ಚೀನಾ ಮೇಲಿನ ಶೇ.೧೦ ಸುಂಕ ಇಳಿಸಿದ ಟ್ರಂಪ್

ಸಿಯೋಲ್,ಅ,೩೧- ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಪುನರ್ ಆರಂಭಿಸುವ ಕುರಿತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ಮಾತುಕತೆಯ ಫಲಪ್ರದವಾಗಿ ಚೀನಾ ಮೇಲಿನ ಶೇಕಡಾ ೧೦ ರಷ್ಟು ತೆರಿಗೆ ಇಳಿಸಲು ನಿರ್ಧರಿಸಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ


ಚೀನಾದಲ್ಲಿ ದೊರೆಯುವ ಅಪರೂಪರ ಖನಿಜ ಸೇರಿವಂತೆ ವಿವಿಧ ವಿಷಯಗಳಲ್ಲಿ ಉಭಯ ದೇಶಗಳ ನಡುವೆ ಮಾತುಕತೆ ನಡೆಸಿದ್ದು ಚೀನಾದಿಂದ ಮೊದಲ ಹಂತವಾಗಿ ಸೋಯಾಬೀನ್ ಖರೀದಿ ಪುನರಾರಂಭಿಸಲು ಅಮೆರಿಕಾ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.


ದಕ್ಷಿಣದ ಕೊರಿಯಾದ ಸಿಯೋಲ್‌ನಲ್ಲಿ ನಡೆದ ಮಾತಕತೆ ಬಳಿಕಸುದ್ದಿಗಾರೊಂದಿಗೆ ಮಾತನಾಡಿದ ಅವರು ಚೀನಾದೊಂದಿಗೆ ಬಹುರಂಗಗಳಲ್ಲಿ ಪ್ರಗತಿ ಸಾಧಿಸಲಾಗಿದೆ ಇದಕ್ಕೆ ಪ್ರತಿಯಾಗಿ ಚೀನಾದ ಮೇಲಿನ ಸುಂಕವನ್ನು ಶೇಕಡಾ ೧೦ ರಷ್ಟು ಇಳಿಕೆ ಮಾಡಿದ್ದು ಸದ್ಯ ಚೀನಾದ ಮೇಲೆ ಶೇ ೪೭ ಕ್ಕೆ ತೆರಿಗೆ ಇಳಿಸಲಾಗಿದೆ ಎಂದಿದ್ದಾರೆ.


ಜಗತ್ತಿನಲ್ಲಿ, ಇನ್ನೂ ಅನೇಕ ಸಮಸ್ಯೆಗಳಿವೆ, ಮತ್ತು ಚೀನಾ ಮತ್ತು ಅಮೆರಿಕಾ ಜಂಟಿಯಾಗಿ ಪ್ರಮುಖ ದೇಶಗಳ ಜವಾಬ್ದಾರಿ ಹೊತ್ತುಕೊಂಡು ಅವುಗಳನ್ನು ಬಗೆಹರಿಸಬಹುದು ಎಂದು ಹೇಳಿದ್ದಾರೆ.


ಜಗತ್ತಿನ ಎರಡು ಪ್ರಮುಖ ಆರ್ಥಿಕ ದೇಶಗಳಾದ ಅಮೆರಿಕಾ ಮತ್ತು ಚೀನಾ ಒಟ್ಟಿಗೆ ಸೇರಿದಂತೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು ಎಂದು ಹೇಳಿದ ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ದ ನಿಲ್ಲಿಸಲು ಇದು ಸಕಾಲ ಎಂದಿದ್ದಾರೆ.


ಎರಡೂ ದೇಶಗ ನಡುವೆ ನಡೆದ ವ್ಯಾಪಾರ ಪರಿಹಾರದ ಮೇಲೆ ಮಾತ್ರ ಕೇಂದ್ರೀಕರಿಸಿದವು. “ಜಿ-೨ ಶೀಘ್ರದಲ್ಲೇ ಸಭೆ ಸೇರಲಿದೆ,” ಅಲ್ಲಿ ಅಮೇರಿಕಾ ಮತ್ತು ಚೀನಾ ನಡುವೆ ವಿಸೃತ ಚರ್ಚೆ ನಡೆಸಲಿದೆ ಎಂದು ತಿಳಿಸಿದ್ದಾರೆ.


ಅಮೆರಿಕದ ಏಷ್ಯಾದ ಮಿತ್ರರಾಷ್ಟ್ರಗಳು, ವಿಶೇಷವಾಗಿ ಜಪಾನ್ ಮತ್ತು ದಕ್ಷಿಣ ಕೊರಿಯಾ, ಟ್ರಂಪ್ ಅವರ ಪೊಸ್ಟ್ ಅಮೆರಿಕದ ಕಾರ್ಯತಂತ್ರದಲ್ಲಿನ ಬದಲಾವಣೆ ಕುರಿತು ಕೂಡ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.