್ಯಾಸ ಗೊತ್ತಿಲ್ಲವೇ ದೇವೇಗೌಡರು ರಾಜ್ಯದಿಂದ ಹೋಗಿ ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಏಕೈಕ ವ್ಯಕ್ತಿ ಸಿದ್ದರಾಮಯ್ಯ ಇನ್ನೂ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಅಷ್ಟೇ ರಾಷ್ಟ್ರ ಮುಖಂಡರನ್ನು ರಾಜ್ಯ ಮುಖಂಡರಿಗೆ ಹೋಲಿಕೆ ಮಾಡಿದ್ದೇ ಮೊದಲೇ ತಪ್ಪು ಎಂದು ವಾಗ್ದಾಳಿ ನಡೆಸಿದರು.


ಸಿದ್ದರಾಮಯ್ಯ ಅಂತಹ ನೂರು ನಾಯಕರನ್ನು ಸೃಷ್ಟಿ ಮಾಡುವ ಶಕ್ತಿ ದೇವೇಗೌಡರಿಗೆ ಇದೆ ಅದನ್ನು ಮಾಡಿ ತೋರಿಸಿದ್ದಾರೆ ಅದರ ಭಾಗವಾಗಿಯೇ ಬಂದವರು ಸಿದ್ದರಾಮಯ್ಯ ಅನ್ನೋದನ್ನು ವರ್ತೂರು ಪ್ರಕಾಶ್ ಮರೆತಿದ್ದಾರೆ ದೇವೇಗೌಡರ ಬಗ್ಗೆ ತೆಗಳಿ ಸಿದ್ದರಾಮಯ್ಯ ಅವರನ್ನು ಹೊಗಲಿ ನೀನು ದೊಡ್ಡ ವ್ಯಕ್ತಿಯಾಗಲು ಸಾಧ್ಯವಿಲ್ಲ ನಿನ್ನ ಹೇಳಿಕೆಯನ್ನು ನಿಮ್ಮ ಪಕ್ಷದವರು ವಿರೋಧ ಮಾಡಿದ್ದಾರೆ ಜೊತೆಗೆ ನಿನ್ನ ವಿರುದ್ದ ಪ್ರತಿಭಟನೆ ಸಹ ಮಾಡಿದ್ದಾರೆ ಎಂದರು


ದೇವೇಗೌಡರು ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ ಎಲ್ಲಾ ಜಾತಿ ಜನಾಂಗದವರನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದಾರೆ ದೇವೇಗೌಡರಂತಹ ನಾಯಕರು ರಾಜ್ಯಕ್ಕೆ ಅವಶ್ಯಕವಾಗಿದ್ದಾರೆ ಒಬ್ಬ ಮಾಜಿ ಪ್ರಧಾನಿ ಬಗ್ಗೆ ಇಂತಹ ಹೇಳಿಕೆ ನೀಡುವುದು ವರ್ತೂರು ಪ್ರಕಾಶ್ ಅವರಿಗೆ ಶೋಭೆ ತರಲ್ಲ ಕುರುಬ ಜನಾಂಗವನ್ನು ಮೆಚ್ಚಿಸಲು ಹೋಗಿ ದೇವೇಗೌಡರನ್ನು ಅವಮಾನ ಮಾಡುವುದು ಸರಿಯಲ್ಲ ಎಲ್ಲಾ ನನ್ನಿಂದಲೇ ಎಂದು ಹೇಳಿಕೊಳ್ಳುವ ವರ್ತೂರು ಪ್ರಕಾಶ್ ಗೆ ಕೋಲಾರದ ಜನತೆ ಚುನಾವಣೆಯಲ್ಲಿ ಸತತವಾಗಿ ಎರಡು ಬಾರಿಯೂ ಮೂರನೇ ಸ್ಥಾನಕ್ಕೆ ಕಳಸಿ ಸರಿಯಾದ ಬುದ್ಧಿ ಕಲಿಸಿದ್ದಾರೆ ಎಂದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಜೆಡಿಎಸ್ ಪಕ್ಷದಲ್ಲಿ ಇದ್ದವರು ದೇವೇಗೌಡರ ಗರಡಿಯಲ್ಲಿ ಪಳಗಿ ಅವರ ಮಾರ್ಗದರ್ಶನದಲ್ಲಿಯೇ ಬೆಳದು ಬಂದಿದ್ದಾರೆ ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಬಾಯಿಗೆ ಬಂದಂತೆ ಮಾತಾಡುವುದನ್ನು ಬಿಡಬೇಕು ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿ ಭಾಗವಾಗಿ ವರ್ತೂರು ಪ್ರಕಾಶ್ ಕೂಡ ಇದ್ದಾರೆ ಎಂಬುದನ್ನು ಮರೆಯಬಾರದು ಮುಂದಿನ ದಿನಗಳಲ್ಲಿ ಸರಿಯಾದ ಬುದ್ದಿ ಕಲಿಸಲಿದ್ದಾರೆ ಎಂದು ಬಣಕನಹಳ್ಳಿ ನಟರಾಜ್ ಎಚ್ಚರಿಕೆ ನೀಡಿದ್ದಾರೆ.