Home ಜಿಲ್ಲೆ ಎಲ್‌ಕೆಜಿ ಬಾಲಕನ ಅಕಾಲಿಕ ಮರಣ:ಕುಟುಂಬಕ್ಕೆ ಧೈರ್ಯ ತುಂಬಿದ ಶರಣಪ್ಪ ಮಾನೇಗಾರ

ಎಲ್‌ಕೆಜಿ ಬಾಲಕನ ಅಕಾಲಿಕ ಮರಣ:ಕುಟುಂಬಕ್ಕೆ ಧೈರ್ಯ ತುಂಬಿದ ಶರಣಪ್ಪ ಮಾನೇಗಾರ

ಗುರುಮಠಕಲ್: ಫೆ.೨೨: ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಸಂಭವಿಸಿದ ಮನಕಲುಕುವ ರಸ್ತೆ ದುರಂತವು ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಶಾಲೆಗೆ ತೆರಳುತ್ತಿದ್ದ ಎಲ್‌ಕೆಜಿ ವಿದ್ಯಾರ್ಥಿಯೊಬ್ಬ ದುರದೃಷ್ಟವಶಾತ್ ಶಾಲಾ ಬಸ್ ಚಕ್ರದಡಿ ಸಿಲುಕಿ ಮೃತಪಟ್ಟಿದ್ದು, ಗ್ರಾಮದಲ್ಲಿ ಶೋಕ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಬಾಲಕನ ಅಕಾಲಿಕ ಸಾವಿನಿಂದ ಕುಟುಂಬದ ಮೇಲೆ ದುಃಖದ ಪರ್ವತ ಕುಸಿದಂತಾಗಿದೆ.
ಘಟನೆಯ ತೀವ್ರತೆಯನ್ನು ಮನಗಂಡ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಶರಣಪ್ಪ ಮಾನೇಗಾರ ಅವರು ಮೃತ ಬಾಲಕನ ನಿವಾಸಕ್ಕೆ ಭೇಟಿ ನೀಡಿ ದುಃಖಿತ ಕುಟುಂಬದವರೊAದಿಗೆ ಕೆಲಕಾಲ ಮೌನವಾಗಿ ಕೂರಿ ಸಾಂತ್ವನ ಹೇಳಿದರು. “ಮಕ್ಕಳ ಸುರಕ್ಷತೆ ಕುರಿತು ಯಾವುದೇ ರೀತಿಯ ನಿರ್ಲಕ್ಷ್ಯ ಸಹನೀಯವಲ್ಲ. ಇಂತಹ ದುರಂತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯ,” ಎಂದು ಅವರು ಸ್ಪಷ್ಟವಾಗಿ ಅಭಿಪ್ರಾಯಪಟ್ಟರು.
ಈ ಪ್ರಕರಣದಲ್ಲಿ ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ಯಾರಾದರೂ ನಿರ್ಲಕ್ಷ್ಯ ತೋರಿದ್ದರೆ ಅವರ ವಿರುದ್ಧ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಬAಧಿತ ಅಧಿಕಾರಿಗಳಿಗೆ ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ. ಶಾಲಾ ವಾಹನಗಳ ಸುರಕ್ಷತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಆಡಳಿತಕ್ಕೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಮೃತ ಬಾಲಕನ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಹಾಗೂ ದುಃಖಭರಿತ ಕುಟುಂಬಕ್ಕೆ ಈ ಅಸಹನೀಯ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು. ಗ್ರಾಮಸ್ಥರು ಸಹ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿ, ಮಕ್ಕಳ ಸುರಕ್ಷತೆಗಾಗಿ ಕಠಿಣ ಮಾನದಂಡಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಭೀಮಶಪ್ಪ ಮಾಸ್ತರ, ಕೃಷ್ಣ ಚೆಪಟ್ಲ, ರಾಂಪುರ್ ಸಾಬಣ್ಣ ಗಾರಬೈ, ಮೋಗಲಪ್ಪ, ಈರಪ್ಪ, ನಾಗಪ್ಪ ಶಾನೆ, ಶರಣಯ್ಯ ಕಲಾಲ್, ಚನ್ನಬಸಪ್ಪ ಗಾಜರಕೋಟ, ಆಂಜನೇಯ ಕಟ್ಟಿಮನಿ, ಆನಂದ್ ಯಂಪಾಡ, ತಿಮ್ಮರೆಡ್ಡಿ, ಶರಣಪ್ಪ ತಾತಳಗೇರ, ಮಲ್ಲಪ್ಪ ಸಾವೂರು, ವೀರೇಶ್ ಸಜ್ಜನ್, ಮಂಜುನಾಥ ಮಲ್ಹಾರ, ರಘು ಕೊಂಕಲ್, ಮಣಿಕಂಠ ಸೈದಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮೃತ ಬಾಲಕನಿಗೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬದ ದುಃಖದಲ್ಲಿ ಭಾಗಿಯಾದರು.
ಗ್ರಾಮದಲ್ಲಿ ಕೆಲಕಾಲ ಗಂಭೀರ ಮತ್ತು ಮೌನದ ವಾತಾವರಣ ಆವರಿಸಿಕೊಂಡಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು