
ವಿಜಯಪುರ,ಜು.4:12ನೇ ಶತಮಾನದಲ್ಲಿ ಶರಣರ ಕ್ರಾಂತಿಯುಂಟಾದಾಗ ಬಸವಾದಿ ಶರಣರು ತಾಡೋಲೆಗಳನ್ನು ಬೆನ್ನಿಗೆ ಕಟ್ಟಿಕೊಂಡು, ಮಡಿವಾಳ ಮಾಚಿದೇವನ ಮುಖಂಡತ್ವದಲ್ಲಿ ದಂಡಿನ ಯಾತ್ರೆ ಮೂಲಕ ಅಳಿವಿನಂಚಿನಲ್ಲಿದ್ದಾಗ ಉಳಿವಿಯಲ್ಲಿ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿ ಆ ಸಾಹಿತ್ಯದ ಬುತ್ತಿಯನ್ನು ಉಣಬಡಿಸಿದ ಕೀರ್ತಿ ಅಂದಿನ ಶರಣರಿಗೆ ಸಲ್ಲುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ನಾಗರಾಜ ಹೇಳಿದರು.
ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ವಚನ ಸಾಹಿತ್ಯ ಸಂರಕ್ಷಣೆ ಕುರಿತು ಅವರು ಮಾತನಾಡಿದರು.
14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲದಲ್ಲಿ ಮುಂದೆ 17ನೇ ಶತಮಾನದಲ್ಲಿ ನೂರೊಂದು ವಿರಕ್ತರು ವಚನ ಸಾಹಿತ್ಯವನ್ನು ಸಂರಕ್ಷಿಸುತ್ತ ಬಂದಿದ್ದರಿಂದ ನಮಗೆ ಅವು ಇಂದು ನೋಡಲು ಸಿಗುವಂತಾಗಿವೆ ಎಂದು ನುಡಿದರು.
ಡಾ. ಎಸ್.ಕೆ. ಕೊಪ್ಪಾ ಅವರು ಮಾತನಾಡಿ, ಡಾ. ಹಳಕಟ್ಟಿಯವರು ವಿದ್ಯಾರ್ಥಿ ದೆಶೆಯಿಂದಲೆ ನೋವು, ಕಹಿ, ಅಸಹನೀಯತೆ ಎಲ್ಲ ದೌರ್ಬಲ್ಯಗಳನ್ನು ಮೆಟ್ಟಿನಿಂತು, ನಮಗೆ ಜೇನು ಹುಳ ಕಡಿದರೂ ಚಿಂತೆಯಿಲ.್ಲ ಆದರೆ ಜೇನು ಕೊಡುವುದು ನನ್ನಧರ್ಮ ಎಂದು ಭಾವಿಸಿದವರು ಎಂದು ಬಣ್ಣಿಸಿದರು.
ಡಾ. ಎಂ.ಎಸ್.ಮದಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿ ಪರಿಚಯಿಸಿದರು. ಡಾ. ಎಸ್.ಪಿ. ಶೇಗುಣಸಿ ವಂದಿಸಿದರು. ಡಾ. ಸುಭಾಸ ಕನ್ನೂರು ನಿರೂಪಿಸಿದರು.
ಸಮಾರಂಭದಲ್ಲಿ ಜಿ.ಬಿ.ಸಾಲಕ್ಕಿ, ಎಸ್.ಬಿ. ದೊಡಮನಿ, ಅನೀಲ ಹೊಸಮನಿ, ಪ್ರಭು ಪಾಟೀಲ, ಅಂಬಾದಾಸ ಜೋಶಿ, ಎಂ.ಎಲ್. ಮದಭಾವಿ, ಎಸ್.ಎನ್. ಶೇಗುಣಸಿ, ನೂತನ ಬ್ಯಾಕೋಡ ಮತ್ತು ಶಕುಂತಲಾ ದೊಡಮನಿ ದಂಪತಿಗಳು, ಎಸ್.ಎಚ್. ಕಸಬೇಗೌಡ, ದುಂಬಾಳೆ, ನೀಲಮ್ಮ ಮಠ, ಶಿರಹಟ್ಟಿ ಮತ್ತು ಜೆ.ಎಸ್.ಎಸ್. ಬಿ.ಇಡಿ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.