
ಕಲಬುರಗಿ,ಜು.೨-ಕಳೆದ ೨೫ ವರ್ಷಗಳಿಂದ ಸತತವಾಗಿ ಗ್ರಾಮ ಪಂಚಾಯತ ಸದಸ್ಯರಾಗಿ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾಗುವುದರೊಂದಿಗೆ ನಿರಂತರ ರಾಜಕೀಯ ಮತ್ತು ಸಮಾಜಿಕ ಸೇವೆ ಮಾಡುತ್ತ ಬರುತ್ತಿರುವ ಬಹುಮುಖ ವ್ಯಕ್ತಿತ್ವದ ಪವನಕುಮಾರ ಬಿ.ವಳಕೇರಿ ಅವರಿಗೆ ಜುಲೈ ೯ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸಾಯಿ ಮಂದಿರ ಹತ್ತಿರವಿರುವ ವಿ.ಎಲ್.ಪಾಟೀಲ ಕಲ್ಯಾಣ ಮಂಟಪದಲ್ಲಿ ನಾಗರಿಕ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೦೦ ಇಸವಿಯಿಂದ ೨೦೨೫ರವರೆಗೆ ಸತತವಾಗಿ ೨೫ ವರ್ಷಗಳ ಕಾಲ ರಾಜಕೀಯ ಅನುಭವ ಹೊಂದಿರುವ ಪವನಕುಮಾರ ಬಿ.ವಳಕೆರಿಯವರು ಸೋಲಿಲ್ಲದ ಸರದಾರರಾಗಿ ನಂದಿಕೂರ, ಸೀತನೂರ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆಯಾಗುವುದರೊಂದಿಗೆ ಇತಿಹಾಶ ನಿರ್ಮಿಸಿದ್ದಾರೆ. ಇದರೊಂದಿಗೆ ಒಂದು ಬಾರಿ ನಂದಿಕೂರ ಗ್ರಾಮ ಪಂಚಾಯತ ಅಧ್ಯಕ್ಷರಾಗಿಯೂ ಕೂಡ ಆಯ್ಕೆಯಾಗಿದ್ದಾರೆ. ಪ್ರಸ್ತುತ ನಗರದ ಹೊರ ವಲಯದಲ್ಲಿರುವ ನಂದಿಕೂರ ಗ್ರಾಮ ಪಂಚಾಯತನ ಸದಸ್ಯರಾಗಿರುವ ವಳಕೇರಿ ಅವರು, ಗ್ರಾಮೀಣ ಪ್ರದೇಶದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಬಡವರಿಗೆ, ನಿರ್ಗತಿಕರಿಗೆ ಮತ್ತು ನೊಂದವರಿಗೆ ಸಹಾಯ ಮತ್ತು ಸಹಕಾರ ಮಾಡುತ್ತ ಬಂದಿದ್ದಾರೆ. ಪವನಕುಮಾರ ಬಿ.ವಳಕೇರಿ ಅವರ ಧರ್ಮಪತ್ನಿ ಶ್ರೀಮತಿ ಅನಿತಾ ವಳಕೇರಿ ಅವರೂ ಸಹ ಒಮ್ಮೆ ಗ್ರಾಮಪಂಚಾಯತಿಯ ಸದಸ್ಯರಾಗಿ ಜೊತೆಗೆ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಶ್ರೀಮತಿ ಅನಿತಾ ಪವನಕುಮರ ವಳಕೇರಿ ರವರು ಖಣದಾಳ ಜಿಲ್ಲಾ ಪಂಚಾಯತನ ಸದಸ್ಯರಾಗಿ ಆಯ್ಕೆಯಾಗಿ, ಕಲಬುರಗಿ ಜಿಲ್ಲಾ ಪಂಚಾಯತಿನ ಉಪಾಧ್ಯಕ್ಷಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಜೂಲೈ ೯ ರಂದು ಜರುಗಲಿರುವ ವಳಕೇರಿ ಅವರ ಅಭಿನಂದನಾ ಕಾರ್ಯಕ್ರಮವನ್ನು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಾ ದರ್ಶಾನಾಪೂರ ರವರು ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷಯತೆಯನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲರವರು ವಹಿಸಲಿದ್ದಾರೆ. ಶರಣಬಸವೇಶ್ವರÀ ಮಹಾಸಂಸ್ಥಾನದ ಪೂಜ್ಯರಾದ ಡಾ.