ವಿಜಯಪುರ:ಅ.೧೩: ಸತ್ಯ ಮತ್ತು ಅಹಿಂಸೆ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಸಾಬೀತುಪಡಿಸಿ “ನನ್ನ ಜೀವನವೇ ನನ್ನ ಸಂದೇಶ”ಎAಬ ಮಹಾತ್ಮಾ ಗಾಂಧೀಜಿಯವರ ಜೀವನದ ಸಂದೇಶಗಳನ್ನು ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು ಎಂದು ರಾಜ್ಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಜ್ಯಾಧ್ಯಕ್ಷ ಬಾಪುಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು
ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಜರುಗಿದ ಮಹಾತ್ಮಾ ಗಾಂಧೀಜಿ ದತ್ತಿ. ದತ್ತಿ ದಾನಿಗಳು: ಅಧ್ಯಕ್ಷರು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆ ಖಾಸಗೇರಿ ವಿಜಯಪುರ. ವಿಷಯ: ಮಹಾತ್ಮಾ ಗಾಂಧೀಜಿಯವರ ಕುರಿತು ಉಪನ್ಯಾಸ.
ಶ್ರೀ ಸಂಗಪ್ಪ ಮ ಕಮದಾಳ ದತ್ತಿ ದತ್ತಿದಾನಿಗಳು: ಶ್ರೀಮತಿ ಶಶಿಕಲಾ ಹುಡೇದ. ವಿಷಯ: ಕನಕದಾಸರ ಸಾಹಿತ್ಯದ ಪ್ರಚಾರ.
ಶ್ರೀ ಮುರಗೋಡ ಮಹಾದೇವರು ದತ್ತಿ ದತ್ತಿದಾನಿಗಳು: ಶ್ರೀ ಸ.ಸ ಗುರುಪುತ್ರಪ್ಪ ಗುರುಪಾದಪ್ಪ ಮುರಗೋಡ ಅಧ್ಯಕ್ಷರು, ಟ್ರಸ್ಟ ಕಮೀಟಿ ಶ್ರೀ ಕ್ಷೇತ್ರ ಇಂಚಗೇರಿ ಮಠ. ವಿಷಯ: ಸ್ವಾತಂತ್ರ‍್ಯ ಹೋರಾಟದಲ್ಲಿ ಶ್ರೀ ಇಂಚಗೇರಿ ಮಠದ ಪಾತ್ರ ಎಂಬ ವಿಶೇಷ ದತ್ತಿಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಾತ್ಮಾ ಗಾಂಧೀಜಿಯವರ ಹೋರಾಟದ ಬದುಕು ಇಂದು ನಾವೆಲ್ಲ ಸ್ಮರಿಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಅಧಿಕಾರಿ ವೀರಪ್ಪ ಹುಡೇದ ಮಾತನಾಡಿ ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ದತ್ತಿಗೋಷ್ಠಿಗಳನ್ನು ಏರ್ಪಡಿಸಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದರು.
. ಮಹಾತ್ಮಾ ಗಾಂಧೀಜಿಯವರ ಕುರಿತು ಶಿಕ್ಷಕ ಯಮನಪ್ಪ ಪವಾರ ವಿಶೇಷ ಉಪನ್ಯಾಸ ನೀಡುತ್ತಾ ಮಾನವೀಯತೆ ಮೂಲಕ ಜನರ ಮನಸ್ಸನ್ನು ಬೆಸೆದು ಬಾಂಧವ್ಯವನ್ನು ಗಟ್ಟಿಮಾಡುವ ಮೂಲಕ, ಅಸ್ಪ್ರಶ್ಯರ ಕುರಿತು ತಿಳುವಳಿಕೆ ಮೂಡಿಸುವ,
ದ. ಆಫ್ರಿಕಾದಲ್ಲಿರುವ ಭಾರತೀಯರಿಗೆ ರಕ್ಷಣೆ, ಸತ್ಯ ಮತ್ತು ಅಹಿಂಸೆಯ ಮೂಲಕ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಜಯ ದೊರಕಿಸಿಕೊಟ್ಟ ಶ್ರೇಯಸ್ಸು ಗಾಂಧೀಜಿಯವರಿಗೆ ಸಲ್ಲುತ್ತದೆ ಎಂದರು.
“ಕನಕದಾಸರ ಸಾಹಿತ್ಯದ ಪ್ರಚಾರ ಕುರಿತು” ಉಪನ್ಯಾಸ ನೀಡಿ ಮಾತನಾಡಿದ ಶಿಕ್ಷಕಿ ಶರಣಮ್ಮ ಹಾದಿಮನಿ ಕನಕದಾಸರು ತಿಳಿಸಿಕೊಟ್ಟ ಭಕ್ತಿಯ ಮೂಲಕ ಮುಕ್ತಿ ಪಡೆಯುವ ಮಾರ್ಗವನ್ನು, ಕರ್ನಾಟಕ ಸಂಗೀತ ಪರಂಪರೆಯಲ್ಲಿ ಇವರೂ ಸಹ ಪುರಂದರದಾಸರೊAದಿಗೆ ದಾಸ ಸಾಹಿತ್ಯದ ಅಶ್ವೀನಿ ದೇವತೆಗಳಲ್ಲಿ ಒಬ್ಬರಾಗಿದ್ದು ಕನ್ನಡಿಗರಾದ ನಮಗೆಲ್ಲ ಹೆಮ್ಮೆ ಎಂದರು.
