
ಕಲಬುರಗಿ,ಜ.೨೧- ರೋಗಿಳ ಮಾನಸಿಕತೆಯನ್ನು ಅರ್ಥೈಸಿಕೊಳ್ಳುವುದು ಮತ್ತು ಅವರಲ್ಲಿರುವ ರೋಗಗಳ ಕ್ಷಮನಕ್ಕೆ ಬೇಕಾಗುವ ಅಗತ್ಯ ಚಿಕಿತ್ಸೆಯನ್ನು ನೀಡುವುದು ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೂಲ ಉದ್ದೇಶವಾಗಿದೆ ಎಂದು ಉಸ್ತದ್ ಮಲ್ಟಿಸ್ಪೆಷಾಲಿಟಿ ಆಸ್ಪತೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ತನ್ವೀರ ಹುಸೇನ ಉಸ್ತಾದ ಅವರು ಹೇಳಿದರು.
ಕೇಂದ್ರ ಬಸ್ ನಿಲ್ದಾಣದ ಎದುರಿನ ಶಾಂತಿ ನಗರದಲ್ಲಿರುವ ಉಸ್ತಾದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿನ್ನೆ ಮಂಗಳವಾರ ಜ.೨೦ರಂದು ಆಯೋಜಿಸಲಾದ ಆಸ್ಪತ್ರೆಯ ೨ನೇ ವಾರ್ಷಿಕೋತ್ಸವ ಹಾಗೂ ಸೇವಾ ಸಮರ್ಪಣೆ ದಿನಾಚರಣೆ ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸುವ ಮೂಲಕ ಅವರು, ಚಾಲನೆ ನೀಡಿ ಮಾತನಾಡಿದರು.
ಆಸ್ಪತ್ರೆಗಳು ರೋಗಿಗಳ ಸೇವಾ ಕೇಂದ್ರಗಳಾಗಬೇಕು, ರೋಗಿಗಳ ಸೇವೆಯಲ್ಲಿರು ವೈದ್ಯರು ಮತ್ತು ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ನಕರಾತ್ಮಕ ವಿಷಯಗಳು ರೋಗಿಗಳಲ್ಲಿ ಮೂಡದಂತೆ ಜಾಗ್ರತೆ ವಹಿಸಬೇಕು ಬೇಕು, ರೋಗಿ ಮತ್ತು ವೈದ್ಯನ ನಡುವಿನ ವಿಶ್ವಾಸ ಮತ್ತು ನಂಬಿಕೆಯೇ ಸಕರಾತ್ಮಕತೆಯ ಭೂನಾದಿಯಾಗಬೇಕು ಎಂದು ಅವರು ಹೇಳಿದರು.
ಆಸ್ಪತ್ರೆಯ ಎಮರ್ಜೆನ್ಸಿ ಫಿಸಿಷಿಯನ್ ಮತ್ತು ಇಂಟೆನ್ಸಿವಿಸ್ಟ ಡಾ.ಅಬ್ದುಲ ರಜಾಕ ಮಡಕಿ ಅವರು, ಮಾತನಾಡಿ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕಣಗಳು ತುರ್ತು ಮತ್ತು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ರೋಗಿಳ ಜೀವ ರಕ್ಷಕವಾಗಿ ಕಾಪಾಡುತ್ತವೆ ಅವುಗಳ ನಿರ್ವಹಣೆಯನ್ನು ಇಲ್ಲಿನ ನುರಿತ ಸಿಬ್ಬಂದಿಗಳು, ವೈದ್ಯರು ಶ್ರಮಿಸುತ್ತಿರುವುದರಿಂದಾಗಿ ಹಲವಾರು ಜನ ರೋಗಿಗಳ ಜೀವವನ್ನು ರಕ್ಷಿಸಿದ ಕೀರ್ತಿ ಎಲ್ಲ ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದರು.
ಆಸ್ಪತ್ರೆಯ ನಿರ್ದೇಶಕಿ ಡಾ. ಸೈದಾ ಸುಬಿಯಾ ತನ್ವೀರ, ಡಾ. ರಾಜೀವ ಕೊಣಿನ, ಡಾ.ಅಹ್ಮದ ಫರಾಜ್ ಪಟೇಲ್, ಡಾ.ಅನ್ನು ಚವ್ಹಾಣ, ಡಾ.ಅಯೇಶಾ ಖಾನಂ, ವೈದ್ಯಕೀಯ ಸಿಬ್ಬಂದಿಗಳಾದ ಫಯಾತ್ ಅಹ್ಮದ, ಸನಾ, ಫರಹೀನ್, ಸಾದಿಯಾ, ಮೊಹ್ಮದಿ, ಅಕ್ಸಾ, ಅರ್ಫಾ, ಶೋಹೇಬ, ಸವಿತಾ, ಹೀನಾ, ದಿನೇಶ, ಸಾಗರ ಮತ್ತು ಸೈಫನ ಪಟೇಲ ಸೇರಿದಂತೆ ಸಿಬ್ಬಂದಿ ಬಳಗ ಭಾಗವಹಿಸಿದ್ದರು.