ದಾಕ್ಷಾಯಣಿ ಅವ್ವಾಜಿ, ಜಡಗಾ-ಮುಗಳಖೋಡ ಮಠದ ಪೂಜ್ಯರಾದ ಡಾ. ಮುರಘರಾಜೇಂದ್ರ ಮಹಾಸ್ವಾಮಿಗಳು, ಮುತ್ಯಾನ ಬಬಲಾದ ಮಠದ ಪೂಜ್ಯರಾದ ಗುರುಪಾದಲಿಂಗ ಮಹಾಸ್ವಾಮಿಗಳು, ಬಂತೆ ಬದಂತ ದಮ್ಮನಾಗ ರವರು ಸೇರಿದಂತೆ ಅನೇಕ ಮಠಾಧಿಶರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ ಎಂದು ತಿಳಿಸಿದರು.
ಅಭಿನಂದನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಕನೀಜ್ ಫಾತಿಮಾ, ಬಸವರಾಜ ಮತ್ತಿಮೂಡ, ತಿಪ್ಪಣ್ಣಪ್ಪ ಕಮಕನೂರ, ಶಶೀಲ ಜಿ.ನಮೋಶಿ, ಬಿ.ಜಿ.ಪಾಟೀಲ, ಜಗದೇವ ಗುತ್ತೇದಾರ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಅಂದು ನಡೆಯುವ ಸಮಾರಂಭದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಜನರಿಗೆ ಉಚಿತ ದಂತ, ನೇತ್ರ ಮತ್ತು ಇನ್ನಿತರ ಸಮಸ್ಯೆಗಳಿಗೆ ಸೂಕ್ತ ವೈದ್ಯರಿಂದ ಉಚಿತ ಚಿಕಿತ್ಸೆಯನ್ನು ಕೊಡಿಸಲಾಗುವುದು. ವಳಕೇರಿ ಅವರ ೨೫ನೇ ವರ್ಷದ ಸುದೀರ್ಘ ರಾಜಕೀಯ ಸೇವೆಯ ನಿಮಿತ್ಯ ೨೫ ಜನ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕಗಳಿಸಿದ ಕಲಬುರಗಿಯ ಸರಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರಕಾರಿ ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಗೌರವ ಸನ್ಮಾನ ನಡೆಯಲಿದೆ. ಖ್ಯಾತ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ತಂಡದವರಿAದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಅಭಿನಂದನಾ ಸಮಾರಂಭದ ಅಂಗವಾಗಿ ಅನಾಥಾಶ್ರಮ, ವೃದ್ಧಾಶ್ರಮ ಮತ್ತು ನಿರ್ಗತಿಕ ಕೇಂದ್ರಗಳಲ್ಲಿ ಇರುವವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸಂಗಮೇಶ ನಾಗನಹಳ್ಳಿ, ಸುರೇಶ ಬಡಿಗೇರ, ಗಣೇಶ ವಳಕೇರಿ, ಲೋಹಿತ ಕಲ್ಲೂರ, ಸಂತೋಷ ತಳವಾರ, ನಂದಕುಮಾರ ನಾಯಕ, ಮಾಲಾ ಕಣ್ಣಿ, ಶಿವರಾಜ ಡಿಗ್ಗಾಂವಿ, ಲಕ್ಷö್ಮಣ ಪೂಜಾರಿ, ಮಲ್ಲಿನಾಥ ನಾಗನಹಳ್ಳಿ, ಚಂದ್ರಕಾAತ ಸೀತನೂರ, ಸಂಪತಕುಮಾರ ವಳಕೇರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.