Home ಜಿಲ್ಲೆ ಬೆಂಗಳೂರು ಅವೈಜ್ಞಾನಿಕ ಚರಂಡಿ ನಿರ್ಮಾಣ : ನಾಗರೀಕರ ಸಂಕಷ್ಟ

ಅವೈಜ್ಞಾನಿಕ ಚರಂಡಿ ನಿರ್ಮಾಣ : ನಾಗರೀಕರ ಸಂಕಷ್ಟ

filter: 0; jpegRotation: 0; fileterIntensity: 0.000000; filterMask: 0; module:0facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 116.0; hist255: 0.0; hist252~255: 0.0; hist0~15: 0.0;

ಕೆಜಿಎಫ್.ಆ.೧೪:ನಗರಸಭೆ ವ್ಯಾಪ್ತಿಯ ವಾರ್ಡ್ ೨೪ರ ೨ನೇ ಅಡ್ಡ ರಸ್ತೆಯಲ್ಲಿ ಚರಂಡಿ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಕಿಡಿಕಾರಿದ್ದಾರೆ.


೨ ನೇ ಅಡ್ಡ ರಸ್ತೆಯಲ್ಲಿ ಇದ್ದ ಚರಂಡಿಯನ್ನು ಕೆಡವಿ ಹೊಸದಾಗಿ ಚರಂಡಿ ನಿರ್ಮಾಣಕ್ಕೆ ಗುತ್ತಿಗೆದಾರರ ಮುಂದಾಗಿದ್ದರು.ಆದರೆ ಆ ಚರಂಡಿ ಕಾಮಗಾರಿಯನ್ನು ೨ ತಿಂಗಳಿನಿಂದ ಪೂರ್ಣಗೊಳಸದೇ ಇರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ ಎಂದು ಸ್ಥಳೀಯ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಚರಂಡಿ ಕೆಲಸ ಮಾಡಿ ೨ ತಿಂಗಳು ಕಳೆದರು ಇದುವರೆಗೂ ಚರಂಡಿ ಮೇಲೆ ಇದ್ದಂತಹ ಕಲ್ಲು ಚಪ್ಪಡಿಗಳನ್ನು ಹಾಕದೆ ಹಾಗೇ ಬಿಡಲಾಗಿದೆ. ಈ ಬಗ್ಗೆ ಇಂಜಿನಿಯರ್ ಗಳು ಹಾಗೂ ಗುತ್ತಿಗೆದಾರರನ್ನು ಪ್ರಶ್ನಿಸಿದರೇ ನಮಗೆ ಚರಂಡಿ ಮೇಲೆ ಕಲ್ಲು ಚಪ್ಪಡಿ ಹಾಕುವ ಗುತ್ತಿಗೆ ನೀಡಿಲ್ಲ.ನಮಗೆ ಕೇವಲ ಚರಂಡಿ ನಿರ್ಮಿಸಲು ಅಷ್ಟೆ ಗುತ್ತಿಗೆ ನೀಡಲಾಗಿದೆ ಎಂದು ಹೇಳುತ್ತಾರೆ.ಹೀಗಾಗಿ ಚರಂಡಿ ಮೇಲಿರುವ ಚಪ್ಪಡಿಗಳನ್ನು ತೆರವುಗೊಳಿಸುವವರು ಯಾರು ಎಂಬ ಪ್ರಶ್ನೆ ಉದ್ಭವಾಗಿದೆ ಎಂದು ನಾಗರೀಕರು ತಿಳಿಸಿದ್ದಾರೆ.