
ಕಾಳಗಿ : ಅಧಿಕಾರ ಮತ್ತು ಸೇವೆ ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ನಿಜವಾದ ಸಾಮರಸ್ಯ ಹಾಗೂ ಶಾಂತಿ ನೆಲೆಸಲು ಸಾಧ್ಯ ಅಧಿಕಾರ ಎನ್ನುವುದು ಕೇವಲ ಆಡಳಿತ ನಡೆಸುವ ಸಾಧನವಾಗದೆ ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಸೇವೆಯಾದಾಗ ಸಾಮರಸ್ಯ ಮೂಡುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ. ಚನ್ನವೀರ ಶಿವಾಚಾರ್ಯರು ಹೇಳಿದರು.
ಹಾರಕೂಡ ಚನ್ನಬಸವೇಶ್ವರ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಕಾಳಗಿ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧಿಕಾರದಲ್ಲಿರುವವರು ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಂಡು ಗೌರವಿಸಿದಾಗ ಸಮಾಜದಲ್ಲಿನ ಭೇದಭಾವಗಳು ದೂರಾಗುತ್ತವೆ. ನಿಸ್ವಾರ್ಥ ಸೇವೆ ಮತ್ತು ಪ್ರಾಮಾಣಿಕತೆ ಜನರಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ. ಇದು ಪರಸ್ಪರ ಸೌಹಾರ್ದತೆಗೆ ದಾರಿಯಾಗುತ್ತದೆ. ಸಮಾಜದ ವಿವಿಧ ಸಮುದಾಯಗಳ ನಡುವೆ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಅಧಿಕಾರದ ಬಲದಿಂದಲ್ಲದೆ ಸ್ನೇಹಪರ ಮಾತುಕತೆ ಮತ್ತು ಸೇವೆಯ ಮನೋಭಾವದಿಂದ ಬಗೆಹರಿಸಿದಾಗ ಸಾಮರಸ್ಯ ಗಟ್ಟಿಯಾಗುತ್ತದೆ ಎಂದರು.
ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಮಹಮ್ಮದ್ ಗುಡುಸಾಬ್ ಮಾತನಾಡಿದರು.
ಪಟ್ಟಣ ಪಂಚಾಯತ ನೂತನ ಅಧ್ಯಕ್ಷೆ ಸಾಲಿಯಾಬೇಗಂ, ಉಪಾಧ್ಯಕ್ಷ ಶರಣು ಬೇಲೂರ, ಬಸವರಾಜ ಮಡಿವಾಳ, ಗುರುರಾಜ ಮದ್ದೂರ, ಮಲ್ಲಿನಾಥ ಹಿರೇಮಠ, ಇಬ್ರಾಹಿಂ ಪಾಷಾ, ಅಸ್ಲಾಂ ಬೇಗ್ ಬಿಜಾಪುರ್, ಮುನಿರ ಬೇಗ್ ಬಿಜಾಪುರ್, ಸತೀಶ ಕಮಲಾಪುರ, ವೇದಪ್ರಕಾಶ ಮೋಟಗಿ, ಪರಮೇಶ್ವರ ಮಡಿವಾಳ, ಸಂತೋಷ ನರನಾಳ, ಸಂತೋಷ ಪತಂಗೆ, ಸಂತೋಷ ಕಡಬೂರ, ಮಹೇಶ ಗುತ್ತೇದಾರ, ಸಂಗಮೇಶ ಬಡಿಗೇರ ಸೇರಿದಂತೆ ಅನೇಕರಿದ್ದರು.





















