
ಕೆ.ಆರ್.ಪುರ, ಜೂ.೧-ಬಡವರಿಗೆ ಹಾಗೂ ಬಡ ಮಕ್ಕಳ ಶಿಕ್ಷಣಕ್ಕೆ ಮಾಡುವ ಸೇವಾ ಕಾರ್ಯಗಳು ನಮಗೆ ನೆಮ್ಮದಿ ನೀಡುವ ಜೋತೆಗೆ ಸಾರ್ಥಕತೆ ನೀಡುತ್ತದೆ ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು. ಕ್ಷೇತ್ರದ ದೂರವಾಣಿ ನಗರ ವಾರ್ಡನಲ್ಲಿ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌಡ ಅವರ ಸೇವಾದಿನದ ಅಂಗವಾಗಿ ಆಟೋಚಾಲಕರಿಗೆ ಸಮವಸ್ತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.
ಹಲವಾರು ಸಮಾಜಮುಖಿ ಕಾರ್ಯಗಳಾದ ಬಡವರಿಗೆ ದಿನಸಿ ಕಿಟ್, ಸೀರೆ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ, ಊಟದ ವ್ಯವಸ್ಥೆ ಹೀಗೆ ಹಲವಾರು ಸೇವಾಕಾರ್ಯಗಳನ್ನು ಪ್ರದೀಪ್ ಗೌಡ ಮಾಡುತ್ತ ಬಂದಿದ್ದು,ವಾರ್ಡನ ಸಾರ್ವಜನಿಕರ ಹಿತಕಾಯುವ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.
ನಂತ ಮಾತನಾಡಿದ ದೂರವಾಣಿನಗರ ವಾರ್ಡನ ಜಿಬಿಎ ಆಕಾಂಕ್ಷಿ ಪ್ರದೀಪ್ ಗೌಡ ಅವರು ನನಗೆ ಶಾಸಕರಾದ ಬೈರತಿ ಬಸವರಾಜ ಅವರೇ ನಮಗೆ ಆದರ್ಶ, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಹಿಂದಿನಿಂದಲೂ ವಿಜೃಂಭಣೆಯಿಂದ ಮಾಡದೇ ಸರಳವಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದು, ಪ್ರತಿವರ್ಷ ಅನೇಕಾರು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದ್ದೇನೆ. ಕ್ಷೆತ್ರದಲ್ಲಿ ಸರಳತೆ, ಜನಸ್ನೇಹಿ ಆಡಳಿತ ನಡೆಸುತ್ತಿರುವ ಶಾಸಕ ಬಸವರಾಜ ಅವರ ಆದರ್ಶಗಳನ್ನು ಪಾಲಿಸಬೇಕಾದುದು ಅವರ ಅಭಿಮಾನಿಯಾದ ನನ್ನ ಕರ್ತವ್ಯವಾಗಿದ್ದು, ಅವರ ಪಾಲನೆಯಂತೆ ಬಡವರಿಗೆ ದಿನಸಿ ಕಿಟ್, ಆರೋಗ್ಯ ಶಿಭಿರ, ಸೀರೆ ವಿತರಣೆ, ಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹ ಹೀಗೆ ಹಲವಾರು ಕಾರ್ಯಕ್ರಮ ಮಾಡುತ್ತ ಬಂದಿದ್ದೆನೆ. ಇದರಿಂದ ನನ್ನ ಮನಸ್ಸಿಗೂ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ, ವಾರ್ಡನ ಅಧ್ಯಕ್ಷ ರಮೇಶ್ ಗೌಡ,ಮುಖಂಡರಾದ ಎಂ ಎಲ್ ಡಿಸಿ ಮುನಿರಾಜು, ರಮೇಶ್,ಜಗದೀಶ್,ದೀಪು ಜೇವಿಯರ್, ಇದ್ದರು.




























