
ಬೀದರ:ಫೆ.೨:೨೦೨೬-೨೭ನೇ ಸಾಲಿನ ಶ್ರೀಮತಿ ನಿರ್ಮಲಾ ಸಿತಾರಾಮನ್ ಮಂಡಿಸಿದ ಬಜೆಟ್ ಆರ್ಥಿಕ ಸ್ಥಿರತೆ, ಮೂಲ ಸೌಕರ್ಯ ಮತ್ತು ಉತ್ಪದನಾ ವಲಯಗಳಿಗೆ ಆದ್ಯತೆ ನೀಡಿ ಶೇ ೬.೮ ರಿಂದ ೭.೨ರಷ್ಟು ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಅಲ್ಲದೇ ಪ್ರಧಾನವಾಗಿ ಎಐ, ರೋಬೋಟಿಕ್ಸ, ಹಸೀರು ಇಂಧನ ಮತ್ತು ಕೃಷಿ ಕ್ಷೇತ್ರಗಳ ಮೇಲೆ ಕೇಂದ್ರಿಕರಿಸಲಾಗಿದೆ. ಹಾಗು ಎಲ್ಲಾ ವರ್ಗದ, ಕೃಷಿಕರ, ಯುವಕರ, ಮತ್ತು ಮಹಿಳೆಯರ ಅಕಾಂಕ್ಷಿಗಳ ಮತ್ತು ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಉದ್ಯೋಗ ಸೃಷ್ಟಿಗೆ ಹಾಗು ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅನುದಾನ ಘೋಷಿಸಿರಿವುದು ಸ್ವಾಗತಾರ್ಹವಾಗಿದೆ.
೨೦೨೬-೨೭ನೇ ಸಾಲಿನ ಬಜೆಟ್ ಸಹ ಸರ್ಕಾರದ ಧ್ಯೇಯ “ಸಬಕಾ ಸಾಥ, ಸಬಕಾ ವಿಕಾಸ” ಹಾಗೂ ಸಬಕಾ ವಿಸ್ವಾಸ್” ಎನ್ನುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ಸರ್ಕಾರವು ತನ್ನ ೩.೦ ಅವಧಿಯ ಹೊಸ ಹೊಸ ಉದ್ದಿಮೆಗಳನ್ನು ಕೈಗಾರಿಕೆಗಳಲ್ಲಿ ಅಭಿವೃದ್ದಿಯನ್ನು ಸಾಧಿಸುತ್ತೇವೆ. ಉದ್ಯೊಗ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ, ಉದ್ಯೊಗ ಮತ್ತು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ, ಜೈವಿಕ ಔಷಧ ತಯಾರಿಕೆಗೆ ಸೆಮಿಕಂಡಕ್ಟರ್ ಮಿಷನ್‌ಗೆ ೪೦ ಸಾವೀರ ಕೋಟಿ ಮೀಸಲಿಟ್ಟಿರುವುದು, ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ ಕೈಗಾರಿಕೆಗಳಿಗೆ ಪುನಶ್ಚೆತನಕ್ಕೆ ಆದ್ಯತೆ ಅಂದರೆ ಸರ್ಕಾರದ ಸಂಕಲ್ಪ ಎಲ್ಲಾ ವರ್ಗದ, ಯುವಕರ, ಮಹಿಳೆಯರ, ಬಡವರ ಕಲ್ಯಾಣ ಮುಖ್ಯ ಆದ್ಯತೆಯಾಗಿದೆ.
ಸೀತಾರಾಮನವರು ಆಯುಷ್ ಔಷಾದಲಯಗಳು ನವೀಕರಿಸುವುದು, ಆಯುರ್ವೆದ ಶಿಕ್ಷಣ ಮೂಲ ಸೌಕರ್ಯವನ್ನು ವಿಸ್ತರಿಸುವುದು ಕೃಷಿ ಬೆಳೆಗಳಾದ ಗೊಡಂಬಿ, ತೆಂಗಿನಕಾಯಿ, ಶ್ರೀಗಂಧ, ಕೋಕೋ ಉತ್ಪನ್ನಕ್ಕೆ ಮತ್ತು ಸಂಸ್ಕರಣಕ್ಕೆ ಉತ್ತೇಜನ ನೀಡಿದೆ. ಅಲ್ಲದೇ ಕೃಷಿಕರಿಗೆ ರಿಯಾಯತಿಯಲ್ಲಿ ಸುಲಭ ಸಾಲ ಸೌಲಭ್ಯ ನೀಡಿ ಡೈರಿ ಅಭಿವೃದ್ಧಿಗೆ ಹಾಗು ಮೀನುಗಾರಿಕೆ ಒಲಯಕ್ಕೆ ಒತ್ತು ನೀಡಿದೆ.
