ಕಲಬುರಗಿ,ಆ.೨೫- ಮಹಾನಗರ ಪಾಲಿಕೆಯ ವಾರ್ಡ ಸಂಖ್ಯೆ ೫೩ ರಲ್ಲಿ ಬಿದ್ದಾಪುರ ಮುಖ್ಯ ರಸ್ತೆ ಹಾಗು ಪಿಎನ್ ಟಿ ಕ್ರಾಸ್ ಹತ್ತಿರ ಸುಮಾರು ೧೫ ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯುತ್ ಕಂಬಗಳನ್ನು ಹೊಸದಾಗಿ ಭೂಮಿ ಅಗೆದು ಹಾಕಲಾಗಿದೆ ಅದರಲ್ಲಿ ಹಳೆ ಜೇವರ್ಗಿ ರಸ್ತೆಯ ಬಿದ್ದಾಪುರ ಮುಖ್ಯ ದ್ವಾರದ ಪಕ್ಕದಲ್ಲಿ ರಸ್ತೆಯ ಮೇಲೆ ದೊಡ್ಡ ಗಾತ್ರದ ಕಂಬಕ್ಕೆ ವಿದ್ಯುತ್ ಅಳವಡಿಸುವ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ ಇಗಾಗಲೆ ಅದಕ್ಕೆ ಕಾಲಂ ಸಹ ಹಾಕಲಾಗಿದೆ ಈ ವಿದ್ಯುತ್ ಕಂಬ ಮತ್ತು ಅದಕ್ಕೆ ವಿದ್ಯುತ್ ದ್ವೀಪ ಹಾಕಲು ಅಂದಾಜು ೨೮ ಲಕ್ಷ ರೂಪಾಯಿಯ ಟೆಂಡರ ಇದಾಗಿದ್ದು ಟೆಂಡರ ಪಡೆದ ಗುತ್ತಿಗೆದಾರರ ಮುಖ್ಯ ರಸ್ತೆಯ ಮೇಲೆ ವಿದ್ಯುತ್ ಕಂಬ ಅಳವಡಿಸುತ್ತಿರುವುದರಿಂದ ಸಾವಿರಾರು ವಾಹನಗಳು ಓಡಾಟದ ರಸ್ತೆಯ ಮೇಲೆ ವಿದ್ಯುತ್ ಕಂಬ ಹಾಕಿರುವುದಕ್ಕೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತಪಡಿಸಲಾಗುತ್ತಿದೆ
ಅದಲ್ಲದೆ ಸದ್ಯ ಹಳೆಯ ವಿದ್ಯುತ್ ಕಂಬಗಳಿವೆ ಅದಕ್ಕೆ ಎಲ್ ಇ ಡಿ ಬಲ್ಬ್ ಸಹ ಅಳವಡಿಸಲಾಗಿದೆ ಒಂದೆ ಪ್ರದೇಶದಲ್ಲಿ ಇಗಾಗಲೆ ಸಾಕಷ್ಟು ಬೆಳಕು ಇದ್ದರು ಸಹ ಮಾಜಿ ಮೇಯರ್ ಯಲ್ಲಪ್ಪಾ ನಾಯಿಕೊಡಿ ಅವರ ನಿರ್ದೆಶದ ಮೇರೆಗೆ ಇ ಕಾಮಗಾರಿ ನಡೆಯುತ್ತಿದೆ ಕೆಲವೊಂದು ವಾರ್ಡಗಳಲ್ಲಿ ರಸ್ತೆ ಮೆಲೆ ಸಂಚರಿಸಲು ವಿದ್ಯುತ್ ದ್ವೀಪ ಇಲ್ಲದೆ ತೊಂದರೆ ಯಾಗುತ್ತಿದ್ದರು ಪಾಲಿಕೆಯ ವಿದ್ಯುತ್ ಶಾಖೆಯ ಇಂಜಿನಿಯರಗಳು ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿ ಅದ್ಯಕ್ಷರ ಎಂ ಎಸ್ ಪಾಟೀಲ ನರಿಬೋಳ ಅವರು ದೂರಿದ್ದಾರೆ.
ಇದಕ್ಕೆ ಹಿಂದಿನ ಮೇಯರ್ ಯಲ್ಲಪ್ಪ ನಾಯಿಕೊಡಿ ಕೈವಾಡವಿದೆ ಎಂದು ಸಾರ್ವಜನಿಕ ವಲಯದಲ್ಲಿ ಇದೊಂದು ಪರ್ಸೆಂಟೇಜ ಹೊಡೆಯಲು ಕೈಕೊಂಡ ಕಾಮಗಾರಿ ಎನ್ನುವುದು ಮೆಲ್ನೋಟಕ್ಕೆ ಎದ್ದುಕಾಣುತ್ತಿದೆ ಇಲ್ಲಿನ ಅವೈಜ್ಞಾನಿಕ ರಸ್ತೆಯ ಮೇಲೆ ಕಂಬ ಅಳವಡಿಸಿದ ಕಾಮಗಾರಿ ನಿಲ್ಲಿಸದೆ ಇದ್ದರೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಕೂಡಲೇ ಪಾಲಿಕೆ ಆಯುಕ್ತರು ಕಾಮಗಾರಿ ಅನುಮತಿ ನೀಡುವ ಮೊದಲು ವಿದ್ಯುತ್ ಕಂಬಗಳು ವಾಸ್ತವದ ವರದಿ ಅವಶ್ಯಕತೆ ಇರುವ ಕುರಿತಾಗಿ ಖುದ್ದಾಗಿ ಪರಿಶೀಲನೆ ನಡೆಸಲು ಅವರು ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆಯ ನೌಕರರಿಗೆ ಪಾವತಿಸಲು ಸಂಬಳಕ್ಕೆ ಹಣಕಾಸಿನ ತೊಂದರೆ ಇದೆ ಇಂತಹ ಅನಾವಶ್ಯಕ ಕಾಮಗಾರಿ ಮಾಡುವುದರಿಂದ ಮತ್ತಷ್ಟು ಹಣಕಾಸಿನ ಸಮಸ್ಯೆ ತಲೆದೋರುವ ಪರಿಸ್ಥಿತಿ ಉದ್ಬಯಿಸುತ್ತದೆ ಇಂತಹ ಕಾಮಗಾರಿ ಇದೆ ಹಂತದಲ್ಲಿ ನಿಲ್ಲಿಸಿ ವಿದ್ಯುತ್ ಕಂಬಗಳಿಲ್ಲದ ವಾರ್ಡ್ ನಲ್ಲಿ ಕೆಲಸ ಮಾಡುವಂತೆ ನಾವು ಆಗ್ರಹಿಸುತ್ತವೆ ಕಾಮಗಾರಿ ನಿಲ್ಲಿಸದಿದ್ದರೆ ಉಗ್ರ ಪ್ರತಿಭಟನೆಯ ಮುಖಾಂತರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಂ ಎಸ್ ಪಾಟೀಲ ನರಿಬೋಳ ಮತ್ತು ಸಾಮಾಜಿಕ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

























