ವಚನ ಕಂಠಪಾಠ ಸ್ಪರ್ಧೆ: ಬಹುಮಾನ ವಿತರಣೆ

ವಿಜಯಪುರ,ಮೇ.21: ತುಮಕೂರಿನ ವಚನ ಮಂದಾರ-ವಚನ ಸಾಹಿತ್ಯ, ಸಂಸ್ಕøತಿ ಮತ್ತು ತತ್ವಗಳ ಚಿಂತನಾ ವೇದಿಕೆ ವತಿಯಿಂದ ಬಸವ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ “ಮಕ್ಕಳಿಗಾಗಿ ಅಂತಾರಾಷ್ಟ್ರೀಯ ಮಟ್ಟದ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆ”ಯಲ್ಲಿ ತಾಲೂಕಿನ ನಾಗಠಾಣ ಗ್ರಾಮದ ಅವಳಿ ಸಹೋದರಿಯರಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಭಾಗವಹಿಸಿ, ತೀರ್ಪುಗಾರರ ಮೆಚ್ಚುಗೆ ಪಡೆದು ವಿಶೇಷ ಬಹುಮಾನ ಪಡೆದಿದ್ದಾರೆ.
ಅವರಿಗೆ ಪ್ರಶಸ್ತಿ ಪತ್ರ ಹಾಗೂ ಬಸವಣ್ಣನವರ ಮೊಮೆಂಟು ನೀಡಿ ಗೌರವಿಸಲಾಗಿದೆ ಎಂದು ವಚನ ಮಂದಾರ ಫೌಂಡೇಶನ್ ಅಧ್ಯಕ್ಷ ಡಾ. ವಿಜಯಕುಮಾರ ಕಮ್ಮಾರ, ಉಪಾಧ್ಯಕ್ಷರಾದ ಶಂಭು ಹಿರೇಮಠ, ಡಾ ಸರ್ವಮಂಗಳ ಸಕ್ರಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.