ವಲಸಿಗರಿಗೆ ಟ್ರಂಪ್ ಮೂಗುದಾರ

ವಾಷಿಂಗ್ಟನ್,ಜು.೫:ಅಮೆರಿಕದಲ್ಲಿರುವ ಭಾರತೀಯರೂ ಸೇರಿದಂತೆ ವಲಸಿಗರು ಸ್ವದೇಶಕ್ಕೆ ಕಳುಹಿಸುವ ಹಣಕ್ಕೆ ಹೆಚ್ಚಿನ ತೆರಿಗೆ ವಿಧಿಸುವ
ಗ್ರೀನ್‌ಕಾರ್ಡ್ ಲಾಟರಿ ವ್ಯವಸ್ಥೆ ರದ್ದು, ಬುದ್ಧಿವಂತರಿಗೆ ಮಾತ್ರ ವೀಸಾ ಹೀಗೆ ವಲಸಿಗರ ಮೇಲೆ ಹಲವು ನಿರ್ಬಂಧಗಳನ್ನು ಒಳಗೊಂಡಿರುವ ಒನ್ ಬಿಗ್ ಬ್ಯೂಟಿಫುಲ್ ಮಸೂದೆಗೆ ಅಮೆರಿಕ ಸಂಸತ್ ಒಪ್ಪಿಗೆ ನೀಡಿದ್ದು,ಈ ಮಸೂದೆ ಭಾರತದ ಮೇಲೂ ಪರಿಣಾಮ ಬೀರಲಿದೆ.


ಈ ಮಸೂದೆ ಜಾರಿಯಿಂದ ಅಮೆರಿಕದಲ್ಲಿರುವ ಭಾರತೀಯರು ಸ್ವದೇಶಕ್ಕೆ ರವಾನಿಸುವ ಹಣಕ್ಕೆ ಹೆಚ್ಚಿನ ತೆರಿಗೆ, ಲಾಟರಿ ಮೂಲಕ ಗ್ರೀನ್‌ಕಾರ್ಡ್ ವಿತರಣೆ ರದ್ದು, ಅಮೆರಿಕಕ್ಕೆ ಬರುವ ವಲಸಿಗರು ಹೆಂಡತಿ-ಮಕ್ಕಳನ್ನು ಬಿಟ್ಟು ಬೇರೆ ಕುಟುಂಬ ಸದಸ್ಯರನ್ನು ಕರೆತರದಂತೆ ಈ ಮಸೂದೆ ನಿರ್ಬಂಧ ಹೇರಲಿದ್ದು, ಇನ್ನು ಮುಂದೆ ಅಮೆರಿಕಾಗೆ ಶಿಕ್ಷಣಕ್ಕೆ ಹೋಗುವವರಿಗೂ ವೀಸಾ ಸಿಗುವುದು ಕಷ್ಟವಾಗಲಿದೆ.


ಅಮೆರಿಕದ ಸಂಸತ್ತಿನಲ್ಲಿ ಸುಮಾರು ೨೭ ಗಂಟೆಯ ಚರ್ಚೆಯ ಬಳಿಕ ಈ ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ಕಳೆದ ಮಂಗಳವಾರ ಅಮೆರಿಕದ ಸೆನೆಟ್‌ನಲ್ಲಿ ಈ ಮಸೂದೆ ಬಗ್ಗೆ ನಡೆದ ಮತದಾನದಲ್ಲಿ ೫೦-೫೦ ಮತಗಳು ಬಂದಿದ್ದವು. ಈ ವೇಳೆ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಟೈ-ಬ್ರೇಕಿಂಗ್ ಮತವನ್ನು ಮಸೂದೆ ಪರ ಚಲಾಯಿಸಿದರು ಇದರಿಂದ ಮಸೂದೆಯೂ ೫೦-೫೦ ಅಂಗೀಕಾರವಾಯಿತು.


ಅಮೆರಿಕದ ಸಂಸತ್(ಹೌಸ್ ಆಫ್ ರೆಪ್ರಸೆಂಟೆಟಿವ್)ನಲ್ಲಿ ಗುರುವಾರ ನಡೆದ ಮತದಾನದಲ್ಲಿ ಮಸೂದೆ ಪರ ೨೧೮ ಮತ್ತು ವಿರುದ್ಧ ೨೧೪ ಮತಗಳ ಚಲಾವಣೆಯಾಗಿದ್ದು, ೪ ಮತಗಳಿಂದ ಮಸೂದೆಗೆ ಹೌಸ್ ರೆಪ್ರಸೆಂಟೆಟಿವ್ ಅಂಗೀಕಾರ ನೀಡಿತು.


