
ಔರಾದ್ :ಜು.೩: ಫ.ಗು.ಹಳಕಟ್ಟಿ ಅವರನ್ನು ವಚನ ಸಾಹಿತ್ಯದ ಪಿತಾಮಹಾ ಎಂದು ಕರೆದು ಗೌರವಿಸಲಾಗುತ್ತಿದೆ. ವಚನ ಸಾಹಿತ್ಯ ಸಂರಕ್ಷಿಸಿ ಶಾಶ್ವತವಾಗಿರುವಂತಹ ಮಹತ್ತರ ಕರ‍್ಯ ಮಾಡಿದ್ದಾರೆ ಎಂದು ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತನಲ್ಲಿ ಕಚೇರಿಯಲ್ಲಿ ಬುಧವಾರ ಫ.ಗು.ಹಳಕಟ್ಟಿ ಅವರ ೧೪೫ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸದಾ, ಸರಳ ಜೀವನ ನಡೆಸಿದ ಹಳಕಟ್ಟಿಯವರು ಅನೇಕರಿಗೆ ಮಾರ್ಗದರ್ಶಕರಾಗಿದ್ದರು ಎಂದು ಬಣ್ಣಿಸಿದರು. ಸಮಾಜದ ಎಲ್ಲ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಪ್ರಕಟಿಸುವುದರ ಜತೆಗೆ ಸಾಹಿತ್ಯವನ್ನು ಜನಮಾನಸಕ್ಕೆ ಪರಿಚಯ ಪಡಿಸಿದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿ ಎಂದರು.
ವೃತ್ತಿಯಿಂದ ವಕೀಲರಾಗಿದ್ದರೂ ಶಿಕ್ಷಣ, ಸಹಕಾರ, ಕೃಷಿ, ವಚನ ಸಾಹಿತ್ಯ ಮುಂತಾದ ಕ್ಷೆ?ತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿದ್ದರು ಎಂದರು.
ಈ ಸಂದರ್ಭದಲ್ಲಿ ತಾಪಂ ವ್ಯವಸ್ಥಾಪಕ ಸಂಜೀವಕುಮಾರ ಗೋರನಾಳೆ, ಸಿಬ್ಬಂದಿಗಳಾದ ಅಮರ ಬಿರಾದಾರ್, ಹರೀಶ, ಸಂದೀಪ, ಹರಿ, ಮಾರುತಿ, ರಾಜಶೇಖರ, ಶಿವರಾಜ ಸೇರಿದಂತೆ ಅನೇಕರಿದ್ದರು.