Home ಜಿಲ್ಲೆ ಕಲಬುರಗಿ ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗಾಗಿ ರಾಜ್ಯ ಬಂದ್ ಕರೆಗೆ ತಾಲೂಕಿನಲ್ಲಿ ವಿವಿಧ ಸಂಘಟನೆಗಳ ಬೆಂಬಲ

ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗಾಗಿ ರಾಜ್ಯ ಬಂದ್ ಕರೆಗೆ ತಾಲೂಕಿನಲ್ಲಿ ವಿವಿಧ ಸಂಘಟನೆಗಳ ಬೆಂಬಲ

ಅಫಜಲಪುರ: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ತಾಲೂಕು ಬಂದ್‌ಗೆ ಅಫಜಲಪುರದಲ್ಲಿ ಬೆಂಬಲ ವ್ಯಕ್ತವಾಯಿತು. ರೈತರ ಪ್ರತಿಭಟನೆಯಿಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಜನ ಜೀವನದ ಮೇಲೆ ಪರಿಣಾಮ ಬೀರಿತು. ರೈತರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಹೆದ್ದಾರಿ ಸಂಚಾರ ತಡೆದು ಸರ್ಕಾರ ಗಮನಕ್ಕೆ ತರಲಾಯಿತು.

ಅಫಜಲಪುರ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ರೈತರು ಗುಂಪು ಗುಂಪಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಂದ್‌ಗೆ ಸಹಕರಿಸುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ಈ ವೇಳೆ ಹಲವು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಬಳಿಕ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರು ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೋರಾಟಗಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರಮೇಶ ಶೆಟ್ಟಿ, ರಮೇಶ ಪಾಟೀಲ್, ಗುರು ಚಾಂದಕವಟೆ, ರಮೇಶ ಹೂಗಾರ, ಬಸವರಾಜ ವಾಳಿ, ಬಸವರಾಜ ಹಿಂಚಗೇರಿ, ಶಾಂತು ಅಂಜುಟಗಿ, ನಾಮದೇವ ಕಡಕೋಳ, ಅರವಿಂದ ದೊಡ್ಮನಿ, ಭೀಮರಾವ್ ಗೌರ, ಅಣ್ಣಾರಾಯ ಪಾಟೀಲ್, ಪ್ರಭಾವತಿ ಮೇತ್ರಿ, ಮಹಿಬೂಬ ನದಾಫ್, ಭೀಮಾಶಂಕರ ಬಡದಾಳ, ಚಂದು ಬನ್ನಟ್ಟಿ, ರಮೇಶ ವಾಲಿಕಾರ, ಚಂದ್ರಾಮಪ್ಪ ಬಳಗೊಂಡಿ, ಚಂದು ಕರ್ಜಗಿ, ಬಿ.ಎಂ. ರಾವ್, ಗುರುಶಾಂತ ಕಲಶೆಟ್ಟಿ, ಧರ್ಮು ಗಾಡಿ, ಯಶವಂತ ಉಮ್ಮಾಗೋಳ, ಈರಣ್ಣ ನರೋಣಿ, ಸಿದ್ದು ಕಲಶೆಟ್ಟಿ ಸೇರಿದಂತೆ ಹಲವು ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ರೈತರ ಹೋರಾಕ್ಕೆ ಕೆಕೆಆರ್ಟಿಸಿ ಅದ್ಯಕ್ಷ ಅರುಣ ಪಾಟೀಲ ಬೆಂಬಲ.

ಚವಡಾಪುರದಲ್ಲಿ ನಡೆದ ಹೆದ್ದಾರಿ ತಡೆ ಹೋರಾಟದಲ್ಲಿ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಅವರು ಭಾಗವಹಿಸಿ ಅನ್ನದಾತರ ಬೇಡಿಕೆ ಸೂಕ್ತವಾಗಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಗಮನ ಹರಿಸ ವೈಜ್ಞಾನಿಕವಾಗಿ ಸೂಕ್ತವಾದ ಕಬ್ಬಿನ ಬೆಲೆ ನಿಗದಿ ಮಾಡಿ ಕಾರ್ಖಾನೆಗಳು ಪ್ರಾರಂಭ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡಿದರು. ನಮ್ಮ ರಾಜ್ಯ ಸರ್ಕಾರ ಯಾವಾಗಲೂ ಅನ್ನದಾತರ ಪರವಾಗಿದೆ ಎಂದು ಅನ್ನದಾತರಿಗೆ ಅಭಯ ನೀಡಿದರು.