ವಿ. ವಿ. ಶಾಲೆಯ ೭೯ ರ ಸ್ವತಂತ್ರ ಸಂಭ್ರಮ

ಕೆಂಗೇರಿ.ಆ೧೬:ಯಶವಂತಪುರ ಕ್ಷೇತ್ರದ ಕೋಡಿಪಾಳ್ಯದ ವಿಶ್ವ ವೆಂಕಟೇಶ್ವರ ಸಮೂಹ ವಿದ್ಯಾ ಸಂಸ್ಥೆಯಲ್ಲಿ ೭೯ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ನೆರವೇರಿತು.


ಶಾಲೆಯ ಸಂಸ್ಥಾಪಕರಾದ ಕಟ್ಟ ಬಾಲಾಜಿರವರು ಧ್ವಜಾರೋಹಣ ರಾಷ್ಟ್ರಗೀತೆಯೊಂದಿಗೆ ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು. ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗಣಕ ಯಂತ್ರ ಹಾಗೂ ಗೌರವ ಸನ್ಮಾನ ನೀಡಿದರು. ನಂತರ, ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ದೇಶಭಕ್ತಿ ಗೀತೆಗಳು ಮತ್ತು ನೃತ್ಯಗಳು ನೆರೆದಿದ್ದವರನ್ನು ರಂಜಿಸಿದವು.

ಸ್ವಾತಂತ್ರ್ಯದ ಮಹತ್ವದ ಬಗ್ಗೆ ಅನೇಕರು ಮಾತನಾಡಿದರು. ಎಲ್ಲರೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಮತ್ತೊಂದು ವಿಶೇಷವೆಂದರೆ ನಗರದ ಕೆಲ ಬೀದಿ ಬೀದಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಎಲ್ಲಾ ಶಿಕ್ಷಕರು ಭಾರತದ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಹೊರಟಿ ಎಲ್ಲಾ ದೇಶಭಕ್ತರಲ್ಲಿ ಮತ್ತಷ್ಟು ಪ್ರೇಮ ಬೆಳೆಸಲಾಯಿತು.


ಈ ಕಾರ್ಯಕ್ರಮಕ್ಕೆ ಶಾಲೆಯ ಸಂಸ್ಥಾಪಕರು, ಕಟ್ಟ ಬಾಲಾಜಿ, ಶೈಕ್ಷಣಿಕ ಶಾಲಾ ಸಲಹೆಗಾರರಾದ ರಾಜೇಶ್ವರಿ ದತ್ತಾತ್ರಿ, ಡೀನ್ ಕಟ್ಟಾ ಕಿಶೋರ್, ಶಾಲಾ ಪ್ರಾಂಶುಪಾಲರು ರಾಜೇಶ್ವರಿ ಶ್ರೀಧರ್, ಕೆಬಿಸಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಐ ಚೆನ್ನರೆಡ್ಡಿ, ಉಪ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು, ಮತ್ತಿತರರು ಭಾಗವಹಿಸಿದ್ದರು.