ಈ ಮಸೂದೆ ಭಾರತದ ಮೇಲೆ ಪರಿಣಾಮ ಬೀರಲಿದ್ದು, ಅಮೆರಿಕದಲ್ಲಿರುವ ಭಾರತೀಯರು ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ ಅದರ ಮೇಲೆ ಹೆಚ್ಚಿನ ತೆರಿಗೆ ಬೀಳಲಿದೆ.ಅಂದ್ರೆ ಭಾರತೀಯರು ರವಾನಿಸುವ ಹಣಕ್ಕೆ ಶೇ.೩.೫ರಷ್ಟು ತೆರಿಗೆ ಇರಲಿದೆ.


ಈ ತೆರಿಗೆಯು ಹೆಚ್೧-ಬಿ ಎಲ್-೧, ಎಫ್-೧, ವೀಸಾ ಹಾಗೂ ಗ್ರೀನ್‌ಕಾರ್ಡ್ ಹೊಂದಿರುವವರಿಗೆ ಅನ್ವಯವಾಗಲಿದೆ.


ತೆರಿಗೆ ಹೊರೆಯ ಜೊತೆಗೆ ವಲಸಿಗರು ಇನ್ನು ಮುಂದೆ ಅಮೆರಿಕಕ್ಕೆ ತಮ್ಮ ಜೊತೆ ಹೆಂಡತಿ-ಮಕ್ಕಳನ್ನು ಮಾತ್ರವೇ ಕರೆತರಬಹುದು. ಇತರ ಸದಸ್ಯರನ್ನು ಕರೆತರಲು ಈ ಮಸೂದೆಯಲ್ಲಿ ಅವಕಾಶವಿಲ್ಲ.


ಈ ಮಸೂದೆ ಜಾರಿ ಮೂಲಕ ಗ್ರೀನ್‌ಕಾರ್ಡ್ ಲಾಟರಿ ವ್ಯವಸ್ಥೆಯನ್ನು ರದ್ದು ಮಾಡಲಾಗಿದ್ದು, ಅಮೆರಿಕ್ಕೆ ವಲಸೆ ಬರಲು ಆಯ್ದ ದೇಶಗಳ ಜನರಿಗೆ ಲಾಟರಿ ಮೂಲಕ ಗ್ರೀನ್‌ಕಾರ್ಡ್ ನೀಡಲಾಗುತ್ತಿತ್ತು. ಈ ಮಸೂದೆ ಜಾರಿಯಿಂದ ಲಾಟರಿ ಮೂಲಕ ಗ್ರೀನ್‌ಕಾರ್ಡ್ ನೀಡುವುದು ರದ್ದಾಗಲಿದೆ. ಹಾಗೆಯೇ ಇನ್ನು ಮುಂದೆ ಅಮೆರಿಕಾಗೆ ವಲಸೆ ಹೋಗಬೇಕಾದಲ್ಲಿ ಶಿಕ್ಷಣ ಮತ್ತು ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಲಿದೆ. ಹಾಗಾಗಿ ಅಮೆರಿಕಕ್ಕೆ ಹೋಗುವವರಿಗೆ ಇನ್ನು ಮುಂದೆ ವೀಸಾ ಸಿಗುವುದು ಕಷ್ಟವಾಗಲಿದೆ.


ಟ್ರಂಪ್ ಸಂತಸ


ಅಮೆರಿಕದ ಸ್ವಾತಂತ್ರ್ಯ ದಿನವಾದ ಜು.೪ರ ಒಳಗೆ ಈ ಶಾಸನವನ್ನು ಜಾರಿಗೊಳಿಸುವುದು ಟ್ರಂಪ್ ಆಡಳಿತದ ಮುಖ್ಯ ಗುರಿಯಾಗಿದೆ. ಅದರಂತೆ ಈ ಮಸೂದೆ ಜಾರಿಯಾಗಿದ್ದು ಇದು ಟ್ರಂಪ್ ಆಡಳಿತಕ್ಕೆ ದೊರೆತ ಪ್ರಮುಖ ವಿಜಯವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.


