Home ಜಿಲ್ಲೆ ಕಲಬುರಗಿ ಆರೋಗ್ಯ ಸೇವೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಅಗತ್ಯ: ಶಾಸಕ ಅಲ್ಲಮಪ್ರಭು ಪಾಟೀಲ

ಆರೋಗ್ಯ ಸೇವೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಅಗತ್ಯ: ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ನಗರದ ಎಂ.ಎಸ್.ಕೆ. ಮಿಲ್ ರಸ್ತೆಯ ಕೇಂದ್ರ ಬಸ್ ನಿಲ್ದಾಣದ ಎದುರಿನ ಕಪಿಲಾ ಲಾಡ್ಜ್ ಕಾಂಪ್ಲೆಕ್ಸ್‍ನಲ್ಲಿ ನೂತನವಾಗಿ ಆರಂಭಿಸಲಾದ ‘ಅದ್ವಿತಿ ಎಂಆರ್ ಡಯಾಗ್ನೋಸ್ಟಿಕ್ ಸೆಂಟರ್’ ಅನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಭಾನುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವುದು ರೋಗಗಳ ನಿಖರ ಪತ್ತೆ ಮತ್ತು ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಗುಣಮಟ್ಟದ ವೈದ್ಯಕೀಯ ಪರೀಕ್ಷಾ ಸೌಲಭ್ಯಗಳು ಜನರಿಗೆ ಸುಲಭವಾಗಿ ಲಭ್ಯವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶ್ರೀ ಭರಧ್ವಜ ಸ್ವಾಮೀಜಿ, ಡಾ. ಅರುಣಕುಮಾರ ಹರಿದಾಸ, ವಿನೋದಕುಮಾರ ಎಂ. ರೋಜಾ, ವಸಂತಕುಮಾರ ಎಂ. ರೋಜಾ, ವ್ಯವಸ್ಥಾಪಕರಾದ ಎಮ್ ಕುಸುಮಾಕರ್ ಹಾಗೂ ಸಂಗನಬಸವ, ಶಹಾಪೂರ ನಿವೃತ್ತ ಉಪನ್ಯಾಸಕ ಭೀಮರಾಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಹಣೆ ಸುಧಾಕರ್ ರವರು ನೆರವೇರಿಸಿಕೊಟ್ಟರು