Home ಜಿಲ್ಲೆ ಕಲಬುರಗಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಪೊಲೀಸರ ಅಮಾನತು

ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಪೊಲೀಸರ ಅಮಾನತು

ಚಿತ್ತಾಪುರ;ಫೆ.20: ತಾಲೂಕಿನ ದಿಗ್ಗಾಂವ ಗ್ರಾಮದಿಂದ ಬೆನಕನಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ಆಡುವ ವೇಳೆ ಸಿಕ್ಕಿ ಬಿದ್ದಿರುವ ಇಬ್ಬರು ಪೆÇಲೀಸರನ್ನು ಕಲಬುರಗಿ ಪೆÇಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ಅವರು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಿದ್ದಾರೆ.
ಕಲಬುರಗಿ ನಗರದ ಎಂ.ಬಿ ನಗರದ ಪೆÇಲೀಸ್ ಠಾಣೆ ಸಿವಿಲ್ ಪೆÇಲೀಸ್ ಕಾನ್ಸಟೇಬಲ್ ಗುರುನಾಥ ಹಾಗೂ ಸಶಸ್ತ್ರ ಮೀಸಲು ಘಟಕದ ಕಾನ್ಸಟೇಬಲ್ ಮಡಿವಾಳಪ್ಪ ಅವರೇ ಅಮಾನತುಗೊಂಡವರು.
ಇವರು ಫೆ.17ರಂದು ಇಸ್ಪೀಟ್ ಜೂಜಾಟವಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಆಧರಿಸಿ ಚಿತ್ತಾಪುರ ಪಿಎಸ್’ಐ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ.
ಬಂಧಿತರಿಂದ 2750 ರೂ. ವಶಕ್ಕೆ ಪಡೆದುಕೊಂಡು ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೆÇಲೀಸ್ ಮೂಲಗಳಿಂದ ತಿಳಿದು ಬಂದಿದೆ.