Home ಜಿಲ್ಲೆ ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸಿ: ನಾಯಕ

ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸಿ: ನಾಯಕ

ಸೈದಾಪುರ:ಮಾ.೧೭: ಪಾಲಕರು ನಿಮ್ಮ ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ಬದಲು ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸಿ ಎಂದು ವಿದ್ಯಾವರ್ಧಕ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾತಪಿತ ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳಿಗೆ ಆಸ್ತಿ ಮಾಡಬೇಡಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಆಸಕ್ತಿ ಮತ್ತು ಬೌದ್ಧಿಕ ಮಟ್ಟಕ್ಕನುಗುಣವಾದ ಪರಿಸರವನ್ನು ನಿರ್ಮಿಸಿ ಕೊಟ್ಟರೆ ಅವರೇ ಎಂದು ಮುಗಿಯದ ಸಂಪನ್ಮೂಲದ ಆಸ್ತಿಯಾಗುತ್ತಾರೆ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ತಿಮ್ಮಾರೆಡ್ಡಿ ದೊರೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶರಣಿಕ ಕುಮಾರ ದೊಕಾ, ಕೆಪಿಸಿಸಿ ಸದಸ್ಯ ಚಂದ್ರಶೇಖರ್ ವಾರಾದ, ಡಿ.ಎಲ್.ಡಿ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ನಿವೃತ್ತ ಶಿಕ್ಷಕ ಸಿದ್ಧಲಿಂಗಯ್ಯ ಸ್ವಾಮಿ, ಯೋಗೇಶ ಕುಮಾರ ದೊಕಾ, ರಾಜೇಶಶೆಟ್ಟಿ, ಚಂದ್ರಶೇಖರ್ ಕರಣಿಗಿ, ರಮೇಶ ದೇವದುರ್ಗ, ಸಂತೋಷ.ಎನ್ ಮಂಗಳೂರು, ಮಹಾದೇವ, ಸಿದ್ಧಾರ್ಥ, ಮಲ್ಲಿಕಾರ್ಜುನ ಹಾಗೂ ಶಿಕ್ಷಕ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ಪಾಲಕ-ಪೋಷಕರು ಸೇರಿದಂತೆ ಇತರರಿದ್ದರು.