
ಕಮಲನಗರ : ಜ.೫:ಗಡಿಭಾಗದ ಮಹಾರಾಷ್ಟçದ ಉದಗೀರ ಪಟ್ಟಣದಲ್ಲಿ ಹಾವಗೀಸ್ವಾಮಿ ಜಾತ್ರಾ ಮಹೋತ್ಸವದ ನಿಮಿತ್ತ ಕಮಲನಗರ ತಾಲ್ಲೂಕಿನ ಡೋಣಗಾಂವ(ಎA) ಗ್ರಾಮದ ಹಾವಗೀಸ್ವಾಮಿ ಮಠದಿಂದ ಭಾನುವಾರ ಬೆಳಿಗ್ಗೆ ಆರಂಭಗೊAಡ ಪಾದಯಾತ್ರೆಗೆ ಮಠದ ಉಮಾಕಾಂತ ದೇಶಿ ಕೇಂದ್ರ ಚಾಲನೆ ನೀಡಿದರು.
ಪಾದಯಾತ್ರೆಯು ಮುರ್ಕಿ ಮಾರ್ಗವಾಗಿ ಮುರ್ಕಿವಾಡಿ, ಧೊಂಡಿಪುರಗಾ, ತೊಂಡಚಿರ್, ಶೆಲ್ಯಾಳ ಮಾರ್ಗವಾಗಿ ಉದಗೀರ ಪಟ್ಟಣದ ಹಾವಗೀಸ್ವಾಮಿ ಮಠದವರೆಗೆ ಸಾಗಿತು.
ಶೈಲೇಶ ದೇಶಮುಖ, ವಿಜಯಕುಮಾರ ದೇಶಮುಖ, ಬಾಲಾಜಿ ದೇಶಮುಖ, ಅಪ್ಪಾಸಾಬ ದೇಶಮುಖ, ವಿಶಾಲ ದೇಶಮುಖ, ವಿಜಯಕುಮಾರ ದೇಶಮುಖ, ಶೈಲೇಶ ಪೇನೆ, ಉಮಾಕಾಂತ ಪಾಂಚಾಳ, ಶಿವಾನಂದ ಸ್ವಾಮಿ, ಮಾಣಿಕರಾವ ಹೊಂಡಾಳೆ, ಕಂಟೇಪ್ಪಾ ಹೊಂಡಾಳೆ, ಸೋಮನಾಥ ಚಂದಾಪುರೆ, ಅಜಯ ಬಾವಲಗಾವೆ ಹಾಗೂ ಹಾಗೂ ಅನೇಕ ಗ್ರಾಮದ ಮಹಿಳೆಯರು, ಪುರುಷರು ಪಾಲ್ಗೊಂಡಿದ್ದರು.
ದಾರಿಯೂದ್ದಕ್ಕೂ ಭಜನೆ, ಹಾವಗೀಸ್ವಾಮಿಯವರ ಜೈಕಾರ ಮುಗಿಲು ಮುಟ್ಟುವಂತೆ ಹಾಕಿದರು. ದಾರಿ ಮಧ್ಯೆ ಭಕ್ತಾದಿಗಳಿಗೆ ಅಲ್ಲಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.