“ಸ್ವಾತಂತ್ರ‍್ಯ ಹೋರಾಟದಲ್ಲಿ ಶ್ರೀ ಇಂಚಗೇರಿ ಮಠದ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಶರಣ ಸಾಹಿತ್ಯದ ಚಿಂತಕ ಸಿದ್ದಲಿಂಗಪ್ಪ ಹದಿಮೂರ ಮಾತನಾಡಿ ಇಂಚಗೇರಿ ಮಠವು ಸ್ವಾತಂತ್ರ‍್ಯ ಹೋರಾಟದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟ ನಡೆಸುವ ಮೂಲಕ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಅಂತರ್ಜಾತೀಯ ಮತ್ತು ಅಂತರ್ಧರ್ಮೀಯ ವಿವಾಹಗಳನ್ನು ನಡೆಸುವ ಮೂಲಕ ಜಾತ್ಯತೀತ ಸಾಮರಸ್ಯದ ಮನೋಭಾವಕ್ಕೆ ಹೆಸರುವಾಸಿಯಾದ ಶ್ರೀ ಮಠದ ಮಾಧವಾನಂದ ಪ್ರಭೂಜಿ (ಮಹಾದೇವಪ್ಪ ಮುರಗೋಡ) ಯವರ ನೇತ್ರತ್ವದಲ್ಲಿ ಸಶಸ್ತ್ರ ಹೋರಾಟದಲ್ಲಿ ಇಂಚಗೇರಿ ಮಠದ ಅನನ್ಯ ಪಾತ್ರವನ್ನು ನಾವೆಲ್ಲರೂ ಸ್ಮರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಸದಸ್ಯೆ ದಾಕ್ಷಾಯಣಿ ಹುಡೇದ, ಅಮರೇಶ್ವರ ವಿ.ವಿ.ಸಂಘದ ಅಧ್ಯಕ್ಷ ಬಿ.ಎಸ್.ನವಲಿ, ಸಾಮಾಜಿಕ ಚಿಂತಕ ಇಸಾಕ ಪಠಾಣ ಉಪಸ್ಥಿತರಿದ್ದು ಮಾತನಾಡಿದರು
ಶಶಿಕಲಾ ನಾಯ್ಕೋಡಿ ಹಾಗೂ ಸುನಂದಾ ಕೋರಿ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಸ್ವಾಗತಿಸಿ ಗೌರವಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೖಲಾ ಬಳಗಾನೂರ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಕಸಾಪ ಜಿಲ್ಲಾ ಪದಾಧಿಕಾರಿಗಳಾದ ಸುಖದೇವಿ ಅಲಬಾಳಮಠ, ಜಯಶ್ರೀ ಹಿರೇಮಠ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ. ಎಸ್. ಕಣಕಾಲಮಠ ಸೇರಿದಂತೆ ಶ್ರೀ ಬಿ.ಎಂ.ಆಜೂರ, ಬಿ.ಕೆ. ಗೋಟ್ಯಾಳ, ಲತಾ ಗುಂಡಿ, ಗಂಗಮ್ಮ ರಡ್ಡಿ, ಮಹಾದೇವ ಮೋಪಗಾರ,ಕೆ.ಎಸ್ ಹಣಮಾಣಿ, ಜಿ. ಎಸ್ ಬಳ್ಳೂರ, ಶಿವಾಜಿ ಮೋರೆ, ರಾಜೇಶ್ವರಿ ಮೋಪಗಾರ, ಶಾಂತಾ ವಿಭೂತಿ,, ವಿಠ್ಠಲ ಶಿಂಧೆ, ಮೆಹತಾಬ ಕಾಗವಾಡ, ಸಾವಿತ್ರಿ ಪತ್ತಾರ, ಗುರಮ್ಮ ಹಿರೇಮಠ, ಆನಂದರಾವ ಕುಲಕರ್ಣಿ, ಸಿದ್ದಣ್ಣ ಸಾತಲಗಾಂವ, ಬಸವರಾಜ ನವಲಿ, ಪೀರಾಸಾಹೇಬ ವಾಲೀಕಾರ, ಅಶೋಕ ಕೂಬರಡ್ಡಿ, ಬಿ. ಆರ್ ಉಮೇಶ, ದಾಕ್ಷಾಯಣಿ ಬಿರಾದಾರ, ಎಮ್. ಎಚ್. ಪಠಾಣ,ಶಿವಲೀಲಾ ಹಿರೇಮಠ, ಎಸ್.ಜಿ. ಏಳಂಗಡಿ, ಶ್ರೀಮಂತ ಗೆಜ್ಜಿ, ನಿಶ್ಚಲ ಕರಡಿ, ಮಲ್ಲಿಕಾರ್ಜುನ ಕೆಳಗಡೆ, ಆರ್. ಎಸ್ ವಾಲೀಕಾರ, ಪಿ.ಸಿ.ಕವಟಗಿ, ಎಸ್. ಆರ್ ಬೀಳಗಿ,ಎನ್.ಎಸ್ ಬಿರಾದಾರ, ಎಂ.ಜಿ.ಕುಚಬಾಳ, ಶ್ರೀಕಾಂತ ನಾಡಗೌಡ, ಅಮೋಘಸಿದ್ಧ ಪೂಜಾರಿ, ಎಂ.ಬಿ.ಮಾಶೆಟ್ಟಿ, ಚಂದ್ರಶೇಖರ ಸರೂರ, ಎಸ್.ಎಂ.ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


























