ಬೀದರ:ಸೆ.೧೬: ಬ್ರೆಡ್ಸ್ ಸಂಸ್ಥೆ ಬೆಂಗಳೂರು ಹಾಗೂ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ ಚಿಕಪೇಟ್ ಬೀದರ ಅವರ ಸಂಯುಕ್ತ ಆಶ್ರಯದಲ್ಲಿ ಕ್ಷಯರೋಗ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಜಾಗೃತಿ ಜಾಥಾ ದ್ವಿಚಕ್ರ ವಾಹನ ಶ್ರೀಮಂಡಲ ಗ್ರಾಮದ ಪಂಚಾಯತ ಕಚೇರಿಯಿಂದ ಆರಂಭಗೊAಡಿತ್ತು, ಗ್ರಾಮಾಂತರ ಪ್ರದೇಶಗಳಲ್ಲಿ ಸುತ್ತು ಹೋಗಿ ಘೋಷಣೆ ಮಾಡುವುದು ಹಾಗೂ ಸಾರ್ವಜನಿಕರಿಗೆ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವುದು ಪ್ರಧಾನ ಉದ್ದೇಶವಿತ್ತು.ಜಾಗೃತಿ ಜಾಥಾ ಮುಗಿದ ನಂತರ ಒಟ್ಟು ೯೬ ಜನರಿಗೆ ಜನರಲ್ ಚೆಕ್-ಅಪ್ ಮತ್ತು ಔಷಧಿ ವಿತರಣೆ ಮಾಡಲಾಯಿತು. ಜೊತೆಗೆ ಕಣ್ಣಿನ ತಪಾಸಣೆ, ಬಿಪಿ ಪರೀಕ್ಷೆ, ಸಕ್ಕರೆ ಕಾಯಿಲೆ ಪರೀಕ್ಷೆ ಸೇರಿದಂತೆ ಕ್ಷಯರೋಗದ ಕುರಿತ ಸಮಗ್ರ ಮಾಹಿತಿ ನೀಡಲಾಯಿತು.
ಕ್ಷಯರೋಗದ ಪ್ರಮುಖ ಲಕ್ಷಣಗಳು:ಮೂರು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮುವುದು, ಕಫದಲ್ಲಿ ರಕ್ತ ಕಾಣಿಸುವುದು,ತೂಕ ಇಳಿಕೆ,ಹಸು ಕಡಿಮೆ ಆಗುವುದು,ಸಿರಾಡುವಾಗ ಹಾಗೂ ಕೆಮ್ಮುವಾಗ ಎದೆ ಭಾಗದಲ್ಲಿ ನೋವು, ಜ್ವರ, ಶೀತ, ಆಯಾಸ ಮತ್ತಿತರ ಲಕ್ಷಣಗಳು ಕಂಡುಬAದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಈ ಕಾರ್ಯಕ್ರಮವು ಗ್ರಾಮೀಣ ಜನರಲ್ಲಿನ ಕ್ಷಯರೋಗದ ಜಾಗೃತಿ ಹೆಚ್ಚಿಸಲು ಮಹತ್ವಪೂರ್ಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

























