Home ಜಿಲ್ಲೆ ಆರೋಗ್ಯದ ಹಿತದೃಷ್ಟಿಯಿಂದ ಮಣ್ಣಿನ ಮಡಕೆ ಬಳಸಿ :ಲಕ್ಷ್ಮೀ ಕುಂಬಾರ

ಆರೋಗ್ಯದ ಹಿತದೃಷ್ಟಿಯಿಂದ ಮಣ್ಣಿನ ಮಡಕೆ ಬಳಸಿ :ಲಕ್ಷ್ಮೀ ಕುಂಬಾರ

ಗುರುಮಠಕಲ್:ಏ.೮: ಆರೋಗ್ಯಕ್ಕೆ ಮಣ್ಣಿನ ಪಾತ್ರೆಗಳೆ ಆಸರೆ ಎಂದು ಶ್ರೀ ಮತಿ ಲಕ್ಷ್ಮೀ ಕುಂಬಾರ ಕೊಂಕಲ್ ಗ್ರಾಮದಲ್ಲಿ ಜಾಗೃತಿ.
ಇಂದಿನ ಆಧುನಿಕ ಯುಗದಲ್ಲಿ ಸ್ಟೀಲ್ ಮತ್ತು ಪ್ಲಾಸ್ಟಿಕ್ ಪಾತ್ರೆಗಳ ಅಬ್ಬರ ಹೆಚ್ಚಾಗಿದ್ದರೂ, ಪುರಾತನ ಕಾಲದ ಮಣ್ಣಿನ ಪಾತ್ರೆಗಳ ಬಳಕೆ ಮಾತ್ರ ಅಂದಿಗು, ಇಂದಿಗು, ಎಂದೆAದಿಗೂ ಪ್ರತಿಯೋಬ್ಬ ಮನ್ಯುಷರಿಗೂ ಅರೋಗ್ಯದ ಹಿತದೃಷ್ಟಿಯಿಂದ ಅತಿ ಅವಷ್ಯಕವಾಗಿದೆ ಎಂದು ಶ್ರೀ ಮತಿ ಲಕ್ಷ್ಮೀ ಕುಂಬಾರ ಅವರು ಹೇಳಿದರು. ಗ್ರಾಮದ ಹಿರಿಯರಾದ ಡಿ. ನಾರಾಯಣ ಮಾತನಾಡಿ ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರು ಮತ್ತು ಆಹಾರ ಕೇವಲ ರುಚಿಯನ್ನಷ್ಟೇ ನೀಡುವುದಿಲ್ಲ, ಬದಲಾಗಿ ಆರೋಗ್ಯಕ್ಕೂ ಅತ್ಯುತ್ತಮವಾದದ್ದು. ಕೈಯಲ್ಲಿ ಮಣ್ಣಿನ ಮಡಕೆಯನ್ನು ಹಿಡಿದು ಅದರ ವೈಶಿಷ್ಟ್ಯಗಳನ್ನು ವಿವರಿಸಿ ಹೇಳಿದ ಅವರು, ಮಣ್ಣಿನ ಪಾತ್ರೆಗಳ ಬಳಕೆಯಿಂದಾಗುವ ಲಾಭಗಳನ್ನು ನೆರೆದಿರುವ ಜನರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಮಣ್ಣಿನ ಪಾತ್ರೆಗಳ ಬಳಕೆಯ ಪ್ರಮುಖ ಪ್ರಯೋಜನಗಳು
ನೈಸರ್ಗಿಕ ತಂಪು, ಮಣ್ಣಿನ ಮಡಕೆಯಲ್ಲಿರುವ ನೀರು ನೈಸರ್ಗಿಕವಾಗಿ ತಂಪಾಗಿರುತ್ತದೆ. ಇದು ಫ್ರಿಡ್ಜ್ ನೀರಿನಂತೆ ಗಂಟಲಿಗೆ ಹಾನಿ ಮಾಡುವುದಿಲ್ಲ, ಬದಲಾಗಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ.
ಪೋಷಕಾಂಶಗಳ ಸಂರಕ್ಷಣೆ, ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆಹಾರದಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ನಾಶವಾಗದೆ ಹಾಗೆಯೇ ಉಳಿಯುತ್ತವೆ. ಮಣ್ಣನ್ನು ನಾವು ಮಗುವಿನಂತೆ ಕಾಪಡಬೇಕು.
ಆಮ್ಲೀಯತೆ ನಿಯಂತ್ರಣ ಮಣ್ಣು ಕ್ಷಾರೀಯ ಗುಣವನ್ನು ಹೊಂದಿರುವುದರಿAದ, ಆಹಾರದಲ್ಲಿರುವ ಆಮ್ಲೀಯತೆಯನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
ರುಚಿಕರ ಅಡುಗೆ: ಮಣ್ಣಿನ ಪಾತ್ರೆಯಲ್ಲಿ ನಿಧಾನವಾಗಿ ಬೇಯುವ ಆಹಾರವು ವಿಶೇಷವಾದ ಮಣ್ಣಿನ ಸುವಾಸನೆ ಮತ್ತು ಅದ್ಭುತ ರುಚಿಯನ್ನು ಹೊಂದಿರುತ್ತದೆ.
ನಮ್ಮ ಪೂರ್ವಜರು ಮಣ್ಣಿನ ಪಾತ್ರೆಗಳನ್ನು ಬಳಸುತ್ತಿದ್ದರಿಂದಲೇ ದೀರ್ಘಕಾಲ ಆರೋಗ್ಯವಾಗಿದ್ದರು. ನಾವು ಮತ್ತೆ ಆ ಹಳೆಯ ಪದ್ಧತಿಯನ್ನು ಅಳವಡಿಸಿಕೊಂಡರೆ ಆಸ್ಪತ್ರೆಗಳ ಅಲೆದಾಟವನ್ನು ಕಡಿಮೆ ಮಾಡಬಹುದು,” ಎಂದು ಡಿ. ನಾರಾಯಣ ಈ ಸಂದರ್ಭದಲ್ಲಿ ತಿಳಿಸಿದರು.
ಪರಿಸರ ಸ್ನೇಹಿಯಾಗಿರುವ ಮತ್ತು ಅಗ್ಗದ ದರದಲ್ಲಿ ಸಿಗುವ ಮಣ್ಣಿನ ಪಾತ್ರೆಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಬಳಸುವಂತಾಗಲಿ ಎಂಬುದು ಅವರ ಆಶಯವಾಗಿದೆ. ಈ ಸಂದರ್ಭದಲ್ಲಿ ಬಸಮ್ಮ ಕುಂಬಾರ, ಅಂಜಪ್ಪ ಕುಂಬಾರ, ಬಿಂದು ಪ್ರಿಯ ಕುಂಬಾರ, ರೇಣುಕಾ ಕಂಬಾರ, ಅಯ್ಯಪ್ಪ ಕುಂಬಾರ, ರಾಧಮ್ಮ ಕುಂಬಾರ, ಶಶಿಕಲಾ ಕಂಬಾರ, ಬೀಮಪ್ಪ ಕಂಬಾರ, ಲಿಂಗಪ್ಪ ಕಂಬಾರ, ಸಿದ್ದು ಕಂಬಾರ, ಗ್ರಾಮದ ಹಲವು ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.