
ಕಲಬುರಗಿ:ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಸಂತರು ಕೇವಲ ಧಾರ್ಮಿಕ ವ್ಯಕ್ತಿಗಳಲ್ಲ, ಅವರು ಸತ್ಯ, ಸೇವೆ, ತ್ಯಾಗ, ಸಮಾನತೆ ಮತ್ತು ಮಾನವೀಯತೆಯ ದಾರಿ ದೀಪಗಳು ಎಂದು ಪ್ರವಚನ ಪಟುಗಳಾದ ಸಂಗಮೇಶ ಶಾಸ್ತ್ರೀ ಮಾಶಾಳ ಹೇಳಿದರು.ನಿನ್ನೆ ಕಲಬುರಗಿ ತಾಲ್ಲೂಕಿನ ಉಪಳಾ0ವ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ 13ನೇ ಜಾತ್ರಾ ಮಹೋತ್ಸವದ ನಿಮಿತ್ಯ ಬಬಲಾದ ಚನ್ನವೀರ ಶಿವಯೋಗಿಗಳ ಪ್ರವಚನದೊಂದಿಗೆ ಜೀವನ ದರ್ಶನ ಕಾರ್ಯಕ್ರಮದಲ್ಲಿ ಪ್ರವಚನ ಮಾಡುತ್ತ ಜೀವನದಲ್ಲಿ ಇಂತಹ ಸಂತರ ಆದರ್ಶಗಳು ಇಂದಿಗೂ ಬಹಳ ಪ್ರಸ್ತುತವಾಗಿವೆ.
ಸಂತರು ನಮಗೆ ಹೇಳಿದ ಮುಖ್ಯ ಸಂದೇಶವೆಂದರೆ ಮನುಷ್ಯನನ್ನು ಪ್ರೀತಿಸು, ಕಷ್ಟದಲ್ಲಿರುವವನಿಗೆ ಸಹಾಯ ಮಾಡು, ಸತ್ಯದ ದಾರಿಯಲ್ಲಿ ನಡೆ.ಗ್ರಾಮೀಣ ಸಮಾಜದಲ್ಲಿ ರೈತನು ಭೂಮಿಯನ್ನು ನಂಬಿ ಬದುಕುತ್ತಾನೆ. ಅದೇ ರೀತಿ ಸಂತರು ದೇವರ ಮೇಲೆ ನಂಬಿಕೆ ಇಟ್ಟು, ಕಷ್ಟದಲ್ಲಿಯೂ ಧೈರ್ಯ ಕಳೆದುಕೊಳ್ಳದೆ, ಸಮಾಜದ ಒಳಿತಿಗಾಗಿ ಬದುಕಿದರು ಎಂದು ಮಾರ್ಮಿಕವಾಗಿ ನುಡಿದರು. ಸಮಾರಂಭ ಉದ್ಘಾಟಿಸಿದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ
ಶರಣರು ಸರಳತೆ,
ಸೇವಾ ಮನೋಭಾವ,
ಸಮಾನತೆಯೊಂದಿಗೆ ನಡೆ, ನುಡಿ ಒಂದಾಗಿಸಿ ಜೀವನ ಸಾಗಿಸಿ ಅಮರವಾಗಿದ್ದಾರೆ.
ಪ್ರವಚನ ಗ್ರಾಮೀಣ ಭಾಗದ ಜನರ ಮನಸ್ಸನ್ನು ಒಂದು ಗುಡಿಸಿ ಸಂಸ್ಕಾರ ಸಮಾಜ ಕಟ್ಟುತ್ತದೆ ಎಂದು ಹೇಳಿದರು. ಉಮೇಶ ದೇಗಾಂವ, ಶಿವಲಿಂಗಪ್ಪ ಟೆಂಗಳಿ, ಚಂದ್ರಕಾಂತ ರೆಡ್ಡಿ, ಅಂಬಾರಾಯ ಶೇಳ್ಳಗಿ, ತಬಲಾವಾದಕರಾದ ಶಾಂತಲಿಂಗಯ್ಯ ಸ್ವಾಮಿ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು, ಮಹಿಳೆಯರು ಸೇರಿದಂತೆ ಅನೇಕ ಜನ ಭಾಗವಹಿಸಿದರು.































