
ಯಾದಗಿರಿ:ಡಿ.30: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ವೈಜ್ಞಾನಿಕ ಸಮ್ಮೇಳನದ ಅಂಗವಾಗಿ ವೈಚಾರಿಕ ಚಿಂತನಾ ಗೋಷ್ಠಿಗಳು ಜರುಗಿದವು.
ಮೊದಲಿಗೆ ‘ಸಂವಿಧಾನ ಸಂವೇದನೆ ಮತ್ತು ಕಂದಾಚಾರದ ಸುಳಿಯೊಳಗೆ’ ವಿಷಯದ ವೈಚಾರಿಕ ಗೋಷ್ಠಿ ನಡೆಯಿತು, ಖ್ಯಾತ ನ್ಯಾಯವಾದಿ ಸುಧೀರ್ ಮರೋಳ್ಳಿ ಮತ್ತು ಮಾನವ ಬಂದತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ವಿಷಯ ಮಂಡನೆ ಮಾಡಿದರು.
ಪರಿಷತ್ತಿನ ಗೌರವ ಮಾರ್ಗದರ್ಶಕ ಡಾ. ವಿಜಯ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ರಾಯಚೂರಿನ ರವಿ ಪಾಟೀಲ್ ಮತ್ತಿತರರು ಭಾಗಿಯಾಗಿದ್ದರು.
ಬಳಿಕ ‘ಎಐ – ಏನು ಮಾಯಾವೋ? ಮತ್ತು ಮೌಢ್ಯತೆ ಹೊರದೂಡಲು ಬನ್ನಿ’ ವಿಷಯದ ಚಿಂತನಗೋಷ್ಠಿ ನಡೆಯಿತು. ಲೆಕ್ಕಪರಿಶೋಧಕ ಡಿ.ಎಂ. ಸುರೇಶ್ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪೆÇ. ಶಿವಗಂಗಾ ರುಮ್ಮಾ ಅವರು ವಿಷಯ ಮಂಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾಗರತ್ನ ಪಾಟೀಲ ಯಕ್ಷತಿ ಯಕ್ಷಂತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಹಾಪುರದ ಭಾರತೀ ಶರಣಬಸಪ್ಪ ದರ್ಶನಾಪುರ ಭಾಗವಹಿಸಿದ್ದರು.
ಗೋಷ್ಠಿಯಲ್ಲಿ ಯಾದಗಿರಿ ನಗರಸಭಾ ಮಾಜಿ ಅಧ್ಯಕ್ಷೆ ಕು. ಲಲಿತಾ ಅನಪುರ, ಮುಖಂಡರಾದ ರಕ್ಷಿತಾ ಅರವಿಂದ ರೆಡ್ಡಿ ಮತ್ತು ನಾಗರತ್ನ ಕುಪ್ಪಿ ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ
ಸಂಜೆ ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಮ್ಮೇಳನ ಅಧ್ಯಕ್ಷರ ವೈಚಾರಿಕ ವೈಜ್ಞಾನಿಕ ಬದುಕು ಬರಹದ ಬಗ್ಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿಚಾರವಾದಿಗಳು, ವೈಚಾರಿಕ ಚಿಂತಕರು, ಬಂಡಾಯ ಮತ್ತು ಶರಣ ಸಾಹಿತಿಗಳು ಸಮೂಹದ ನಡೆಸಿದರು.
ಖ್ಯಾತವೈದ್ಯ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಡಾ. ಅಂಜೀನಪ್ಪ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪವಾಡಗಳ ಅನಾವರಣ
ರಾತ್ರಿ ಖ್ಯಾತ ವಿಚಾರವಾದಿ ಹಾಗೂ ಪರಿಷತ್ತಿನ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರಿಂದ ‘ಹುಚ್ಚು ಮನದ ಕುದುರೆಯನ್ನೇರಿ – ಪವಾಡಗಳ ಅನಾವರಣ’ ಕಾರ್ಯಕ್ರಮ ನಡೆಯಿತು. ತಿಂತಣಿ ಸಿದ್ದರಾಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ನಂತರ ‘ಕಾಲಚಕ್ರ’ ನಾಟಕ ಪ್ರದರ್ಶನಗೊಂಡಿತು.

























