ಅವಿರೋಧ ಆಯ್ಕೆ

ಬಂಕಾಪುರ,ಡಿ11: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ವಿಶ್ವನಾಥ ಬಂಡಿವಡ್ಡರ, ಉಪಾಧ್ಯಕ್ಷರಾಗಿ ಗೌಡಪ್ಪಾ ಬನ್ನೆ ಹಾಗೂ ಬಸವರಾಜ್ ಹೊನ್ನಣ್ಣವರ ಅವಿರೋಧವಾಗಿ ಆಯ್ಕೆಯಾದರು. ರಾಜ್ಯ ಘಟಕದ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಕಾರ್ಯಕಾರಣಿ ಸದಸ್ಯ ಪರಶುರಾಮ್ ಸತ್ಯಪ್ಪನವರ, ಜಿಲ್ಲಾಧ್ಯಕ್ಷ ನಾಗರಾಜ್ ಕುರುವತ್ತೆರ್, ಉಪಾಧ್ಯಕ್ಷ ನಾರಾಯಣ ಹೆಗಡೆ ಅವರ ಸಮ್ಮುಖದಲ್ಲಿ ತಾಲೂಕಿನ ಕಾನಿಪ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು.


ನೂತನ ಘಟಕದ ಪದಾಧಿಕಾರಿಗಳು ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಹಡಪದ್, ಕಾರ್ಯದರ್ಶಿಗಳಾಗಿ ಸುರೇಶ್ ಎಲಿಗಾರ್ ಹಾಗೂ ಸಿದ್ದರಾಮಗೌಡ ಮೇಳ್ಳಾಗಟ್ಟಿ, ಸುಧಾಕರ್ ದೈವಜ್ಞ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಗುಡಿಸಾಗರ್, ಕಾರ್ಯಕಾರಣಿ ಸದಸ್ಯ ಕಿರಣ ಮಾಸಣಗಿ, ಕಾನಿಪ ಸಂಘದ ಸದಸ್ಯರಾದ ಬಸಯ್ಯ ಹಿರೇಮಠ, ಪರಮೇಶ್ ಲಮಾಣಿ, ಈಶ್ವರ್ ಗೌಡ ಕರಿಗೌಡ್ರ, ವಿರೂಪಾಕ್ಷ ನೀರಲಗಿ, ಎಂ ವಿ ಗಡಾದ್, ದೇವರಾಜ್ ಸುಣಗಾರ, ರವಿ ಉಡುಪಿ, ಪುಟ್ಟಪ್ಪ ಲಮಾಣಿ, ನಿಂಗರಾಜ್ ಕೂಡಲ, ಸದಾಶಿವ್ ಹಿರೇಮಠ, ಶಿವಕುಮಾರ್ ಕವಟಗಿಮಠ, ಚನ್ನವೀರ ನೀರಲಗಿ, ಮಂಜುನಾಥ್ ಪಾಟೀಲ್ ಮುಂತಾದ ಉಪಸ್ಥಿತರಿದ್ದರು.