
ಕಲಬುರಗಿ,ಡಿ.26: ಇಲ್ಲಿನ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದ 37 ನೇ ವರ್ಷದ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನೆರವೇರಿತು. ಅರ್ಚಕರಾದ ಗುಂಡಾಚಾರ್ಯ ನರಿಬೋಳ ಅವರ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಾಮೂಹಿಕ ಸತ್ಯನಾರಾಯಣ ಪೂಜೆ, ನಂತರ ಕಲಬುರಗಿ ನಗರದ ವಿವಿಧ ಪಾರಾಯಣ ಸಂಘಗಳ ಸದಸ್ಯರುಗಳಿಂದ ಪಾರಾಯಣ, ನಂತರ ಮಹಿಳಾ ಭಜನಾ ಮಂಡಳಿಗಳ ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವ, ನಂತರ ಪಂ ವೆಂಕಣ್ಣಚಾರ್ಯ ಪೂಜಾರ ಅವರಿಂದ ಪ್ರವಚನ, ಜೀವಾ ಆಸ್ಪತ್ರೆಯ ಡಾ ವಿಶ್ವರಾಜ್ ತಡಕಲ್ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು. ಬಂದ ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅರ್ಚಕರು ಮಾತನಾಡಿ ಶ್ರೀ ಪ್ರಶಾಂತ ಹನುಮಂತ ದೇವರ ಸೇವೆಯನ್ನು ಮಾಡಿದ ಭಕ್ತರಿಗೆ ಅವರ ಮನೋಕಾಮನೆಗಳು ಸಿದ್ಧಿಸುತ್ತಿದ್ದು. ವಿಶೇಷವಾಗಿ ತೆಂಗಿನಕಾಯಿ ಕಟ್ಟಿ ಸೇವೆ ಸಲ್ಲಿಸಿದ ಭಕ್ತರಿಗೆ ಅಂದುಕೊಂಡ ಕಾರ್ಯಗಳು ಸಿದ್ಧಿಸುತ್ತಿವೆ ಎಂದರು. ಮಂದಿರದ ಅಧ್ಯಕ್ಷರಾದ ಡಿ ವ್ಹಿ ಕುಲಕರ್ಣಿ, ನರಸಿಂಹ ಅಗ್ನಿಹೋತ್ರಿ, ಶಾಮರಾವ ಕುಲಕರ್ಣಿ, ಗೋಪಾಲರಾವ ಕುಲಕರ್ಣಿ, ಡಾ. ಗುರುರಾಜ್ ದೇಶಪಾಂಡೆ, ಸುಭಾಸ್ ದೇಶಪಾಂಡೆ, ಲಕ್ಷ್ಮೀಕಾಂತ ದೇಸಾಯಿ, ಪ್ರಮೋದ ಪಂತ, ಶ್ರೀನಿವಾಸ ನೆಲೋಗಿ, ಭೀಮಾಚಾರ್ಯ ನರಿಬೋಳ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದರು.

























