ಅವಿರೋಧ ಆಯ್ಕೆ

ಲಕ್ಷ್ಮೇಶ್ವರ,ನ25: ತಾಲೂಕಿನ ಬಾಲೆಹೊಸೂರು ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ನಿರ್ದೇಶಕರ ಮತ್ತು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.


ಸಂಘದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಜಿ ಆರ್ ಕೊಪ್ಪದ ಉಪಾಧ್ಯಕ್ಷರಾಗಿ ವಿರೂಪಾಕ್ಷಪ್ಪ ಮೂಲಿಮನಿ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಿವಣ್ಣ ಕಬ್ಬೆರ ಬಸವರಾಜ್ ನೀಲಣ್ಣವರ ಎಲ್ಲಪ್ಪ ಸುರನಗಿ ನರೇಂದ್ರಪ್ಪ ಜಾಲವಾಡಗಿ ಶಿವಪುತ್ರಪ್ಪ ಮಾಯಕೊಂಡ ಈಶ್ವರ್ ಮಾದಾಪುರ ಮಠ ಜಗದೀಶ್ ಜೋಗೇರ ಜುಂಜಪ್ಪ ಮುದಿಯಮ್ಮನವರ ಸಿದ್ದಲಿಂಗಯ್ಯ ಪಶುಪತಿಮಠ ಸಂತೋಷ್ ಬೆಂಚಳ್ಳಿ ಸದ್ದಾಮ್ ಹಾಲಗಿ ಕೋಟೆಪ್ಪ ಪೆದ್ದರ್ ಸೇರಿದಂತೆ ಅನೇಕ ಹಿರಿಯರು ಪಾಲ್ಗೊಂಡಿದ್ದರು.