
ಭಾಲ್ಕಿ:ಡಿ.26: ದೇಶದ ಪ್ರಗತಿಗೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಸ್ಮರಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಬಿಜೆಪಿ ವತಿಯಿಂದ ಗುರುವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ದಿವಗಂತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಾಜಪೇಯಿ ಅವರು ದೇಶದ ಪ್ರಧಾನಿಯಾಗಿ ಜನಪರ, ಪಾರದರ್ಶಕ ಆಡಳಿತ ನೀಡಿದ್ದರು. ಸರ್ವ ಶಿಕ್ಷಣ ಅಭಿಯಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್, ಅಂತ್ಯೋದಯ, ಬೆಳೆ ವಿಮೆ ಸೇರಿದಂತೆ ಜನಪರ ಯೋಜನೆಗಳನ್ನು ವಾಜಪೇಯಿ ಅವರು ತಮ್ಮ ಅವಧಿಯಲ್ಲಿ ಜಾರಿಗೆ ತಂದು ದೇಶದ ಪ್ರಗತಿಗೆ ಹೊಸ ನಾಂದಿ ಹಾಡಿದ್ದರು.
ಅಂತವರ ಜನಪರ ಆಡಳಿತ, ಯೋಜನೆ, ಯೋಚನೆ ಎಲ್ಲ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಮಂಡಲ ಅಧ್ಯಕ್ಷವೀರಣ್ಣ ಕಾರಬಾರಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ, ಜೈ ಭೀಮ್ ಬಂದು, ಗೋವಿಂದರಾವ ಬಿರಾದಾರ್, ಜೈ ಭೀಮ್ ಬಂಧು, ಕೆ.ಡಿ.ಗಣೇಶ, ವೆಂಕಟ ಲಾಳೆ, ಅಶೋಕ ಪಾಟೀಲ್, ವೆಂಕಟ ಬಿರಾದಾರ್, ಬಾಬುರಾವ ಧೂಪೆ, ಸುಭಾಷ ಬಿರಾದಾರ್, ಸೂರಜಸಿಂಗ್ ರಾಜಪೂತ್, ಸಂಜೀವ ಸಿಂಧೆ, ಸಂತೋಷ ಬುಸಗುಂಡೆ, ಜಗನ್ನಾಥ ಬಿರಾದಾರ್, ವಿಜಯ ಕುಮಾರ್ ಕೋಳಿ, ಸಿದ್ದು ಕಾಡಾದಿ, ಶಾಹುರಾಜ ಪವಾರ್, ಸಂತೋಷ ಪಾಟೀಲ್, ಅನರಾಜ್ ಕುಂದೆ, ರಫೀಕ್ ಚೌದ್ರಿ, ದೇವಾನಂದ್ ಬಗ್ದೂರೆ, ಲಕ್ಷ್ಮಣ ಮುದಾಳೆ, ಡಾ.ಜಗದೀಶ್ ಭೂರೆ, ವಿಷ್ಣುಕಾಂತ ಹಿಲಾಲ್ಪುರ್, ಸಿದ್ದೋಧನ್ ಕಾಂಬಳೆ, ಸತೀಶ ನಾಯಕ್, ವೈಶಾಲಿ ಬಿರಾದಾರ್, ರೇಷ್ಮಾ ತಮಾಸಂಗೆ, ಮೀನಾಕ್ಷಿ, ಶಿವಕುಮಾರ ಮಲ್ಲಾಸುರೆ, ವೈಜಿನಾಥ, ಗಣಪತಿ ಮಾಟಿ ಸೇರಿದಂತೆ ಹಲವರು ಇದ್ದರು.
ಪಂಡರಿ ಮೇತ್ರೆ ಸ್ವಾಗತಿಸಿ, ನಿರೂಪಿಸಿದರು, ಪಾಂಡುರಂಗ ಕನಸೆ ವಂದಿಸಿದರು.























