ಚನ್ನಮ್ಮನ ಕಿತ್ತೂರು,ಆ18: ರೈತರು ಆರ್ಥಿಕ ಭದ್ರತೆ ಹೊಂದಲು ಸಹಕಾರ ಸಂWಗಳ ಸ್ವಯಂ ಶಕ್ತಿ ಮತ್ತು ಸಾಧನೆ ಮುಖ್ಯವಾಗಿದ್ದು ನಾವು ಸಂಸ್ಥೆಗೆ ಒಳ್ಳೆಯದು ಬಯಸಬೇಕು ಅದು ನಮನ್ನು ಬೆಳೆಸುತ್ತದೆ. ಎಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸಮೀಪದ ಖೋದಾನಪೂರ ಗ್ರಾಮ ಸೇರಿದಂತೆ ಕ್ಷೇತ್ರದ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನೂತನ ಉಗ್ರಾಣ ಕಟ್ಟಡದ ಶಿಲಾಫಲಕ ಅನಾವರಣಗೊಳಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಸತ್ಕಾರ ಸ್ವೀಕರಿಸಿ ಮಾತನಾಡಿ ಇಲ್ಲಿ ಜಾತಿ-ಭೇದ-ಪಕ್ಷ ಮರೆತು ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಮನೋಭಾವನೆ ಇದ್ದಾಗÀ ಸಂಸ್ಥೆ ಮುಂದೆಬರಲು ಸಾಧ್ಯವಾಗುತ್ತದೆ ಎಂದರು.
ಈ ಸಂಸ್ಥೆಗೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಗೊಬ್ಬರ-ಬೀಜ ಹಂಚಿಕೆ ಮಾಡಲು ಉಗ್ರಾಣದ ಅವಶ್ಯಕತೆಯಿತ್ತು. ಆ ವೇಳೆ ಆಡಳಿತ ಮಂಡಳಿಯವರು 4 ಗುಂಟೆ ಜಾಗೆ ಕೊಂಡುಕೊಂಡಿದ್ದರು. ಉಗ್ರಾಣ ಮತ್ತು ಆಫೀಸ್ ನಿರ್ಮಾಣಕ್ಕಾಗಿ 1% ಬಡ್ಡದರದಲ್ಲಿ ರೂ. 36 ಲಕ್ಷ ಸಾಲ ನೀಡಲಾಗಿದೆ. ಕಟ್ಟಡ ನಿರ್ಮಿಸಿದ ನಂತರ ಇಲ್ಲಿ ಗೊಬ್ಬರ, ಕೀಟನಾಶಕü, ರೇಷನ್, ಬೀಜ ವಿತರಿಸಲು ಅನುಕೂಲವಾಗುತ್ತದೆ. ರೈತರ ಅನುಕೂಲಕ್ಕಾಗಿ ಮೈಕ್ರೋ ಎಟಿಎಂ ಹಾಗೂ ಆಧಾರ್ ಕಾರ್ಡ ಮೂಲಕ ಹಣ ತೆಗೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಸಂಸ್ಥೆ ಒಮ್ಮತ ಪಡೆದು ರೈತರಿಗೆ 3% ಬಡ್ಡಿದರದಲ್ಲಿ ಟ್ರ್ಯಾಕ್ಟರ್ ಹಾಗೂ ಇನ್ನಿತರ ಸಾಲಗಳನ್ನು ನೀಡುತ್ತದೆ ಎಂದರು.
ಸಾನಿಧ್ಯವಹಿಸಿ ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ ಆಶೀರ್ವಚನ ನೀಡಿದರು.
ಸಾನಿಧ್ಯ ಕಂಚನಳ್ಳಿ ನಿತ್ಯಾನಂದ ಆಶ್ರಮದ ಶ್ರೀ ಸುಬ್ರಹ್ಮಣ್ಯ ಸ್ವಾಮಿಜೀ. ಸಭೆಯ ಅಧ್ಯಕ್ಷತೆ ಸಿದ್ದಪ್ಪ ಗಡ್ಡಿಗಾಲ ವಹಿಸಿಕೊಂಡಿದ್ದರು. ಭೂಮಿದಾನ ಶಿವಪ್ಪ ಗೌಡ್ರ, ಗ್ರಾಪಂ ಅಧ್ಯಕ್ಷ ನಿಂಗವ್ವ ಮುಕನವರ, ಬ್ಯಾಂಕ್ ನಿಯಂತ್ರಣಾಧಿಕಾರಿ ವ್ಹಿ.ಬಿ.ಗೀರನವರ, ಬ್ಯಾಂಕ್ ನಿರೀಕ್ಷಕ ಶಿವಾನಂದ ಗಣಾಚಾರಿ, ಪಿಕೆಪಿಎಸ್ ಸರ್ವ ನಿರ್ದೇಶಕರು, ಸಿಬ್ಬಂದಿ, ಕಾರ್ಯದರ್ಶಿ ರಾಯಣಗೌಡ ಪಾಟೀಲ, ಪಿಡಿಓ ಈಶ್ವರ ಹಡಪದ, ಸೋಮನಿಂಗಪ್ಪ ತಿಗಡಿ, ದೇವೇಂದ್ರ ಗೌಡ್ರ, ಗುರಪ್ಪ ಪಾಟೀಲ, ಮಹಾಂತೇಶ ಗೌಡ್ರ, ನಾಲ್ಕು ಗ್ರಾಮದ ಹಿರಿಯರು, ಸಾರ್ವಜನಿಕರು ಇನ್ನಿತರರಿದ್ದರು. ನಿರೂಪಣೆ ಶಿಕ್ಷಕ ನಾಗಪ್ಪ ಕಟ್ಟಿಮನಿ, ಸ್ವಾಗತ-ವಂದನಾರ್ಪಣೆ ಬಸವರಾಜ ಕಾಜಗಾರ ಮಾಡಿದರು.























