Home ಜಿಲ್ಲೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಪತ್ತೆಗೆ ವಿವಿಧ ವೈದ್ಯಕೀಯ ಪರೀಕ್ಷೆ

ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಪತ್ತೆಗೆ ವಿವಿಧ ವೈದ್ಯಕೀಯ ಪರೀಕ್ಷೆ

ಬೀದರ್: ಭಾರತೀಯ ಸ್ಟೇಟ್ ಬ್ಯಾಂಕ್‍ನ (ಎಸ್‍ಬಿಐ) S.W.ಂ.S.ಖಿ.ಊ. ಉಪಕ್ರಮದಡಿ 2026-27ನೇ ಸಾಲನ್ನು ‘ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ವರ್ಷ’ವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ವಿಶ್ವ ಹೃದಯ ದಿನದ ಅಂಗವಾಗಿ ಶುಕ್ರವಾರ ನಗರದ ಶಿವಾಜಿ ವೃತ್ತದ ಸಮೀಪದ ಎಸ್‍ಬಿಐ ಮುಖ್ಯ ಶಾಖೆಯಲ್ಲಿ ಸಮಗ್ರ ಹೃದಯ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಡಾ. ಗುಂಡೇರಾವ್ ಶೆಡೋಲೆ ಹಾಗೂ ಭಾಲ್ಕಿ-ಭಾತಂಬ್ರಾದ ಡಾ. ಸುಕಾಳೆ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬ್ಯಾಂಕ್ ಸಿಬ್ಬಂದಿಗೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಮುಂಚಿತವಾಗಿ ಗುರುತಿಸುವುದು ಹಾಗೂ ಸಿಬ್ಬಂದಿಯಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು.

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆದ ಶಿಬಿರದಲ್ಲಿ ಬ್ಯಾಂಕ್ ಸಿಬ್ಬಂದಿಯ ಹೃದಯದ ಆರೋಗ್ಯ ಹಾಗೂ ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಮುಂಚಿತವಾಗಿ ಗುರುತಿಸುವುದು ಮತ್ತು ಸಿಬ್ಬಂದಿಯಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಶಿಬಿರದ ಉದ್ದೇಶವಾಗಿತ್ತು.

ಶಿಬಿರದಲ್ಲಿ ಸೀರಮ್ ಲಿಪಿಡ್ ಪೆÇ್ರಫೈಲ್, ಎಚ್‍ಎಸ್‍ಸಿಆರ್‍ಪಿ (hs-ಅಖP), ಎಚ್‍ಬಿಎ1ಸಿ (ಊbಂ1ಛಿ), ಸೀರಮ್ ಹೋಮೋಸಿಸ್ಟೀನ್, ದೇಹದ ಸಂಯೋಜನೆ ವಿಶ್ಲೇಷಣೆ ಹಾಗೂ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆಗಳನ್ನು ಕೈಗೊಳ್ಳಲಾಯಿತು. 40 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗೆ ಇಸಿಜಿ ಪರೀಕ್ಷೆ ನಡೆಸಲಾಯಿತು. ಜತೆಗೆ ಎತ್ತರ, ತೂಕ, ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ), ನಾಡಿಮಿಡಿತ, ರಕ್ತದೊತ್ತಡ ಹಾಗೂ ಸೊಂಟ ಮತ್ತು ಸೊಂಟದ ಸುತ್ತಳತೆಯನ್ನೂ ಪರಿಶೀಲಿಸಲಾಯಿತು.

ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ, ಕೆಲಸದ ಒತ್ತಡ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ, ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ತಗ್ಗಿಸಬಹುದು ಎಂಬ ಸಂದೇಶವನ್ನು ಶಿಬಿರದ ಮೂಲಕ ನೀಡಲಾಯಿತು.

ಎಸ್‍ಬಿಐನ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ನಡೆದ ಈ ಶಿಬಿರದಲ್ಲಿ ಸಮೀಪದ ಶಾಖೆಗಳ ಸಿಬ್ಬಂದಿಯೂ ಭಾಗವಹಿಸಿದರು.

ಈ ಸಂದರ್ಭದಲ್ಲಿ ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕ ಜಯ್ ಕುಮಾರ್, ರವಿ ನಾಯಕ್, ರಮೇಶ್ ಶಿಂದೆ, ಸಿದ್ರಾಮ್ ಸೀತಾ, ಮನೋಜ್ ದುಬೇ, ಶಶಿಕಾಂತ್ ಕಾಳೆ, ಪರಮೇಶ್ವರ್ ರೆಡ್ಡಿ, ವಿಕಾಸ್ ಸರಣ್, ಪವನ್ ಪೂಜಾರಿ, ವಿಷ್ಣುಕಾಂತ್ ಫತೇಪೂರೆ, ನಾಗೇಂದ್ರ, ಗವಾಲಾ ಹಾಗೂ ಉಷಾ ಕಸ್ತೂರಿವಾರ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.