ಈ ಕ್ರಾಂತಿಕಾರಕ ಮಸೂದೆಗೆ ಸಹಿ ಹಾಕಿದ ಟ್ರಂಪ್ ಅವರು ನಾವು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಸ್ವಾತಂತ್ರ್ಯ ದಿನ ಸಿಕ್ಕ ಪ್ರಜಾಪ್ರಭುತ್ವದ ವಿಜಯ. ಇದರಿಂದ ಜನ ಸಂತೋಷವಾಗಿದ್ದಾರೆ ಎಂದು ಟ್ರಂಪ್ ಹೇಳಿ, ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿನ ರಿಪಬ್ಲಿಕನ್ನರು ಒಂದು ದೊಡ್ಡಸುಂದರ ಮಸೂದೆಯನ್ನು ಕಾಯ್ದೆಯಾಗಿ ಅಂಗೀಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅಮೆರಿಕದ ಷರತ್ತುಗಳಿಗೆ ಮೋದಿ ಬಾಗುತ್ತಾರೆ:ರಾಹುಲ್


ಭಾರತದ ಸರಕುಗಳಿಗೆ ಅಮೆರಿಕ ಹೆಚ್ಚಿನ ಸುಂಕ ವಿಧಿಸುವ ಪ್ರಸ್ತಾವದ ಗಡುವು ಹತ್ತಿರವಾಗುತ್ತಿದ್ದು, ಪ್ರಧಾನಿ ಮೋದಿ ಅವರು ಟ್ರಂಪ್ ಅವರ ಮಾತುಗಳಿಗೆ ಬಾಗುತ್ತಾರೆ ಎಂದು ರಾಹುಲ್‌ಗಾಂಧಿ ಟೀಕಿಸಿದ್ದಾರೆ. ಅಮೆರಿಕದ ಉತ್ಪನ್ನಗಳಿ

ಗೆ ಭಾರತ ಹೆಚ್ಚಿನ ಸುಂಕವಿಧಿಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತದ ಸರಕುಗಳ ಮೇಲೆ ಶೇ. ೨೬ ರಷ್ಟು ಸುಂಕವನ್ನು ವಿಧಿಸಲು ಮುಂದಾಗಿತ್ತು.
ಜು. ೯ರ ವರೆಗೂ ಟ್ರಂಪ್ ಗಡುವು ನೀಡಿ ಭಾರತ ಅಮೆರಿಕ ಸರಕುಗಳ ಮೇಲಿನ ಸುಂಕ ಕಡಿಮೆಮಾಡಬೇಕು. ಇಲ್ಲದಿದ್ದರೆ ನಾವು ಹೆಚ್ಚಿನ ತೆರಿಗೆ ವಿಧಿಸುತ್ತೇವೆ ಎಂದು ಹೇಳಿದ್ದರು.ಇದಾದ ಬಳಿಕ ೨ ದೇಶಗಳು ವ್ಯಾಪಾರ ಒಪ್ಪಂದ ಕುರಿತಂತೆ ಮಾತುಕತೆಗಳನ್ನು ನಡೆಸಿದ್ದವು.


ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ಗೋಯಲ್ ಅವರು ಯಾವುದೇ ವ್ಯಾಪಾರ ಒಪ್ಪಂದ ನ್ಯಾಯಯುತ ಮತ್ತು ರಾಷ್ಟ್ರೀಯ
ಹಿತಾಸಕ್ತಿಯ ರಕ್ಷಣೆ ಇದ್ದರೆ ಮಾತ್ರ ಅಂತಹ ಒಪ್ಪಂದಗಳಿಗ ಭಾರತ ಸಹಿ ಹಾಕುತ್ತಿದೆ. ರಾಷ್‌ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಅದನ್ನು ಒಪ್ಪಲ್ಲ ಎಂದು ಹೇಳಿದ ಬೆನ್ನಲ್ಲೆ ಕಾಂಗ್ರೆಸ್ ನಾಯಕ ರಾಹುಲ್ ಪ್ರಧಾನಿ ಮೋದಿ ಟ್ರಂಪ್ ಮಾತುಗಳಿಗೆ ಸೌಮ್ಯವಾಗಿ ತಲೆಬಾಗುತ್ತಾರೆ ಎಂದು ಟೀಕಿಸಿದ್ದಾರೆ.