ಸಿರಿಯಾ ಐಸಿಸ್ ನೆಲಗಳ ಮೇಲೆ ಅಮೆರಿಕಾ ದಾಳಿ

ವಾಷಿಂಗ್ಟನ್,ಡಿ.೨೦- ಸಿರಿಯಾದಲ್ಲಿ ಐಸಿಸ್ ಉಗ್ರರ ವಿರುದ್ದ ಅಮೇರಿಕಾ ಬೃಹತ್ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಅಮೆರಿಕದ ಪಡೆಗಳ ಮೇಲೆ ಐಸಿಸ್ ದಾಳಿ ನಡೆಸಿದೆ

ಯುದ್ಧ ವಿಮಾನಗಳು,ದಾಳಿ ಹೆಲಿಕಾಪ್ಟರ್‍ಗಳು ಮತ್ತು ಫಿರಂಗಿಗಳು “ಮಧ್ಯ ಸಿರಿಯಾದಾದ್ಯಂತ ಅನೇಕ ಸ್ಥಳಗಳಲ್ಲಿ ೭೦ ಕ್ಕೂ ಹೆಚ್ಚು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಅಮೇರಿಕಾ ಸೆಂಟ್ರಲ್ ಕಮಾಂಡ್ ಸೆಂಟರ್ ಹೇಳಿದೆ.

ಐಸಿಸ್ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಾಣಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆದಿದ್ದು “೧೦೦ ಕ್ಕೂ ಹೆಚ್ಚು ನಿಖರ ಯುದ್ಧಸಾಮಗ್ರಿಗಳನ್ನು ಬಳಸಿ ದಾಳಿ ನಡೆಸಿದೆ

ಡಿಸೆಂಬರ್ ೧೩ ರಂದು ಪಾಲ್ಮಿರಾ ನಗರದಲ್ಲಿ ಐಸಿಸ್ ಹೊಂಚುದಾಳಿಯಲ್ಲಿ ಇಬ್ಬರು ಅಮೇರಿಕಾ ಸೈನಿಕರು ಮತ್ತು ಒಬ್ಬ ಅಮೇರಿಕಾ ನಾಗರಿಕ ಸಾವನ್ನಪ್ಪಿದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಎಸ್ ಭದ್ರಕೋಟೆಗಳ ವಿರುದ್ಧ “ನಾವು ತುಂಬಾ ಬಲವಾಗಿ ದಾಳಿ ಮಾಡುತ್ತಿದ್ದೇವೆ” ಎಂದು ಹೇಳಿದರು.

ಸೆಂಟ್‌ಕಾಮ್ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಪ್ರತಿಕ್ರಿಯಿಸಿ ಅಮೆರಿಕ “ಈ ಪ್ರದೇಶದಾದ್ಯಂತ ಅಮೆರಿಕನ್ನರು ಮತ್ತು ಪಾಲುದಾರರಿಗೆ ಹಾನಿ ಮಾಡಲು ಪ್ರಯತ್ನಿಸುವ ಭಯೋತ್ಪಾದಕರನ್ನು ನಿರಂತರವಾಗಿ ಬೆನ್ನಟ್ಟುವುದನ್ನು ಮುಂದುವರಿಸುತ್ತದೆ” ಎಂದು ಹೇಳಿದ್ಧಾರೆ

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕಾರ್ಯಾಚರಣೆ “ಯುದ್ಧದ ಆರಂಭವಲ್ಲ ಇದು ಪ್ರತೀಕಾರದ ಘೋಷಣೆಯಾಗಿದೆ” ಎಂದು ಹೇಳಿದ್ಧಾರೆ

ಅಮೆರಿಕನ್ನರನ್ನು ಗುರಿಯಾಗಿಸಿಕೊಂಡರೆ ಪ್ರಪಂಚದ ಎಲ್ಲಿಯಾದರೂ ಅಮೆರಿಕ ನಿಮ್ಮನ್ನು ಬೇಟೆಯಾಡುತ್ತದೆ ಎಚ್ಚರಿಕೆ ನೀಡಿದ್ದಾರೆ. ಬೇಟೆಯಾಡಿದ್ದೇವೆ ಮತ್ತು ಶತ್ರು ಕೊಂದಿದ್ದೇವೆ. ಬಹಳಷ್ಟು. ಮತ್ತು ನಾವು ಮುಂದುವರಿಯುತ್ತೇವೆ” ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಹೇಳಿದ್ದಾರೆ