ಹೊಸದಾಗಿ ಮೂರು ಎಮ್ಸ್ ಆಸ್ಪತ್ರೆಗಳ ಹಾಗು ೩ ಆಯುರ್ವೆದ ಸಂಸ್ಥೆಗಳ ಸ್ಥಾಪನೆ ಮತ್ತು ೭ ಕ್ಯಾನ್ಸರ್ ಔಷಧಿಗಳು ಹಾಗು ೧೭ ಮಾರಕ ರೋಗಗಳ ಔಷಧಗಳ ದರಗಳಲ್ಲಿ ಇಳಿಕೆ, ಚರ್ಮದ ಉತ್ಪನ್ನ, ಬ್ಯಾಟರಿ ಇನ್ನಿತರ ದರಗಳಲ್ಲಿ ಇಳಿಕೆ, ಇದರಿಂದ ಸಾಮಾನ್ಯ ವರ್ಗದವರಿಗೆ ಅನುಕೂಲವಾಗಿದೆ. ದೇಶದ ೪೫ ಪ್ರವಾಸಿ ತಾಣಗಳ ಗುರುತಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಅಲ್ಲದೇ ೧೦ ಸಾವೀರ ಪ್ರವಾಸೋದ್ಯಮ ಗೈಡ್‌ಗಳಿಗೆ ಕೇಂದ್ರದಿAದಲೇ ತರಬೇತಿ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಾಗದಿರುವುದು ಎಲ್ಲರಿಗೂ ಸಂತೋಷವನುAಟುಮಾಡಿದೆ. ಅಲ್ಲದೇ ರಸ್ತೆ ರೈಲು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿರುವದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ.
೨೦೨೬-೨೭ನೇ ಬಜೆಟ್ ಎಲ್ಲಾ ವರ್ಗದ, ಕೃಷಿಕರಿಗೆ, ಉದ್ದಿಮೆದಾರರಿಗೆ, ಯುವಕರಿಗೆ ಮಹಿಳೆಯರಿಗೆ ವಿಶೇಷವಾಗಿ ಬುಡಕ್ಕಟ್ಟು ಮತ್ತು ಎಸ್‌ಸಿಎಸ್ಟಿ ವರ್ಗದವರಿಗೆ ಅಭಿವೃದ್ಧಿ ಮತ್ತು ಆಶಾದಾಯಕ ಬಜೆಟ್ ಆಗಿದೆ. ಇದರಿಂದ ಮೋದಿಜಿಯªರ ನೇತೃತ್ವ ಹಾಗು ಆಶಾದಾಯಕ ಬಜೆಟ್ ಮಂಡನೆಮಾಡಿರುವ ಶ್ರೀಮತಿ ನಿರ್ಮಲಾ ಸೀತಾರಾಮನ ವಿತ್ತ ಸಚೆವೆರವರ ಬಹು ನಿರೀಕ್ಷೆಯಿಂದ ಭಾರತದ ಆರ್ಥಿಕತೆ ತೀವ್ರಗತಿಯಿಂದ ಅಭಿವೃದ್ಧಿಯ ಬದಲಾವಣೆಯಾಗಿ ೨೦೪೭ರ ವರೆಗೆ ಭಾರತ ವಿಕಸಿತ ಭಾರತ ಮತ್ತು ಅಭಿವೃದ್ಧಿ ರಾಷ್ಟçವಾಗಲಿದೆ ಎಂಬುದು ಹರ್ಷದಾಯಕ ಮತ್ತು ಸ್ವಾಗತಾರ್ಹವಾಗಿದೆ ಎಂದು ಬಿ.ಜಿ. ಶೆಟಕಾರ ಅಧ್ಯಕ್ಷರು ಹಾಗೂ ಡಾ. ವಿರೆಂದ್ರ ಶಾಸ್ತಿç ಕಾರ್ಯದರ್ಶಿಗಳು ತಿಳಿಸಿದ್ದಾರೆ.
























